ಶಿವಮೊಗ್ಗ, ಜು.23:
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ -೧೯ ಪ್ರಕರಣಗಳು ಹೆಚ್ಚಾಗಿರುವುದರಿಂದ ಪಾಲಿಕೆಯ ಅಧಿಕಾರಿ ಹಾಗೂ ನೌಕರರನ್ನು ಕೋವಿಡ್ -19 ರೋಗೋದ್ರೇಕ ಹತೋಟಿಗಾಗಿ ವಿವಿಧ ಕಾರ್ಯಗಳಿಗೆ ನಿಯೋಜಿಸಲಾ ಗಿರುತ್ತದೆ.
ಈ ರೀತಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕಕರಿಗೆ ಕೋವಿಡ್ -19 ಒಂದು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ವಯ ಪಾಲಿಕೆಯ ಆವರಣದಲ್ಲಿ ಔಷದ ಸಿಪಡಣೆ ( ಸ್ನಾನಿಟೈಸ್) ಕಾರ್ಯ ಮಾಡಲು ಶಿವಮೊಗ್ಗ ಮಹಾನಗರ ಪಾಲಿಕೆಗೆ ಸಾವ್ಜನಿಕರ ಪ್ರವೇಶವನ್ನು ಸಿಷೇಧಿಸಲಾಗಿದೆ.
ಜು.23UÀರ ಇಂದು ಹಾಗೂ ನಾಳೆ ಮಹಾನಗರ ಪಾಲಿಕೆಗೆ ಬರುವ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣ ನಿಷೇದಿಸಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಪಾಲಿಕೆಯ ಉಪಾಯುಕ್ತರು ಕೋರಿದ್ದಾರೆ.
ಅದೇ ರೀತಿ ಕೋವಿಡ್-೧೯ ಲಕ್ಷಣಗಳಾದ ಕೆಮ್ಮು, ಶೀತ, ಜ್ವರ ಹಾಗೂ ಮೈಕೈ ನೋವು ಇರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೂಡಲೇ ಆಡಳಿತ ವಿಭಾಗಕ್ಕೆ ಮಾಹಿತಿ ನೀಡಿ ಪರೀಕ್ಷೆಗೊಳಗಾಗುವಂತೆ ಕೋರಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!