ಸೊರಬ: ಮದುವೆಯಾಗಲು ಕನ್ಯೆಯ ಫೋಟೋ ತೋರಿಸುವುದಾಗಿ ಮನೆಗೆ ಕರೆಸಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ಮನ್ಮನೆ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ.
ಗ್ರಾಮದ ಲೇಖಪ್ಪ (36) ಎಂಬ ಕೊಲೆಯಾದ ವ್ಯಕ್ತಿ ಮತ್ತು ಆರೋಪಿ ಕೃಷ್ಣಪ್ಪ ನಡುವೆ ಮೊದಲಿನಿಂದಲೂ ರಾಜಕೀಯವಾಗಿ ಮತ್ತು ಮಹಿಳೆಯೊಬ್ಬರ ಸ್ನೇಹದ ಸಂಬಂಧ ದ್ವೇಷವಿತ್ತು.
ಲೇಖಪ್ಪನಿಗೆ ಮದುವೆಯಾಗಲು ಕನ್ಯೆಯ ಫೋಟೋ ತೋರಿಸುವುದಾಗಿ ಮನೆಗೆ ಕರೆಸಿ ಲೇಖಪ್ಪನನ್ನು ಕೊಲೆ ಮಾಡಿ, ಮೃತ ದೇಹವನ್ನು ಕಡಸೂರು ಸಮೀಪದ ವರದಾ ಸೇತುವೆಯಿಂದ ಎಸೆದಿರುವುದು ತನಿಖೆಯಿಂದ ಪತ್ತೆಯಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಎಂ.ಬಿ. ಲಕ್ಷ್ಮೀ ಪ್ರಸಾದ್ ಹಾಗೂ ಡಿವೈಎಸ್‍ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಸಿಪಿಐ ಎಲ್ ರಾಜಶೇಖರ್ ನೇತೃತ್ವದಲ್ಲಿ ಪಿಎಸ್‍ಐ ದೇವರಾಯ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ. ತಂಡದಲ್ಲಿ ಹೆಡ್ ಕಾನ್ಸ್‍ಟೇಬಲ್‍ಗಳಾದ ಬಿ.ನಾಗೇಶ್, ನೀಲೇಂದ್ರ ನಾಯ್ಕ್, ಸಿಬ್ಬಂದಿ ಸಲ್ಮಾನ್ ಖಾನ್ ಹಾಜಿ, ನಾಗರಾಜ್, ಮೆಹಬೂಬ್, ಸಂದೀಪ್, ಉಷಾ, ಮೋಹನ್ ಕುಮಾರ್, ಶಶಿಧರ, ಕುಮಾರ್, ಶಿವಾಜಿರಾವ್, ಸುಚಿತ್ರಾ, ಶಶಿಕಲಾ, ಗೋಪಾಲ್ ಪಾಲ್ಗೊಂಡಿದ್ದರು.