ವಿನೋಬನಗರ ಪೊಲೀಸರ ತಕ್ಷಣದ ಸ್ಪಂದನೆಗೆ ಹ್ಯಾಟ್ಸಾಫ್
ಶಿವಮೊಗ್ಗ, ಡಿ.15;
ಕಳೆದ ನಾಲ್ಕು ದಿನಗಳಿಂದ ಶಾಲೆ ಹಾಗೂ ಮನೆಗಳಿರುವ ಸ್ಥಳದಲ್ಲಿ ಸಹಜವಾಗಿ ಮೃತವಾಯಿತೆನ್ನಲಾದ ಹಸುವೊಂದರ ಮೃತ ದೇಹ ನಾಯಿಗಳ ಪಾಲಾಗುತ್ತಿದ್ದರೂ ಆ ಹಸುವನ್ನು ಕನಿಷ್ಠ ಮಣ್ಣಲ್ಲಿ ಹೂತು ಹಾಕುವ ಕಾರ್ಯವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಸರಿಯಾಗಿ ಮಾಡದಿರುವುದು ದುರಂತ. ಈ ಬಗ್ಗೆ ನಿಮ್ಮ ತುಂಗಾತರಂಗ ಸುದ್ದಿ ಬರೆದ ಮೇಲೆ, ಪೊಲೀಸರು ಜಾಡಿಸಿದ ಮೇಲೆ ಪಾಲಿಕೆಯವರು ಎದ್ದಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಚಿದಾನಂದ ವಠಾರೆ ಅವರು ಇತ್ತ ಗಮನಿಸಬೇಕು ಎಂದು ಸುದ್ದಿ ಬಂದ ಮೇಲೆ ಈಗ ಎದ್ದಿದ್ದಾರೆ. ಶಿವಮೊಗ್ಗ ವಿನೋಬಗರದ ಕಟ್ಟೆ ಸುಬ್ಬಣ್ಣ ಕಲ್ಯಾಣ ಮಂದಿರದ ಸಮೀಪ ನಡೆದಿದ್ದು,ಇಲ್ಲಿನ ಲಿಟ್ಲು ಜೆಸಿ ಶಾಲೆಯ ಹಿಂಭಾಗದ ಸೈಟಿನ ಮದ್ಯೆ ಇರವ ಸುಮಾರು ೧.೫ ಅಡಿ ಅಗಲದ ಜಾಗದಲ್ಲಿ ಹಸು ಅಲ್ಲಿಯೇ ಸಾವುಕಂಡಿದೆ. ನಾಯಿಗಳು ಆರ್ಭಟಿಸಿವೆ. ವಾಸನೆ ಬರಲಾರಂಭಿಸಿದೆ. ಸ್ಥಳೀಯ ಜನರು ಹಾಗೂ ಶಾಲೆಯವರು ಪಾಲಿಕೆಗೆ ದೂರು ನೀಡಿದರೆ ದಿನವೊಂದು ಕಳೆದ ಮೇಲೆ ಬೇಕಾಬಿಟ್ಟಿ ಬಂದ ಪಾಲಿಕೆಯವರು ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಅರ್ಧಂಬರ್ಧ ಹೂತುಹಾಕಿ ಹೋಗಿದ್ದರು. ಯಾರದೂ ಜಾಗದಲ್ಲಿ ಹೂತು ಹಾಕಲು ಇವರಿಗೆ ಪರ್ಮಿಷನ್ ನೀಡಿದವರಾರು?
ನಾಯಿಗಳು ನೆಲ ಬಗೆದು ಅದನ್ನು ಕಿತ್ತು ತಿನ್ನಲು ಮುಂದಾದಾಗ ವಾಸನೆ ಬರಲಾರಂಭಿಸಿತ್ತು. ಮತ್ತೆ ಜನರ ದೂರಿಗೆ ಬಂದಂತೆ ನಾಟಕವಾಡಿದ ಪಾಲಿಕೆಯವರು ಮಣ್ಣುಮುಚ್ಚಿ ಹೋಗಿದ್ದಾರೆ ಎಂದು ಬಂದ ಸುದ್ದಿ ಬಿತ್ತರವಾದಾಕ್ಷಣ ಸ್ಥಳೀಯ ವಿನೋಬನಗರ ಇನ್ಸ್ ಸ್ಪೆಕ್ಟರ್ ರವಿ ಸರ್ ಸ್ಥಳಕ್ಕೆ ಆಗಮಿಸಿ ನಗರಸಭೆಗೆ ಸೂಚನೆ ನೀಡಿ ಗೋವಿನ ಅಂತ್ಯ ಸಂಸ್ಕಾರಕ್ಕೆ ಹೊಸ ವ್ಯವಸ್ಥೆ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಕೆಲಸ ಸರಿಯಾಗಿದ್ದರೆ ಜನರೂ ಮಾತಾಡುತ್ತಿರಲಿಲ್ಲ. ಪತ್ರಿಕೆಯೂ ದ್ವನಿ ಎತ್ತುತ್ತಿರಲಿಲ್ಲ ಅಲ್ಲವೇ… ಪೊಲೀಸ್ ಇಲಾಖೆಯ ಸ್ಪಂದನೆಗೆ ಹ್ಯಾಟ್ಸಾಫ್.