ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶಿವ ಕುಮಾರ ಸ್ವಾಮೀಜಿಗಳ ಹೆಸರೇ ನಮ್ಮಲ್ಲಿ ಒಂದು ವಿಶಿಷ್ಟ ಭಕ್ತಿಯ ಭಾವನೆಯನ್ನು ಅರಳಿಸುತ್ತದೆ. ಭಕ್ತಿ, ಸೇವೆ, ನಾನಾ ಪ್ರಕಾರಗಳ ದಾಸೋಹದ ಮೂಲಕ ನಮ್ಮ ಬದುಕನ್ನು ಪರಿಪೂರ್ಣವಾಗಿಸಲು, ಸಾರ್ಥಕಗೊಳಿಸಿಕೊ ಳ್ಳಲು ಅದು ಪ್ರೇರೇಪಿಸುತ್ತದೆ. ಇಂತಹ ಪೂಜ್ಯರ ಜೊತೆಗಿನ ಒಡನಾಟದ ನೆನಪೇ ಸಾಕು, ನಾವೆ ಅದೃಷ್ಟಶಾಲಿಗಳು. ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಹಳೇನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜ ಹೆಸರಿನಲ್ಲಿ ಲಿಂಗಾಯತ ಸಮಾಜದ ಎಲ್ಲಾ ಸಂಘಟನೆಗಳು ಒಗ್ಗೂಡಿ ಶ್ರೀಗಳ ೧೧೫ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಲಾಕ್ ಡೌನ್ ಕಾರಣಕ್ಕೆ ಉದ್ಯೋಗ ಕಳೆದುಕೊಂಡು, ಜನ ಸಾಮಾನ್ಯರು ಹಸಿವೆಯಿಂದ ಬಳಲುವ ಭೀತಿ ಎದುರಾದಾಗ, ಕೇಂದ್ರ ಹಾಗು ರಾಜ್ಯ ಸರಕಾರಗಳು ಬಡವರಿಗೆ ಉಚಿತ ಅಕ್ಕಿ, ಹಾಗು ಇತರ ಧವಸ -ಧಾನ್ಯ ಹಂಚಿಕೆ ಕಾರ್ಯ ಆರಂಭಿಸಿತು.

ಈ ನಿರ್ಧಾರದ ಹಿಂದಿನ ಪ್ರೇರಣೆ, ಸಿದ್ದಗಂಗಾ ಮಠದ ದಾಸೋಹದ ಕಲ್ಪನೆಯಾಗಿತ್ತು. ಇಲ್ಲಿ ಹಸಿವೆಗೆ ಜಾಗವಿಲ್ಲ. ಇಂತಹ ಒಂದು ಆದರ್ಶವನ್ನು ಸರಕಾರವೇ ಅನುಸರಿಸುತ್ತದೆ ಎಂಬುದು ಈ ಮಠದ ಹೆಗ್ಗಳಿಕೆ. ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳಿ ದಂತೆ ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ದ ಗಂಗೆಯು ದೇಶದ ಆಸ್ತಿ ಎಂದು ಹೇಳಿದರು.


ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರಾದ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ಗೌರವ ಸಮರ್ಪಣೆ ನಡೆಯಿತು.
ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿ ಸಷತ್ ಸದಸ್ಯ ಎಸ್. ರುದ್ರೇಗೌಡ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹಾಗು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!