ಶಿವಮೊಗ್ಗ, ಮೇ೦೨:
ಅವೆಲಿಬಿಲಿಟಿ, ಅಕ್ಸಸ್ ಬಿಲಿಟಿ ಮತ್ತು ಅಫರ್ಡಬಲಿಟಿ ಎಂಬ ಸಿದ್ಧಾಂತದ ಮೇರೆಗೆ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ನೀಡಲು ರಾಜ್ಯ ಸರ್ಕಾರ ಹೊರಟಿದೆ. ಇದನ್ನು ಜನ ಸದುಪಯೋಗ ಪಡೆದುಕೊಳ್ಳ ಬೇಕಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಶಿಕಾರಿಪುರ ಪಟ್ಟಣದಲ್ಲಿರುವ ಸಾರ್ವ ಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿ, ಶಿರಾಳಕೊಪ್ಪ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳಿಂದ ೫೦ ಹಾಸಿಗೆ ಮೇಲ್ದರ್ಜೆಗೆ ಹಾಗೂ ಪಟ್ಟಣದಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ೬೦ ರಿಂದ 100 ಹಾಸಿಗೆಗಳಿಗೆ ಮತ್ತು 100 ರಿಂದ150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಟ್ಟಡ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ದರು.
ಕೇವಲ ಮೇಲ್ದರ್ಜೆಗೆ ಏರಿಸಲಾಗುವು ದಷ್ಟೆ ಅಲ್ಲ, ಕಟ್ಟಡದ ಸುಸಜ್ಜಿತ ಉಪಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸುಸಜ್ಜಿತ ಸೇವೆನೂ ದೊರೆಯುವಂತಾಗಬೇಕಿದೆ. ತಾಲೂಕು ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ಆರೋಗ್ಯ ತಪಾಸಣಾ ಕೇಂದ್ರ ಆರಂಭಿಸಲಾಗುತ್ತಿದೆ. ೧೬೮ ತಾಲೂಕಿನಲ್ಲಿ ಆರೋಗ್ಯ ತಪಾಸಣಾ ಕೇಂದ್ರ ಆರಂಭಿಸುತ್ತಿ ದ್ದೇವೆ. ಆರೋಗ್ಯದ ಬಗ್ಗೆ ಜನರಲ್ಲಿ ಸಂಕುಚಿತ ಮನೋಭಾವನೆ ಇದೆ. ಇದು ಹೋಗಬೇ ಕಿದೆ ಎಂದು ಕರೆನೀಡಿದರು.
ಯಾವ ಮನುಷ್ಯನಿಗೆ 30 ವರ್ಷ ತುಂಬಿದೆ. ಅಂತಹವರು ಪ್ರತಿ ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಸಾಂಕ್ರಮಿಕ ರೋಗ ಸಾಂಕ್ರಮಿಕ ರೋಗ ಶುಗರ್, ಬಿಪಿ ಯಂತಹ ಸಾಮಾನ್ಯ ಕಾಯಿಲೆಗಳು ತಳಹಂತಹದಲ್ಲಿಯೇ ಪತ್ತೆಯಾದರೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ದೇಶದಲ್ಲಿ ಶೇ. ೨೫ ರಷ್ಟು ಜನ ಸಾಂಕ್ರಾಮಿಕ ರೋಗದಿಂದ ಸಾಯುತ್ತಿದ್ದಾರೆ ಎಂಬ ಸಮೀಕ್ಷೆ ಹೇಳುತ್ತದೆ. ಹಾಗಾಗಿ ಆರೋಗ್ಯ ತಪಾಸಣ ಅನಿವಾರ್ಯ. ವೈದ್ಯಕೀಯ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದೇವೆ. ಕಳೆದ ೨ ವರ್ಷದಲ್ಲಿ ೧೭೫೦ ವೈದ್ಯರ ನೇಮಕಾತಿ ಆಗಿದೆ. ಮೊದಲು ಉತ್ತರ ಕರ್ನಾಕದಲ್ಲಿ ವೈದ್ಯರ ನೇಮಕಾತಿ ಹೆಚ್ಚು ಒತ್ತು ನೀಡಿದ್ದು ನಂತರ ಬೆಂಗಳೂರಿ ನಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಂಸದ ರಾಘವೇಂದ್ರ ನಗರಾಭಿವೃದ್ಧಿ ಭೈರತಿ ಬಸವರಾಜ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ. ಎಸ್ ಗುರುಮೂರ್ತಿ, ಡಿಸಿ ಡಾ. ಸೆಲ್ವಮಣಿ, ಆರೋಗ್ಯ ಕಲ್ಯಾಣಾಧಿಕಾರಿ ಡಾ ರಾಜೇಶ್ ಸುರಗಿಹಳ್ಳಿ, ಡಾ. ಚಂದ್ರಪ್ಪ, ತಾಲೂಕು ಆರೋಗ್ಯ ಅಧಿಕಾರಿಗಳು, ಚೆನ್ನವೀರಪ್ಪ ಮತ್ತಿತರರಿದ್ದರು.