ಶಿವಮೊಗ್ಗ, ಜು.19: ಕಳೆದ ವಾರದಿಂದ ಶಿವಮೊಗ್ಗ ಜಿಲ್ಲೆಯ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾವಿರ ದಾಟಿದ ಸೊಂಕಿತರನ್ನ ಕಾಣುತ್ತೇವೆ
ಈಗಷ್ಟೆ ಬಂದ ವರದಿ ಅನುಸಾರ ಶಿವಮೊಗ್ಗ ಜಿಲ್ಲೆಯಲ್ಲಿಂದು 84 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೊಂಕಿತರ ಸಂಖ್ಯೆ 1017.
ಶಿವಮೊಗ್ಗ ನಗರ ಮೂಲದ ಇವರು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಮೂಲಗಳು ಹೇಳಿವೆ. ಶಿವಮೊಗ್ಗ ಸಾವಿನ ಸಂಖ್ಯೆ ವರದಿಯನುಸಾರ 19. ಬುಧವಾರದ ಇಂದಿನ ವರದಿಯಲ್ಲಿ ಶಿವಮೊಗ್ಗ ಹಾಗೂ ಶಿಕಾರಿಪುರ ತೀರಾ ಗಾಬರಿಯಾಗುವಂತೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಿದೆ.
ಇಂದು ಶಿವಮೊಗ್ಗದಲ್ಲಿ 35 ಪ್ರಕರಣ ಕಂಡುಬಂದಿವೆ.
ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿ ಮತ್ತೆ ಇಂದು 26, ಭದ್ರಾವತಿಯಲ್ಲಿ 5, ಸಾಗರ, ಸೊರಬದದಲ್ಲಿ ತಲಾ 5, ತೀರ್ಥಹಳ್ಳಿಯಲ್ಲಿ 3, ಅನ್ಯ ಜಿಲ್ಲೆಗಳ 5 ಪ್ರಕರಣಗಳು ಪತ್ತೆಯಾಗಿದೆ.
ಒಟ್ಟು 1017 ಪ್ರಕರಣಗಳಲ್ಲಿ 550 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದ
ಸೊಂಕಿತರಿಗೆ ಕೋವಿಡ್ ಆಸ್ಪತ್ರೆ ಹಾಗೂ ಗಾಜನೂರಿನ ಮುರಾರ್ಜಿ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಜಾಗಗಳು ಸೀಲ್ಡೌನ್!
ನಾಳಡ ಬೆಳಿಗ್ಗೆಯಿಂದ ಶಿವಮೊಗ್ಗ ನಗರದ 7 ವಾರ್ಡ್ ಗಳ ಸಾಕಷ್ಟು ಪ್ರದೇಶಗಳು ಕಂಟೈನ್ ಮೆಂಟ್ ಏರಿಯಾಗಳಾಗಲಿವೆ. ಹಳೆ ಶಿವಮೊಗ್ಗ ಕ್ಲಸ್ಟರ್ ನಲ್ಲಿ ಬಗ್ಗೆ ಬರುವ ಟ್ಯಾಂಕ್ ಮೊಹಲ್ಲಾ, ಅರಮನೆ, ಗಾಂಧಿಬಜಾರ್ ಪೂರ್ವ ಹಾಗೂ ಪಶ್ಚಿಮ, ಅಜಾದ್ ನಗರ, ಸೀಗೆಹಟ್ಟಿ, ಸವಾಯಿಪಾಳ್ಯದ ಏರಿಯಾಗಳು ಸಂಪೂರ್ಣ ಸೀಲ್ ಡೌನ್ ಆಗಲಿವೆ. ಆ ಭಾಗದ ವಿವರಣೆಯನ್ನು ನೀಡಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!