ಶಿವಮೊಗ್ಗ, ಜು.30: ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಮೂವರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ಸತ್ತವರ ಸಂಖ್ಯೆ 3 ದಶಕದತ್ತ (31) ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗದಲ್ಲಿ 124 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದು 143 ಜನರಿಗೆ ಸೊಂಕು ಕಂಡುಬಂದಿದೆ ಎಂದು ಹೇಳಿದೆ.


ದುರಂತ ಗೊತ್ತೇ…, ಶಿವಮೊಗ್ಗ ನಗರದ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ.
ಶಿವಮೊಗ್ಗ ನಗರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಯ ಸೊಂಕು ಸದ್ದು ಮಾಡದಿರಲಿ. ಬೇಗ ಗುಣಮುಖರಾಗಲಿ ಎಂಬುದೇ ನಮ್ಮ ಹಾರೈಕೆ. ಆದರೆ ಅವರ ಅಕ್ಕ ಪಕ್ಕ ಇದ್ದವರ ಕಥೆ ಏನು…? ಉತ್ತರವಿಲ್ಲದ ಪ್ರಶ್ನೆ ಇದು.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ 491 ನೆಗಿಟೀವ್ ಇದ್ದರೆ 124 ಪಾಸಿಟಿವ್ ಬಂದಿದೆ. ಆದರೂ ಭಯ ಬರಲು ಕಾರಣ ಎಲ್ಲೆಡೆ ಕೊರೊನಾ ಕಂಟಕ ಕಾಣುತ್ತಿರುವುದು ಎನ್ನಲಾಗಿದೆ.
91 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 1727 ಸೋಂಕಿತರಲ್ಲಿ 925 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಶಿವಮೊಗ್ಗ ನಗರದಲ್ಲಿ 71, ಶಿಕಾರಿಪುರದಲ್ಲಿ 20, ಭದ್ರಾವತಿಯಲ್ಲಿ14, ಸಾಗರ 5, ತೀರ್ಥಹಳ್ಳಿಯಲ್ಲಿ 8, ತಲಾ 2 ಹೊಸನಗರದಲ್ಲಿ 3, ಸೊರಬದಲ್ಲಿ 1, ಇತರೆ ಜಿಲ್ಲೆಗಳ 2 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 31 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗಲಿದೆ. ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!