ಶುಂಠಿ, ಬೆಳ್ಳುಳ್ಳಿ, ಪುದೀನಾ, ಕೊತ್ತಂಬರಿಗೆ ಬೇಡಿಕೆ, ಕೆಳಗಿಳಿದ ಹಸಿಮೆಣಸು- ಈರುಳ್ಳಿ,ಸೌತೇಕಾಯಿ ರೇಟು!,
ಶಿವಮೊಗ್ಗ, ಮಾ.22:
ಗಾಂಧಿ ಬಜಾರಿನಲ್ಲಿ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭಗೊಂಡಿದ್ದು , ಅಲ್ಲಿ ಅಮ್ಮ ಭಕ್ತರ ದರುಶನಕ್ಕೆ ಸಿದ್ದವಾದ ಇಂದು ಬೆಳಿಗ್ಗೆಯ ಸನ್ನಿವೇಶ ನಯನ ಮನೋಹರವಾಗಿತ್ತು. ಮತ್ತೊಂದೆಡೆ ಇಂದು ಮತ್ತು ನಾಳಿನ ಬರ್ಜರಿ ಊಟಕ್ಕೆ ಪೂರಕವಾದುದರಲ್ಲಿ ಒಂದಂಶವಾದ ತರಕಾರಿ ಮಾರುಕಟ್ಟೆಯಲ್ಲಿ ಇಂದಿನ ರೇಟು ಮಾಮೂಲಿಯಾಗಿತ್ತು. ಅದರಲ್ಲಿ ಕೆಲವು ಐಟಂಗಳ ದರ ಕಡಿಮೆಯಾಗಿದೆ.
ಮಾರುಕಟ್ಟೆಯಲ್ಲಿಂದು ನೂರರ ಸಮೀಪದಲ್ಲಿದ್ದ ಹಸಿ ಮೆಣಸು ಐವತ್ತರಿಂದ ಅರವತ್ತಕ್ಕೆ ಕುಸಿದಿದೆ. ಟೊಮೊಟೋ ಎಂಟರಿಂದ ಹತ್ತು ರೂ ನಿಗಧಿಯಾಗಿತ್ತು.
ಬೇಡಿಕೆಯೇ ಇಲ್ಲದ ಬೀನ್ಸ್, ಜವಳಿಕಾಯಿ, ಮನವರೆ ಇತರೆ ತರಕಾರಿ ಬೆಲೆ ಮುವತ್ತರಲ್ಲೇ ಬಂಧಿಯಾಗಿದೆ.
ಬೇಡಿಕೆ ಹೆಚ್ಚಾಗಿದ್ದ ನಿಂಬೆ, ಬೆಳ್ಳುಳ್ಳಿ, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಸೌತೆಕಾಯಿ ಬೆಲೆ ನಿನ್ನೆಗಿಂತ ಜಾಸ್ತಿಯೇನಾಗಿರಲಿಲ್ಲ.
ಈರುಳ್ಳಿ ದರ ಕುಸಿದಿದ್ದು ಇಪ್ಪತ್ತು ರೂಗೆ ಸಿಗುತ್ತಿದೆ. ತೆಂಗಿನಕಾಯಿಯೂ ಅದೇ ದರದಲ್ಲಿದೆ. ಆಲೋ, ಬೀಟ್ರೋಟ್ ದರವೂ ಅಷ್ಟಕ್ಕೆ ಸೀಮಿತವಾಗಿದೆ.