ಶಿವಮೊಗ್ಗ,
ನಾವು ಮಾತಾಡುವುದಕ್ಕಿಂತ ನಾವು ಮಾಡಿದ ಕೆಲಸಗಳೇ ಮಾತನಾಡಬೇಕು ಎಂಬುದನ್ನು ದೇಶೀಯ ವಿದ್ಯಾಶಾಲಾ ಸಮಿತಿ ತೋರಿಸಿಕೊಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎಂ.ಎಲ್. ವೈಶಾಲಿ ಹೇಳಿದ್ದಾರೆ.


ಅವರು ಇಂದು ನಗರದ ದುರ್ಗಿಗು ಡಿಯ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜ್ ವತಿಯಿಂದ ದುರ್ಗಿಗುಡಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃ ದ್ಧಿಯ ಹಿತದೃಷ್ಠಿಯಿಂದ ಮಾಡಿಕೊಂಡಿ ರುವ ಒಡಂಬಡಿಕೆಯನ್ವಯ ಇಂದು ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 15 ಬೆಂಚ್, 15 ಡೆಸ್ಕ್ ಹಾಗೂ ಅವಶ್ಯಕ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ ಕೊಡುಗೆ ರೂಪದಲ್ಲಿ ವಿತರಣೆ ಮಾಡಿ ಮಾತನಾಡಿದರು.


ಡಿವಿಎಸ್ ಸಂಸ್ಥೆ ಉತ್ತಮ ಗುಣ ಮಟ್ಟದ ಸಾಮಗ್ರಿಗಳನ್ನು ನೀಡಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ 353 ಶಾಲೆಗಳಲ್ಲಿ ಸುಣ್ಣ ಬಣ್ಣ ಅಭಿಯಾನ ಮಾಡಿ ದಾಗ ಸ್ಥಳೀಯ ನಾಗರಿಕರು ಮತ್ತು ಗ್ರಾಮ ಪಂಚಾಯಿತಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪ್ರಯತ್ನದಿಂದ ಶಾಲೆಗಳಿಗೆ ಬಣ್ಣ ಹಚ್ಚುವ ಮತ್ತು ಸಣ್ಣ ಪುಟ್ಟ ಅಭಿವೃದ್ಧಿ ಮಾಡುವ ಕೆಲಸವಾಗಿತ್ತು ಎಂದರು.


ಡಿವಿಎಸ್ ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಮಾತನಾಡಿ, ಸಂಸ್ಥೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಪದವೀಧರರ ಸಹಕಾರ ಸಂಘದ ಮೂಲಕವೂ ಶಾಲಾ ಆಡಳಿತ ಮನವಿ ಸಲ್ಲಿಸಿದರೆ ಸುಮಾರು ೬೦ ಸಾವಿರ ರೂ. ವೆಚ್ಚದ ವಾಟರ್ ಫಿಲ್ಟರ್ ಕೊಡುವುದಾಗಿ ಭರವಸೆ ನೀಡಿದರು.


ಡಿವಿಎಸ್ ಅಧ್ಯಕ್ಷ ಕೊಳಲೆ ರುದ್ರೇಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪಾಲಾಕ್ಷಪ್ಪ, ಡಿಡಿಪಿಐ ಪರಮೇಶ್ವರಪ್ಪ, ಬಿಇಒ ನಾಗರಾಜ್, ಡಿವಿಎಸ್ ಪದಾಧಿಕಾರಿಗಳಾದ ಎಸ್. ರಾಜಶೇಖರ್, ಗೋಪಿನಾಥ್, ಬಸಪ್ಪಗೌಡ, ಪ್ರಾಂಶುಪಾಲ ವೆಂಕಟೇಶ್, ಟಿ.ಕೆ. ಶ್ರೀಧರ್, ಸತೀಶ್ ಶೆಟ್ಟಿ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!