ಶಿವಮೊಗ್ಗ, ಡಿ.೧೫:
ಕತ್ತುಕೊಯ್ದ ಹಸುವನ್ನು ಶಾಲೆಯ ಹಿಂದೆ ಕಾಲು ಕಟ್ಟಿ ಎಸೆದ ಘಟನೆ ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗ ವಿನೋಬಗರದ ಕಟ್ಟೆ ಸುಬ್ಬಣ್ಣ ಕಲ್ಯಾಣ ಮಂದಿರದ ಸಮೀಪ ನಡೆದಿದ್ದು, ಆ ಹಸುವನ್ನು ಕನಿಷ್ಠ ಮಣ್ಣಲ್ಲಿ ಹೂತು ಹಾಕುವ ಕಾರ್ಯವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಸರಿಯಾಗಿ ಮಾಡದಿರುವುದು ದುರಂತವೇ ಹೌದು.
ಸತ್ಯವನ್ನು ಇಲ್ಲಿ ಅರ್ಥಮಾಡಿಕೊಳ್ಳಬೇಕು. ಅನಗತ್ಯದ ಗೊಂದಲದ ಸುದ್ದಿ ಇದಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಚಿದಾನಂದ ವಠಾರೆ ಅವರು ಇತ್ತ ಗಮನಿಸಬೇಕು ಏಕೆಂದರೆ ಇಲ್ಲಿನ ಲಿಟ್ಲು ಜೆಸಿ ಶಾಲೆಯ ಹಿಂಭಾಗದ ಸೈಟಿನ ಮದ್ಯೆ ಇರವ ಸುಮಾರು ೧.೫ ಅಡಿ ಅಗಲದ ಜಾಗದಲ್ಲಿ ಕತ್ತು ಕೋಯ್ದ ಹಾಗೂ ಕಾಲು ಕಟ್ಟಿದ್ದ ಹಸುವನ್ನು ತುರುಕಿದ್ದರು.
ಹಸು ಅಲ್ಲಿಯೇ ನರಳಿ ಸಾವುಕಂಡಿದೆ. ವಾಸನೆ ಬರಲಾರಂಭಿಸಿದೆ. ಸ್ಥಳೀಯ ಜನರು ಹಾಗೂ ಶಾಲೆಯವರು ಪಾಲಿಕೆಗೆ ದೂರು ನೀಡಿದರೆ ದಿನವೊಂದು ಕಳೆದ ಮೇಲೆ ಬೇಕಾಬಿಟ್ಟಿ ಬಂದ ಪಾಲಿಕೆಯವರು ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಅರ್ಧಂಬರ್ಧ ಹೂತುಹಾಕಿ ಹೋಗಿದ್ದರು. ನಾಯಿಗಳು ಅದನ್ನು ಕಿತ್ತು ವಾಸನೆ ಬರಲಾರಂಭಿಸಿದಾಗ ಮತ್ತೆ ಜನರ ದೂರಿಗೆ ಬಂದಂತೆ ನಾಟಕವಾಡಿದ ಪಾಲಿಕೆಯವರು ಮಣ್ಣುಮುಚ್ಚಿ ಹೋಗಿದ್ದಾರೆ. ಮತ್ತೆ ನಾಯಿಗಳು ಕಿತ್ತು ತಿನ್ನುತ್ತಿವೆ. ಗೋಮಾತೆಗೆ ಕನಿಷ್ಠ ಗೌರವ ಕೊಡದ ಇಂತಹ ನೌಕರರ ವರ್ತನೆಗೆ ಮೇಯರ್ ಹಾಗೂ ಉಪಮೇಯರ್, ಸದಸ್ಯರು ತಲೆತಗ್ಗಿಸಬೇಕಾಗಿದೆ. ಕೂಡಲೇ ಇತ್ತ ಗಮನಿಸುವೀರಾ..