ಶಿವಮೊಗ್ಗ,
ಶುಭಮಂಗಳ ಸಮುದಾಯ ಭವನದಲ್ಲಿ ಜೂ. 21 ರಂದು ಬೆಳಗ್ಗೆ 8.30 ರಿಂದ 8.30 ರವರೆಗೆ 8 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಭಜನಾ ಸಮಿತಿ ಅಧ್ಯಕ್ಷ ಶಬರೀಶ್ ಕಣ್ಣನ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ನಗರದ ಆರ್ಟ್ ಆಫ್ ಲಿವಿಂಗ್, ಸುಮೇರು ಯೋಗ ಕೇಂದ್ರ, ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್, ಅಮೃತ ಯೋಗ ಕೇಂದ್ರ, ಚಿರಂತನಾ ಯೋಗ ಹಾಗೂ ಸಂಗೀತ ಟ್ರಸ್ಟ್, ಸಪ್ತಬಿಂದು ಯೋಗ ಮಂದಿರ, ನಿಹಾರಿಕಾ ಯೋಗ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಯೋಗ ದಿನಾಚರಣೆ ಆಯೋಜಿಸಲಾಗಿದೆ ಎಂದರು.


ಯೋಗ ಹಬ್ಬಕ್ಕೆ ಶ್ರೀ ಶೈನೈಶ್ವರ ಸ್ವಾಮಿ ಯೋಗ ಸಮಿತಿ ಟ್ರಸ್ಟ್, ಪರೋಪಕಾರಂ ಸಂಸ್ಥೆ, ಜೆಸಿಐ ಶಿವಮೊಗ್ಗ, ಮಲ್ನಾಡ್ ಜೆಸಿಐ ಶಿವಮೊಗ್ಗ, ಚಿರಂತನ ಹಾಗೂ ಭಜನಾ ಪರಿಷತ್(ಶಿವಮೊಗ್ಗ ನಗರದ ಭಜನಾ ಮಂಡಳಿಗಳ ಒಕ್ಕೂಟ) ಇವರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.


ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ, ಸೂರ್ಯ ನಮಸ್ಕಾರ, ಆಸನ, ಪ್ರಾಣಾಯಾಮ, ಧ್ಯಾನ ನಂತರ ಉಪನ್ಯಾಸ, ಗುವಂದನಾ ಕಾರ್ಯಕ್ರಮ ಜರುಗಲಿದೆ. ಮಾನಸಿಕ ಹಾಗೂ ನರರೋಗ ತಜ್ಞ ಡಾ. ಎಸ್.ಟಿ. ಅರವಿಂದ್ ಅವರಿಂದ ಮನೋಸ್ಪೂರ್ತಿ ಕುರಿತು ವಿಶೇಷ ಉಪನ್ಯಾಸ ಇರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಪಾಲಿಕೆ ಸದಸ್ಯ ರಾಹುಲ್ ಬಿದರೆ ಭಾಗವಹಿಸಲಿದ್ದಾರೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಶಬರೀಶ್ ಕಣ್ಣನ್ ಮೊ. 99640 72793, ಮೊ 98866 74375ಮೊ. ಸಂಪರ್ಕಿಸಬಹುದು.


ಪತ್ರಿಕಾಗೋಷ್ಠಿಯಲ್ಲಿ ಕೆ.ಇ. ಕಾಂತೇಶ್, ಪ್ರದೀಪ್, ಶ್ರೀಧರ್, ಶ್ರೀಧರ ಪರೋಪಕಾರಂ, ಮೂರ್ತಿ, ಶೈಲಜಾ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!