ರೇಣುಕೇಶ್ ಶಿವಮೊಗ್ಗ
ಶಿವಮೊಗ್ಗ: ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ…’ ಎಂಬ ಗಾದೆ ಮಾತು, ಶಿವಮೊಗ್ಗ ನಗರದಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ‘ಎಂಜಿನಿಯರ್ ಭವನ’ಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ!
ಪಾಳು ಬಿದ್ದಿರುವ ತವರೂರಿನ ‘ಎಂಜಿನಿಯರ್ ಭವನ’ ಕಟ್ಟಡ ಕಾಮಗಾರಿ ಪೂರ್ಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆಗೊಳಿಸುವಂತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಕಳೆದ ಹಲವು ತಿಂಗಳುಗಳ ಹಿಂದೆಯೇ ಆದೇಶಿಸಿದ್ದರು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಪಿಡಬ್ಲ್ಯೂಡಿ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಆದರೆ ಸಕರ್ಾರದ ಉನ್ನತ ಮೂಲಗಳು ನೀಡುವ ಮಾಹಿತಿ ಅನುಸಾರ, ಹಣಕಾಸು ಇಲಾಖೆ ಮಾತ್ರ ಇಲ್ಲಿಯವರೆಗೂ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ! ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೋರ್ವರು ಅನುದಾನ ಬಿಡುಗಡೆಗೆ ಅಡ್ಡಿಯಾಗಿ ಪರಿಣಮಿಸಿದ್ದಾರೆ ಎನ್ನಲಾಗಿದೆ. ಇದರಿಂದ ಸದ್ಯಕ್ಕೆ ಭವನದ ಕಾಮಗಾರಿ ಪುನಾರಾರಂಭವಾಗುವ ಯಾವುದೇ ಲಕ್ಷಣಗಳಿಲ್ಲ. ಕಟ್ಟಡದ ಪಾಳು ಸ್ಥಿತಿ ಮುಂದುವರಿಯುವುದು ನಿಶ್ಚಿತವಾಗಿದೆ.
ಏನೀದು ಕಟ್ಟಡ?: ಶಿವಮೊಗ್ಗ ನಗರದಲ್ಲಿ ಕಳೆದ ಹಲವು ದಶಕಗಳಿಂದ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ಅಧೀಕ್ಷಕರ ಕಚೇರಿ, ಗುಣಮಟ್ಟ ವಿಭಾಗ ಸೇರಿದಂತೆ ವಿಶೇಷ (ಶಿವಮೊಗ್ಗ-ಭದ್ರಾವತಿ-ತೀರ್ಥಹಳ್ಳಿ ತಾಲೂಕು ವ್ಯಾಪ್ತಿ) ಹಾಗೂ ಸಾಮಾನ್ಯ (ಸಾಗರ-ಹೊಸನಗರ-ಶಿಕಾರಿಪುರ-ತೀರ್ಥಹಳ್ಳಿ ತಾಲೂಕು ವ್ಯಾಪ್ತಿ) ವಿಭಾಗ ಕಚೇರಿಗಳಿವೆ.
ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಕಚೇರಿಯಿತ್ತು. ಜೊತೆಗೆ ರಸ್ತೆ ನಿಮರ್ಾಣದಂತಹ ಮೂಲಸೌಕರ್ಯ ಕಾರ್ಯ ನಿರ್ವಹಿಸುವ ಕೆ-ಶಿಫ್, ಕೆಆರ್ಡಿಸಿಎಲ್ ವಿಭಾಗಗಳಿವೆ. (ಇತ್ತೀಚೆಗೆ ಪಿಡಬ್ಲ್ಯೂಡಿ ಮುಖ್ಯ ಎಂಜಿನಿಯರ್ ಹಾಗೂ ಎನ್.ಹೆಚ್. ವಿಭಾಗ ಕಚೇರಿಗಳು ಕಾಯರ್ಾರಂಭಗೊಂಡಿವೆ)
ನಗರದ ವಿವಿಧೆಡೆ ಈ ಕಚೇರಿಗಳಿವೆ. ಕೆಲವೊಂದು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ‘ಎಂಜಿನಿಯರ್ ಭವನ’ ನಿಮರ್ಾಣಕ್ಕೆ ನಿರ್ಧರಿಸಲಾಗಿತ್ತು. 2009 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್ವೈ, ಶಿವಮೊಗ್ಗದಲ್ಲಿ ಬಹು ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿಮರ್ಾಣಕ್ಕೆ ಚಾಲನೆ ನೀಡಿದ್ದರು.
ನಗರದ ಬಾಲರಾಜ ಅರಸ್ ರಸ್ತೆಯ ಪಿಡಬ್ಲ್ಯೂಡಿ ಕಚೇರಿ ಪಕ್ಕದ ಜಾಗದಲ್ಲಿ ಕಟ್ಟಡ ನಿಮರ್ಾಣಕ್ಕೆ ಬಿಎಸ್ವೈ ಶಿಲಾನ್ಯಾಸ ನೆರವೇರಿಸಿದ್ದರು. ಅವರು ಸಿಎಂ ಗದ್ದುಗೆಯಲ್ಲಿರುವವರೆಗೂ ಕಟ್ಟಡ ನಿಮರ್ಾಣ ಕಾರ್ಯ ಭರದಿಂದ ನಡೆದಿತ್ತು. ಆದರೆ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ, ಕಟ್ಟಡ ನಿಮರ್ಾಣ ಕಾರ್ಯವು ನೆನೆಗುದಿಗೆ ಬಿದ್ದಿತ್ತು.
ನಂತರ ಬಂದ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿರಲಿಲ್ಲ. ಕಟ್ಟಡ ನಿಮರ್ಾಣ ಜವಾಬ್ದಾರಿ ಹೊತ್ತಿದ್ದ ಪಿಡಬ್ಲ್ಯೂಡಿ ಇಲಾಖೆಯು, ಹಲವು ಬಾರಿ ಸಕರ್ಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿರಲಿಲ್ಲ.
ಸಣ್ಣ ಕೊಠಡಿಯಲ್ಲಿ ಮುಖ್ಯ ಎಂಜಿನಿಯರ್ ಕಚೇರಿ!
ಕಳೆದ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿಗಳು ಶಿವಮೊಗ್ಗದಲ್ಲಿ ಪಿಡಬ್ಲ್ಯೂಡಿ ಮುಖ್ಯ ಎಂಜಿನಿಯರ್ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗ ಕಚೇರಿ ಮಂಜೂರುಗೊಳಿಸಿದ್ದರು. ಜೂನ್ ಮಾಹೆಯಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕವೇ ಈ ಎರಡು ಕಚೇರಿಗಳನ್ನು ಸಿಎಂ ಉದ್ಘಾಟಿಸಿದ್ದರು. ಅತ್ಯಂತ ಮಹತ್ವದ್ದಾದ ಹಾಗೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಮಂಗಳೂರು, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಪಿಡಬ್ಲ್ಯೂಡಿ ಮುಖ್ಯ ಎಂಜಿನಿಯರ್ ಕಚೇರಿಯು, ಸದ್ಯ ಆ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಕಚೇರಿ ಕಟ್ಟಡದ ಸಣ್ಣ ಕೊಠಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ! ಮತ್ತೊಂದೆಡೆ ಎಪಿಎಂಸಿ ಆವರಣದ ಬಾಡಿಗೆ ಕಟ್ಟಡದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಕಚೇರಿ ತೆರೆಯಲಾಗಿದೆ. ಈ ಕಾರಣದಿಂದ ಅರ್ಧಂಬರ್ಧವಾಗಿರುವ ಎಂಜಿನಿಯರ್ ಭವನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಒತ್ತಡ ಹೆಚ್ಚಾಗಲಾರಂಭಿಸಿದೆ.
ಪಾಳು ಸ್ಥಿತಿ ; ವ್ಯರ್ಥವಾಗುತ್ತಿದೆ ಕೋಟ್ಯಾಂತರ ರೂ.
‘ಎಂಜಿನಿಯರ್ ಭವನ’ ಕಟ್ಟಡದ ಕಾಮಗಾರಿ ಸ್ಥಗಿತಗೊಂಡು, ಸುಮಾರು ಏಳೆಂಟು ವರ್ಷಗಳಾಗುತ್ತಾ ಬಂದಿದೆ. ಪ್ರಸ್ತುತ ಅಕ್ಷರಶಃ ಕಟ್ಟಡ ಧೂಳು ಹಿಡಿಯಲಾರಂಭಿಸಿದೆ. ಶಿಥಿಲಾವಸ್ಥೆಗೆ ತಲುಪಿದೆ. ಕಟ್ಟಡಕ್ಕೆ ವಿನಿಯೋಗಿಸಲಾಗಿರುವ ಕೋಟ್ಯಾಂತರ ರೂ. ವ್ಯರ್ಥವಾಗಲಾರಂಭಿಸಿದೆ. ಹೇಳುವವರು, ಕೇಳುವವರ್ಯಾರು ಇಲ್ಲದಂತಹ ಸ್ಥಿತಿ ನಿಮರ್ಾಣವಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ಪ್ರಯತ್ನ
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು, ‘ಎಂಜಿನಿಯರ್ ಭವನ’ ಕಟ್ಟಡದ ಬಾಕಿ ಕಾಮಗಾರಿ ಪೂರ್ಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚಿಸಿದ್ದಾರೆ. ಆದಷ್ಟು ಶೀಘ್ರವಾಗಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡುತ್ತವೆ.
‘ಯೋಜನಾ ವರದಿ ಸಿದ್ದವಾಗಿದೆ’ : ಮುಖ್ಯ ಎಂಜಿನಿಯರ್ ಬಿ.ಟಿ.ಕಾಂತರಾಜ್
ಎಂಜಿನಿಯರ್ ಭವನ ಕಟ್ಟಡದ ಕಾಮಗಾರಿ ಪುನಾರಾರಂಭಕ್ಕೆ ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ದಪಡಿಸಿ, ಸಕರ್ಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು’ ಎಂದು ಪಿಡಬ್ಲ್ಯೂಡಿ ಇಲಾಖೆ ಶಿವಮೊಗ್ಗ ವಲಯದ ಮುಖ್ಯ ಎಂಜಿನಿಯರ್ ಬಿ.ಟಿ.ಕಾಂತರಾಜುರವರು ತಮ್ಮನ್ನು ಸಂಪಕರ್ಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.