ಶಿವಮೊಗ್ಗ,,ಏ.11:
ಮದ್ಯ ಖರೀದಿಗೆ ಸರ್ಕಾರ ತಂದಿರುವ ಹೊಸ ನಿಯಮಕ್ಕೆ ಇಡೀ ರಾಜ್ಯದ ಎಲ್ಲಾ ಮದ್ಯ ಸನ್ನದುದಾರರು ಬೇಸತ್ತು ಬಸವಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಅಂತೆಯೇ, ಶಿವಮೊಗ್ಗ ಜಿಲ್ಲೆಯ ಎಲ್ಲಾ ಮದ್ಯ ಮಾರಾಟಗಾರರು ಮೇ.12 ರಂದು ರಾಜ್ಯ ಪಾನೀಯ ನಿಗಮದಿಂದ ಒಟ್ಟಾರೆ ಖರೀದಿ ನಿಲ್ಲಿಸಲು ರಾಜ್ಯ ಮದ್ಯ ಸನ್ನದುದಾರರ ಸಂಘದ ಆದೇಶದ ಮೇಲೆ ಜಿಲ್ಕಾ ಸಂಘ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ರಾಜ್ಯ ಸಂಘವು ಎಲ್ಲಾ ಜಿಲ್ಲೆಯಲ್ಲಿ ದಿನಕ್ಕೊಂದೆಂಬಂತೆ ನಿರ್ಧರಿಸಿದ್ದು, ಮೇ 12 ಶಿವಮೊಗ್ಗ ಮದ್ಯ ಮಾರಾಟಕ್ಕೆ ಮೀಸಲಾಗಿದೆ. ನಾಳೆ ಜಿಲ್ಲೆಯಲ್ಲಿ ಸನ್ನದುದಾರರು ಯಾವುದೇ ಮದ್ಯ ಖರೀದಿ ಮಾಡುವುದಿಲ್ಲ. ಇರುವ ಸ್ಟಾಕ್ ಮಾರ್ತಾರೆ. ಈ ಪಾಲಿಸಿ ಸರ್ಕಾರವನ್ನು ಎಚ್ಚರಿಸುವ ಮೊದಲ ಹಂತದ ಪ್ರಯತ್ನ.


ಅಂದರೆ, ಅವತ್ತು ಮದ್ಯದ ಅಂಗಡಿ ತೆರೆದಿದ್ದರೂ ಸಹ ಗ್ರಾಹಕರು ಕೇಳುವ ಬ್ರಾಂಡ್ ಸಿಗುವುದು ಕಷ್ಟ. ಕೆಲವೆಡೆ ಚೀಪರ್ ಗೆ ಸೀಮಿತವಾಗಿರುತ್ತೆ. ಈ ಪ್ರತಿಭಟನೆ ಇಂದಲ್ಲ ನಾಳೆ ರಾಜ್ಯವ್ಯಾಪಿ ಹರಡಿ ಒಟ್ಟಾರೆ ಸಾಮೂಹಿಕ ಖರೀದಿ ಸ್ಥಗಿತವಾಗಿ ಮದ್ಯ ಪ್ರೇಮಿಗಳಿಗೆ ನಿರಾಸೆಯಾಗಬಹುದು. ಸದ್ಯಕ್ಕಂತೂ ಮದ್ಯ ಸಿಗುತ್ತೆ ಎಂಬುವುದೂ ಸತ್ಯ. ಆದರೆ, ಅವರ ಬ್ರಾಂಡ್ ಅವರ ಅದೃಷ್ಟವೆಂದು ಹೇಳಲಾಗುತ್ತಿದೆ.

By admin

ನಿಮ್ಮದೊಂದು ಉತ್ತರ

error: Content is protected !!