ಶಿವಮೊಗ್ಗ, ಜು.23:
ರಾಜ್ಯದೆಲ್ಲೆಡೆ ಸೀಲ್ಡೌನ್-ಲಾಕ್ಡೌನ್ ತೆರವುಗೊಂಡರೂ ಶಿವಮೊಗ್ಗ ನಗರದ ಹಲವು ವಾರ್ಡ್ ಗಳು ಆಗಿದ್ದ ಸೀಲ್ಡೌನ್ ಅನ್ನು ಜನರ ಒತ್ತಾಸೆ ಹಾಗೂ ಅಭಿಪ್ರಾಯದ ಮೇರೆಗೆ ಇಂದಿಗೇ ಕೊನೆಗೊಳಿಸಲಾಗಿದೆ ಎಂದು
ಇಂದು ಸಚಿವರಾದ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಈಗಷ್ಟೆ ತುರ್ತು ಪತ್ರಿಕಾಗೋಷ್ಟಿಯಲ್ಲಿ ಈ ಮಾಹಿತಿ ನೀಡಿ ನಾಳೆಯಿಂದ ಶಿವಮೊಗ್ಗದ ಎಲ್ಲೆಡೆ ಮುಕ್ತತೆ ಇರಲಿದೆ ಎಂದಿದ್ದಾರೆ.
ಕೊರೊನಾ ಮಹಾಮಾರಿ ದಾಳಿ
ಕಳೆದ ವಾರದಿಂದ ಶಿವಮೊಗ್ಗ ಜಿಲ್ಲೆಯ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾವಿರ ದಾಟಿದ ಸೊಂಕಿತರನ್ನ ಕಂಡಿದ್ದೇವೆ.
ಈಗಷ್ಟೆ ಬಂದ ವರದಿ ಅನುಸಾರ ಶಿವಮೊಗ್ಗ ಜಿಲ್ಲೆಯಲ್ಲಿಂದು 125 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೊಂಕಿತರ ಸಂಖ್ಯೆ 1143.
ಶಿವಮೊಗ್ಗ ಸಾವಿನ ಸಂಖ್ಯೆ ವರದಿಯನುಸಾರ 20. ಇಂದು ಮೂವರು ಸಾವು ಕಂಡಿದ್ದಾರೆನ್ನಲಾಗಿದೆ.
ಗುರುವಾರದ ಇಂದಿನ ವರದಿಯಲ್ಲಿ ಶಿವಮೊಗ್ಗ, ಶಿಕಾರಿಪುರ ಹಾಗೂ ಭದ್ರಾವತಿಯಲ್ಲಿ ತೀರಾ ಗಾಬರಿಯಾಗುವಂತೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಿದೆ.
ಇಂದು ಶಿವಮೊಗ್ಗದಲ್ಲಿ 50 ಪ್ರಕರಣ ಕಂಡುಬಂದಿವೆ.
ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿ ಮತ್ತೆ ಇಂದು 38, ಭದ್ರಾವತಿಯಲ್ಲಿ 19, ಸಾಗರ 6, ಸೊರಬದದಲ್ಲಿ 7, ತೀರ್ಥಹಳ್ಳಿ ಯಲ್ಲಿ 3, ಅನ್ಯ ಜಿಲ್ಲೆಗಳ 3 ಪ್ರಕರಣಗಳು ಪತ್ತೆಯಾಗಿದೆ.
ಒಟ್ಟು 1143 ಪ್ರಕರಣಗಳಲ್ಲಿ 589 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದ
ಸೊಂಕಿತರಿಗೆ ಕೋವಿಡ್ ಆಸ್ಪತ್ರೆ ಹಾಗೂ ಗಾಜನೂರಿನ ಮುರಾರ್ಜಿ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಜಾಗಗಳ ಸೀಲ್ಡೌನ್ ತೆರವು
ಇಂದು ಬೆಳಿಗ್ಗೆಯಿಂದ ಸೀಲ್ಡೌನ್ ಆಗಿದ್ದ ಶಿವಮೊಗ್ಗ ನಗರದ 7 ವಾರ್ಡ್ ಗಳು ಈಗ ಮುಕ್ತವಾಗಿವೆ.
ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಈ ಸೀಲ್ಡೌನ್ ಪ್ರದೇಶಗಳನ್ನು ತೆರವುಗೊಳಿಸಿರುವುದಾಗಿ ಈಗಷ್ಟೆ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಹಳೆ ಶಿವಮೊಗ್ಗ ಕ್ಲಸ್ಟರ್ ನಲ್ಲಿ ಬಗ್ಗೆ ಬರುವ ಟ್ಯಾಂಕ್ ಮೊಹಲ್ಲಾ, ಅರಮನೆ, ಗಾಂಧಿಬಜಾರ್ ಪೂರ್ವ ಹಾಗೂ ಪಶ್ಚಿಮ, ಅಜಾದ್ ನಗರ, ಸೀಗೆಹಟ್ಟಿ, ಸವಾಯಿಪಾಳ್ಯದ ಏರಿಯಾಗಳು ಸಂಪೂರ್ಣ ಸೀಲ್ಡೌನ್ ಮಾಡಲಾಗಿತ್ತು.