ಶಿವಮೊಗ್ಗ, ಜು.28:
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಇಬ್ಬರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ಸತ್ತವರ ಸಂಖ್ಯೆ 2 ದಶಕ ದಾಟಿ 3 ದಶಕದತ್ತ ಸಮೀಪಿಸುತ್ತಿರುವುದು ಆತಂಕದ ಸಂಗತಿ.
ಇಂದಿನ ಈ ವರದಿಯಲ್ಲಿ ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಹಾಗೂ ಅಣ್ಣಾ ನಗರದಲ್ಲಿ ಸುಮಾರು ೬೦ ವರ್ಷ ದಾಟಿದ ಇಬ್ಬರು ವೃದ್ಧರು ಜೊತೆಗೆ ಮತ್ತೊರ್ವ ಶಿವಮೊಗ್ಗದ ೪೯ ವರ್ಷದ ಮಹಿಳೆ ಸಾವು ಕಂಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ವರದಿಯಲ್ಲಿ ಎರಡು ಸಾವು ಮಾತ್ರ ದಾಖಲಾಗಿವೆ. ಇದು ಮೆಗಾನ್ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಅನುಮಾನಿಸುವಂತೆ ಪ್ರಶ್ನೆ ಮೂಡಿಸಿದೆ. ಪೂಕರವಾಗಿ ಇಂದು ಇದಕ್ಕೆ ಪ್ರತಿಭಟನೆಯೂ ನಡೆದಿದೆ.
ಇಂದು ಸಂಜೆ ಹೊರಬಿದ್ದ ಕೋವಿಡ್-19 ವರದಿಯಲ್ಲಿ 90 ನೆಗಿಟೀವ್ ಇದ್ದರೆ 89 ಪಾಸಿಟಿವ್ ಬಂದು ಭಯ ಹುಟ್ಟಿಸಿದೆ. 28 ಡಿಸ್ಚಾರ್ಜ್ ಆಗಿದ್ದರೂ ಸಹ 1476 ಸೋಂಕಿತರಲ್ಲಿ 804 ಜನ ಗುಣಮುಖರಾಗಿದ್ದಾರೆ. ಈ ವರದಿಯಲ್ಲಿ ಶಿವಮೊಗ್ಗ ನಗರದಲ್ಲಿ 45, ಶಿಕಾರಿಪುರದಲ್ಲಿ 22, ಭದ್ರಾವತಿಯಲ್ಲಿ 9, ಸಾಗರ ಹಾಗೂ ಹೊಸನಗರದಲ್ಲಿ ತಲಾ 1 ಸೊರಬದಲ್ಲಿ 02, ಇತರೆ ಜಿಲ್ಲೆಗಳ 5 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 26 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗಲಿದೆ. ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!