ಶಿವಮೊಗ್ಗ, ಜು.23: ಕೊರೊನಾ ಇರಲಿ, ಕಂಟೈನ್ಮೆಂಟ್ ಜೋನ್ ಇರಲಿ, ಲಾಕ್‌ಡೌನ್ ಇರಲಿ ಇಲ್ಲಿ ಮಾತ್ರ ಎಲ್ಲವೂ ಸಿಗುತ್ತೇ. ಅದೂ ಶಿವಮೊಗ್ಗದ ಜನ ನಿಬಿಡ ನೆಹರೂ ರಸ್ತೆಯ ಜೆ.ಹೆಚ್.ಪಟೇಲ್ ವಾಣಿಜ್ಯ ಸಂಕೀರ್ಣಕ್ಕೆ ಹೊಂದಿಕೊಂಡಂತೆ ಇರುವ ನವ ನವೀಕೃತಗೊಂಡ ಕನ್ಸರ್‌ವೆನ್ಸಿಯಲ್ಲಿ ಎಲ್ಲವೂ ಸಿಗುತ್ತೇ.
ಕಸ ಆರಿಸುವರರ ಸೆಲ್ಯೂಷನ್ ದಂಧೆಯ ಜೊತೆಗೆ ಇದೇ ಕನ್ಸರ್‌ವೆನ್ಸಿಯ ನಿತ್ಯ ಕರ್ಮದ ಮಗ್ಗುಲಲ್ಲೇ ಕುಡುಕರ ಹಾವಳಿ ವಿಪರೀತವಾಗಿದ್ದು, ಎಲ್ಲವೂ ಇಲ್ಲಿಯೇ ನಡೆಯುತ್ತದೆ. ಹಾಗೂ ಭಂಗಿ ಸೇದುವವರ ದಾಂಧಲೆಯೂ ಇಲ್ಲಿ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಹಾಗೂ ಸ್ಥಳೀಯ ಗ್ರಾಹಕರು ಆರೋಪಿಸಿದ್ದಾರೆ.
ನೆಹರೂ ರಸ್ತೆಯ ಈ ಜನನಿಬಿಡ ಜಾಗದಲ್ಲಿರುವ ಕನ್ಸರ್‌ವೆನ್ಸಿಯಲ್ಲಿನ ಸುಲಭ ಶೌಚಾಲಯವು ನಗರಪಾಲಿಕೆಯ ದಿಕ್ಕೆಟ್ಟ ವ್ಯವಸ್ಥೆಯಿಂದಾಗಿ ಇನ್ನೂ ಆರಂಭಗೊಂಡಿಲ್ಲ. ಈ ನಡುವೆ ಮಗ್ಗುಲಲ್ಲೇ ನಿತ್ಯ ಕರ್ಮದ ಜೊತೆಗೆ ಕೆಲ ಅನಾಥ ಹಾಗೂ ಮತಿಗೆಟ್ಟ ಹೆಣ್ಣು ಮಕ್ಕಳನ್ನು ಹಾಡುಹಗಲೇ ದುರ್ಬಳಕೆ ಮಾಡಿಕೊಳ್ಳುವ ಕಾಯಕ ನಡೆಯುತ್ತಿದೆ.
ಯಾವುದೇ ಕೆಲಸವನ್ನು ಸಸೂತ್ರವಾಗಿ ಸಕಾಲದಲ್ಲಿ ಮುಗಿಸದ ಶಿವಮೊಗ್ಗ ಮಹಾನಗರ ಪಾಲಿಕೆಯ ಹೀನಾಯ ವ್ಯವಸ್ಥೆಗೆ ಕಳೆದ ಐದು ವರ್ಷಗಳಿಂದ ನಿರ್ಮಾಣಗೊಂಡ ಶೌಚಾಲಯಗಳು ಈಗಲೂ ಬಳಕೆಯಾಗುತ್ತಿಲ್ಲವೆಂದರೆ ಪಾಲಿಕೆಯ ಕರ್ಮಗೇಡಿ ವ್ಯವಸ್ಥೆ ಅರ್ಥವಾಗುತ್ತಿದೆಯಲ್ಲವೇ..?
ಕಸ ಆರಿಸುವವರ ಮಾದಕ ವ್ಯಸನದ ಜೊತೆಗೆ ಕುಡುಕರ ಗಾಂಜಾ ಸೇದುವವರ ಐನಾತಿ ಬದುಕು ಇಲ್ಲಿ ಬೆರತು ಇಡೀ ವ್ಯವಸ್ಥೆ ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಪಾಲಿಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚಿಂತಿಸಬೇಕಾಗಿದೆ. ಬಿಡುವಾದರೆ ಪೊಲೀಸರು ಒಂದೆರಡು ಭಾರಿ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕಿದೆ.


By admin

ನಿಮ್ಮದೊಂದು ಉತ್ತರ

error: Content is protected !!