ಶಿವಮೊಗ್ಗ :
ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ 35 ನೇ ಘಟಿಕೋತ್ಸವದಲ್ಲಿ ದೀಕ್ಷಾ ನಾಯ್ಕ್ ಇವರು ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಸಮುದಾಯ ವಿಜ್ಞಾನ ವಿದ್ಯಾಲಯದ ಆಹಾರ ಮತ್ತು ಪೋಷಣೆ ವಿಭಾಗದ ಮುಖ್ಯ ಅಧ್ಯಾಪಕಿ ಡಾ. ಉಮಾ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಹ್ಯೂಮನ್ ಇಮ್ಯುನೋ ಡಿಫಿಷಿಯನ್ಸಿ (HIV) ಪಾಸಿಟಿವ್ ರೋಗಿಗಳಿಗೆ ಸಂಯೋಜಿತ ಮಿಶ್ರಣದ ಅಭಿವೃದ್ಧಿ” ಎಂಬ ಅತ್ಯುತ್ತಮ ಪ್ರಬಂಧಕ್ಕೆ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕರ್ನಾಟಕದ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಹಾಗೂ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಬಿ. ಚೆಟ್ಟಿ ರವರು ಘಟಿಕೋತ್ಸವ ಸಮಾರಂಭದಲ್ಲಿ ಪದವಿಯನ್ನು ಪ್ರಧಾನ ಮಾಡಿದರು.
ಡಾ. ದೀಕ್ಷಾ ನಾಯ್ಕ್ ಇವರು ಒಟ್ಟು ಏಳು ಸಂಶೋಧನಾ ಲೇಖನಗಳನ್ನು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದಾರೆ.