ಶಿವಮೊಗ್ಗ :
ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಇಲಾಖೆಯಲ್ಲಿ ತರಬಹುದಾದ ಬದಲಾವಣೆ ಹಾಗೂ ಜನಮುಖಿಯಾಗಿರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ರಾಜ್ಯದ ಹಲವೆಡೆ ಪೊಲೀಸ್ ಠಾಣೆಯನ್ನು ಉನ್ನತೀಕರಿಸಲಾಗಿದೆ. ಆದರೆ ಸಿಬ್ಬಂದಿ ಕೊರತೆ ಹಾಗೆ ಇದೆ. ಇದನ್ನು ಸರಿಪಡಿಸಬೇಕಿದೆ. ಹಾಗೆಯೇ ಭಯೋತ್ಪಾದನೆ, ವಿದೇಶಿಗರು ಬಂದು ಇಲ್ಲಿ ಅಕ್ರಮವಾಗಿ ನೆಲೆಸಿರುವುದೂ ಸೇರಿದಂತೆ ಸಾಕಷ್ಟು ಸವಾಲುಗಳು ಇಲಾಖೆ ಮುಂದಿದೆ. ಸಾರ್ವಜನಿಕರು ಸಹ ಪೊಲೀಸ್ ಹೀಗೆ ಇರಬೇಕು ಎಂದು ಬಯಸುತ್ತಿ ದ್ದಾರೆ. ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನಿನ ಇತಿಮಿತಿಯೊಳಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯದ ಹಲವೆಡೆ ಕೇಂದ್ರದ ಎನ್ಐಎ ತಂಡ ಭಯೋತ್ಪಾದಕ ಚಟುವಟಿಕೆಯೊಂದಿಗೆ ಸಂಪರ್ಕ ಹೊಂದಿರುವವರನ್ನು ಬಂಧಿಸುತ್ತಿ ರುವ ಕುರಿತು ಮಾತನಾಡಿ, ಎನ್ಐಎ ಇದಕ್ಕಾಗಿರುವ ಒಂದು ಸಂಸ್ಥೆ ಅವರು ವಿಷಯವನ್ನು ಲಾಜಿಕ್ ಎಂಡ್ ಗೆ ಮುಟ್ಟಿಸುತ್ತಿದ್ದಾರೆ. ಪ್ರಕರಣ ಆಳಕ್ಕೆ ಅಂದರೆ ತಾಯಿ ಬೇರಿಗೆ ಇಳಿಯುತ್ತಿ ದ್ದಾರೆ. ಇದಕ್ಕೆ ಪೂರಕವಕಾಗಿ ಸ್ಥಳೀಯ ಪೊಲೀಸರು ಸಹ ಇಂತಹ ವಿಷಯದ ಬಗ್ಗೆ ಗಮನ ಹರಿಸಿ ಕಂಡು ಹಿಡಿಯುವಂತೆ ಮಾಡಬೇಕಿದೆ ಎಂದರು.
ಔರಾದ್ಕರ್ ವರದಿ ಜಾರಿ ಸೇರಿ ದಂತೆ ಅನೇಕ ಅಂಶಗಳು ನಮ್ಮ ಕಣ್ಣ ಮುಂದಿದೆ. ಬೇರೆ ಬೇರೆ ಆಯಾಮ ಗಳಿವೆ. ಅದನ್ನು ಅಧ್ಯಯನ ಮಾಡ ಬೇಕಿದೆ. ಹಾಗಾಗಿ ಸ್ವಲ್ಪ ಸಮಯ ಕೊಡಿ ಎಂದರು.
ಕೆಲ ಸಚಿವರು ತಮಗೆ ಸಿಕ್ಕ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿ ಸಿರುವುದರ ಕುರಿತು, ಪ್ರತಿಕ್ರಿಯಿಸಿದ ಅವರು, ಅದು ಯಾವುದೇ ಸರ್ಕಾರದಲ್ಲಿ ಇದ್ದದ್ದೆ. ಹಾಗೆ ನೋಡಿದರೆ ನಮ್ಮ ಪಕ್ಷದಲ್ಲಿ ಕಡಿಮೆ ಇದೆ. ಸಿಎಂ ಬೊಮ್ಮಾಯಿ ಅವರು ಇದನ್ನು ನಿಭಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಗೆ ಸಂಬಂಧಿಸಿದ ಮರಳು, ಜಲ್ಲಿ ಕ್ವಾರಿಗಳ ಸಮಸ್ಯೆ, 94 ಸಿ ಮೊದ ಲಾದ ಸಮಸ್ಯೆ ಬಗ್ಗೆ ಸಭೆ ನಡೆಸಿ ದ್ದೇವೆ. ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕಲ್ಲು ಕ್ವಾರಿಗಳ ಸಮಸ್ಯೆ ಬಗೆಹರಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ. ಅಫ್ಘಾನಿಸ್ತಾನ ರಾಜ್ಯದ ನಾಗರಿಕರ ಇರುವ ಬಗ್ಗೆ ಮಾಹಿತಿ ಪಡೆಯಲು ತಿಳಿಸಿದ್ದೇನೆ. ಈಗಾಗಲೇ ಪೋಲಿಸ್ ಅಧಿಕಾರಿ ಉಮೇಶ್ ಕುಮಾರ್ ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ರೌಡಿಸಂ ಮಟ್ಟ ಹಾಕಲು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಿಯಲ್ ಎಸ್ಟೇಟ್, ಮಾದಕ ವಸ್ತುಗಳ ಬಗ್ಗೆ ಕಡಿವಾಣ ಹಾಕಲು ಸಹ ಸೂಚನೆ ನೀಡಲಾಗಿದೆ. ಸೈಬರ್ ಕ್ರೈಮ್ ವಿಭಾಗ ಬಲ ಪಡಿಸಲಾಗಿದ್ದು ಇನ್ಫೋಸಿಸ್ ಸಂಸ್ಥೆ ಕೂಡ ಸೈಬರ್ ಕ್ರೈಮ್ ಗೆ ನೆರವು ನೀಡುತ್ತಿದೆ. ಭದ್ರಾವತಿ ಸೇರಿಸಿಕೊಂಡು ಶಿವಮೊಗ್ಗ ಕಮಿಷನರೇಟ್ ಸ್ಥಾಪನೆ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಆರಗ ಹೇಳಿದರು.