ಶಿವಮೊಗ್ಗ, ಡಿ.೧೭:
ಮದುವೆ ನಿಶ್ಚಿತಾರ್ಥ ಸಮಾರಂಭಕ್ಕೆ ಹೋಗುತ್ತಿದ್ದ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಬಳಿಯ ಎಡೆಹಳ್ಳಿಯ ನಾಲ್ವರು ಅಪಘಾತಕ್ಕೆ ತುತ್ತಾಗಿ ಸಾವುಕಂಡಿದ್ದು, ಓರ್ವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಘಟನೆ ಇಂದು ಮದ್ಯಾಹ್ನ ವರದಿಯಾಗಿದೆ.
ಸವಳಂಗ ಸಮೀಪ ಕಲ್ಲಾಪುರ ಬಳಿ ಸರ್ಕಾರಿ ಬಸ್‌ವೊಂದು ಕಾರಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವು ಕಂಡು, ಮತ್ತೊಬ್ಬರು ಆಸ್ಪತ್ರೆಗೆ ಕೊಂಡೋಯ್ಯುವಾಗ ಸಾವು ಕಂಡಿದ್ದಾರೆ. ಓರ್ವ ಮಹಿಳೆ ಗಂಭಿರವಾಗಿ ಗಾಯಗೊಂಡಿದ್ದಾರೆ.


ಶಿವಮೊಗ್ಗ ಕಡೆಗೆ ಬರುತ್ತಿದ್ದ ಬಸ್ ನ್ಯಾಮತಿ ಬಳಿಯ ಜೋಗದ ಚಿನ್ನಿಕಟ್ಟೆಯಲ್ಲಿನ ಮದುವೆ ನಿಶ್ಚಿತಾರ್ಥಕ್ಕೆ ಹೋಗುತ್ತಿದ್ದ ಎಡೆಹಳ್ಳಿಯ ಕಾರಿಗೆ ಅತ್ಯಂತ ವೇಗವಾಗಿ ಡಿಕ್ಕಿ ಹೊಡೆದಿದೆ. ಕಾರು ಪುಡಿಪುಡಿಯಾಗಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಎಡೆಹಳ್ಳಿಯ ಬೀರನಹಳ್ಳಿ ಬಸವರಾಜಪ್ಪ ಅವರ ಪತ್ನಿ ಶಾರಾದಮ್ಮ(೬೦), ಮಕ್ಕಳಾದ ಹಾರನಹಳ್ಳಿ ದಾಕ್ಷಾಣಯಮ್ಮ (೩೬) ಗೋಂಧಿಚಟ್ನಳ್ಳಿ ಸುಮ (೪೦) ಮೃತದುರ್ಧೈವಿಗಳು.


ಕಾರಿನ ಚಾಲನೆ ಮಾಡುತ್ತಿದ್ದ ಎಡೇಹಳ್ಳಿ ಲೋಕೇಶಪ್ಪ ಎಂಬುವವರ ಮಗ ಸುನೀಲ್ (೨೮) ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮದ್ಯೆ ಸಾವುಕಂಡಿದ್ದಾರೆ.


ಕಾರಿನಲ್ಲಿದ್ದ ಮತ್ತೋರ್ವ ಮಹಿಳೆ ದಿ.ಶಶಿಧರ್ ಅವರ ಪತ್ನಿ ಆಶಾ (೩೫) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತ ಸಂಭವಿಸಿದ ಹೊತ್ತಿನಲ್ಲಿ ಬಸ್‌ಗೆ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.


ನ್ಯಾಮತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನ ದಟ್ಟಣೆಯನ್ನು ಸರಿಪಡಿಸುವ ಜೊತೆಗೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!