ಶಿವಮೊಗ್ಗ, ಜು.19: ಕಳೆದ ವಾರದಿಂದ ಶಿವಮೊಗ್ಗ ಜಿಲ್ಲೆಯ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾವಿರದ ಗಡಿಯತ್ತ ಸೊಂಕಿತರನ್ನ ಕಾಣುತ್ತೇವೆ ಎಂಬ ಭಯ ಆವರಿಸಿದೆ. ಅದರ ಜೊತೆಗೆ ಇಂದು ನಾಲ್ಕು ಕೊರೊನಾ ಸೊಂಕಿತರು ಸಾವು ಕಂಡಿದ್ದಾರೆಂದು ಬಲ್ಲ ಮೂಲಗಳು ಈಗಷ್ಟೆ ತಿಳಿಸಿವೆ.
ಹೊನ್ನಾಳಿ ಮೂಲದ 68 ವರುಷದ ವೃದ್ದರು, ಭದ್ರಾವತಿಯ 60 ವರುಷದ ಮಹಿಳೆ, ಶಿವಮೊಗ್ಗ ಮೂಲದ 47 ವರುಷದ ಮಹಿಳೆ ಹಾಗೂ ಇದೇ ಮೂಲದ 50 ವರುಷದ ಪುರುಷ ಸಾವುಕಂಡ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
ಈ ಬಗ್ಗೆ ಕೋವಿಡ್ ಅಥವಾ ನಾನ್ ಕೋವಿಡ್ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಈಗಷ್ಟೆ ಬಂದ ವರದಿ ಅನುಸಾರ ಶಿವಮೊಗ್ಗ ಕೋವಿಡ್ 19 ಕೇಂದ್ರದಲ್ಲಿ ಶಿವಮೊಗ್ಗದ 62 ವರ್ಷ ಹಾಗೂ ಹೊನ್ನಾಳಿ ಮೂಲದ 68 ವರ್ಷದವರೊಬ್ಬರ ಸಾವು ಸೇರಿಕೊಂಡು ಒಟ್ಟು ಸಂಖ್ಯೆ 17 ಆಗಿದೆ.
ಶಿವಮೊಗ್ಗದಲ್ಲೇ 36
ಮಂಗಳವಾರದ ಇಂದಿನ ವರದಿಯಲ್ಲಿ ಶಿವಮೊಗ್ಗದಲ್ಲಿ 36 ಪ್ರಕರಣ ಪತ್ತೆಯಾಗಿವೆ.
ತೀರಾ ಗಾಬರಿಯಾಗುವಂತೆ ಹೆಚ್ಚುತ್ತಿರುವ ಕೊರೊನಾ ಸೊಂಕಿತರ ಸಂಖ್ಯೆಯ ನಡುವಿನ ಇಂದಿನ ಜಿಲ್ಲಾಡಳಿತದ ವರದಿಯಲ್ಲಿ ಒಟ್ಟು 64 ಪ್ರಕರಣಗಳು ದಾಖಲಾಗಿವೆ.
ಇಂದು ಶಿವಮೊಗ್ಗದಲ್ಲಿ 36 ಪ್ರಕರಣ ಕಂಡುಬಂದಿವೆ.
ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿ 6, ಭದ್ರಾವತಿಯಲ್ಲಿ 10, ಸೊರಬ ಹಾಗೂ ತೀರ್ಥಹಳ್ಳಿಯಲ್ಲಿ ತಲಾ 5 ಪ್ರಕರಣಗಳು ಪತ್ತೆಯಾಗಿದೆ.
ಒಟ್ಟು 933 ಪ್ರಕರಣಗಳಲ್ಲಿ 522 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದ
ಸೊಂಕಿತರಿಗೆ ಕೋವಿಡ್ ಆಸ್ಪತ್ರೆ ಹಾಗೂ ಗಾಜನೂರಿನ ಮುರಾರ್ಜಿ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

By admin

ನಿಮ್ಮದೊಂದು ಉತ್ತರ

error: Content is protected !!