ಶಿವಮೊಗ್ಗ,
ಇಂದಿನ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿ ಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅಗತ್ಯವಾಗಿ ವಿದ್ಯಾ ಸಂಸ್ಥೆಗಳ ಅವಶ್ಯಕವಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದರು.


ಅವರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಡಿ.ವಿ.ಎಸ್ ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.


ಸಮಾರಂಭದ ಮುಖ್ಯ ಅತಿಥಿಗಳಾಗಿ ಡಿ.ವಿ.ಎಸ್. ವಿದ್ಯಾ ಸಂಸ್ಥೆಯ ಶ್ರೀ ರುದ್ರಪ್ಪ ಕೊಳಲೆ ಯವರು ಮಾತನಾಡಿ. ನಮ್ಮ ವಿದ್ಯಾಸಂಸ್ಥೆಯ ಮೂಲಕ ಇಂತಹ ಒಂದು ಕಾರ್ಯಕ್ರಮ ನಡೆಸಿರುವುದು ತುಂಬಾ ಹೆಮ್ಮೆ ವಾಣಿಜ್ಯ ಸಂಘದ ಈ ಗೌರವಕ್ಕೆ ನಾನು ತುಂಬಾ ಅಭಾರಿ ಎಂದು ತಿಳಿಸಿದರು.


ಡಿ.ವಿ.ಎಸ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ ದಿನೇಶ್ ಮಾತನಾಡಿ, ಜಿಲ್ಲಾ ವಾಣಿಜ್ಯ ಸಂಘದ ಜೊತೆ ಮುಂದಿನ ದಿನಗಳಲ್ಲಿ ನಮ್ಮ ಸಹಕಾರ ಇರುವುದಾಗಿ ಸಂಘದ ಆಡಳಿತ ಮಂಡಳಿಗೆ ತಿಳಿಸಿದರು.


ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಸತೀಶ್ ಕುಮಾರ್ ಶೆಟ್ಟಿ, ಪ್ರಾಂಶುಪಾಲ ವೆಂಕಟೇಶ್, ಶಿವಮೊಗ್ಗ ಕೌಶಲ್ಯಾ ಭಿವೃದ್ದಿ ಇಲಾಖೆಯ ಸುರೇಶ್, ಕೌಶಲ್ಯಾಬಿವೃದ್ದಿ ಸಮಿತಿ ಛೇರ‍್ಮನ್ ಗಣೇಶ್ ಎಂ. ಅಂಗಡಿ, ಮಾಜಿ ಅಧ್ಯಕ್ಷರಾದ ಡಿ.ಎಂ. ಶಂಕರಪ್ಪ ಇತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!