ಸಾಗರ, ಜೂ.೧೪:
ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂ ಡಿರುವ ಘಟನೆ ತಾಲೂಕಿನ ಕಾಸ್ಪಾಡಿಯ ಮಳಲಿಕೊಪ್ಪದಲ್ಲಿ ನಡೆದಿದೆ.
ರಾಜೇಶ್ವರಿ ಮೃತ ಗೃಹಿಣಿ. ಎರಡು ಮೂರು ಬಾರಿ ಗರ್ಭಪಾತವಾದ್ದರಿಂದ ಬೇಸರಗೊಂಡು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅನುಮಾನಿಸಲಾಗಿದೆ.
ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ರಾಜೇಶ್ವರಿ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಎರಡು ವರ್ಷದ ಹಿಂದೆ ನವೀನ್ ಕುಮಾರ್ ಅವರೊಂದಿಗೆ ರಾಜೇಶ್ವರಿ ಅವರ ವಿವಾಹವಾಗಿತ್ತು. ಈ ಕುರಿತು ಮೃತಳ ತಾಯಿ ಶೇಖಮ್ಮ ಸಾಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.