ಶಂಕರಘಟ್ಟ, ಏ. 04:
ನಿನ್ನೆ ಸಂಜೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಎರಡಕ್ಕೂ ಹೆಚ್ಚು ಆನೆಗಳು ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದ ಆತಂಕಕ್ಕೆ ಕಾರಣವಾಗಿತ್ತು. ರಾತ್ರಿಯಿಡೀ ಹೊರಗೆ ಬರದಿರಲು ವಿದ್ಯಾರ್ಥಿಗಳಿಗೆ ಹಾಗೂ ವಿವಿ ಆವರಣದಲ್ಲಿರುವ ಕುಟುಂಬಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ.
ನಾಳೆ ಕುವೆಂಪು ವಿವಿಗೆ ಬರಲಿದ್ದಾರೆ ಪದ್ಮಶ್ರೀ ಮಂಜಮ್ಮ ಜೋಗತಿ https://tungataranga.com/?p=9766
ರಾತ್ರಿಯಿಡೀ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಡು ಬಿಟ್ಟಿದ್ದು, ಈ ಆನೆಗಳನ್ನು ಕಾಡಿನೊಳಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ಬೆಳಗಿನ ಜಾವದ ಹೊತ್ತಿಗೆ ಕಾಡಿಗೆ ಮರಳಿದ್ದಾವೆ ಎನ್ನಲಾಗಿದ್ದು ನಿಖರ ಮಾಹಿತಿ ಹೊರಬೀಳಬೇಕಿದೆ.
ಶಿವಮೊಗ್ಗ/ ಕುವೆಂಪು ವಿವಿಗೆ ಗಜರಾಜನ ದರುಶನ: ವಿದ್ಯಾರ್ಥಿ, ಸಿಬ್ಬಂದಿಗಳ ಆತಂಕವೇಕೆ ಗೊತ್ತಾ? https://tungataranga.com/?p=9761
ವಿವರ;
ಸಂಜೆ ಆರು ಗಂಟೆ ವೇಳೆಗೆ ಸಿಬ್ಬಂದಿ ಕ್ವಾರ್ಟರ್ಸ್ ಬಳಿ ಕಾಣಿಸಿಕೊಂಡ ಆನೆಗಳು ಸಂಜೆ 7.30ರ ಹೊತ್ತಿಗೆ ಕುವೆಂಪು ಪ್ರತಿಮೆ, ಗ್ರಂಥಾಲಯದ ಮುಂದೆ ನಡೆದಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.
ಸೆಕ್ಯೂರಿಟಿ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿಂದ ಹೊರಬರದಂತೆ ಸೂಚನೆ ನೀಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿದ್ದರು.