ಹದಿನೈದು ದಿನಕ್ಕೊಮ್ಮೆ ಕಾರ್ಯ
ಶಿವಮೊಗ್ಗ, ಆಗಸ್ಟ್ 19:
ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ನಿಗದಿತವಾಗಿ ಮಾಡಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಮಹಾಪೌರರು, ಉಪ ಮಹಾಪೌರರು, ಆಯುಕ್ತರು ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಸಮ್ಮುಖದಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡು ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಮನೆ ಮನೆ ಕಸ ಸಂಗ್ರಹಣೆಯ 41 ಪ್ಯಾಕೇಜ್ನ ಕೆಲಸಗಾರರಿಗೆ ಮಹಾನಗರಪಾಲಿಕೆ ವತಿಯಿಂದ ಸಹಾಯಧನ ನೀಡಲು ಕ್ರಮ ವಹಿಸಲಾಗುವುದು. ಹಾಗೂ ಪುನರ್ವಸತಿ ಕಲ್ಪಿಸಲು ಪಾಲಿಕೆಯ ಘನತ್ಯಾಜ್ಯ ವಾಹನಗಳಿಗೆ ಲೋಡರ್ಸ್ ಮತ್ತು ಡ್ರೈವರ್ಸ್ ಮತ್ತು ಪಾರ್ಕ್ಗಳ ನಿರ್ವಹಣೆಗಾಗಿ ಗಾರ್ಡನರ್ಸ್ ನೇಮಕ ಮಾಡಲು ಕ್ರಮ ವಹಿಸಲಾಗಿರುತ್ತದೆ.
ಈ ಪ್ರಸ್ತಾವಣೆನೆಯಂತೆ ಪ್ಯಾಕೇಜ್ದಾರರಿಗೆ ಸಹಾಯಧನ ಮತ್ತು ಕೆಲಸವನ್ನು ನೀಡಲು ಕ್ರಮ ವಹಿಸಲಾಗಿದ್ದು, ಹಂದಿ ಸಾಕಾಣಿಕೆಯನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಮಾಡಬಾರದೆಂದು ಈ ಮೂಲಕ ಪ್ಯಾಕೇಜ್ದಾರರಿಗೆ ನಿರ್ದೇಶಿಸಲಾಗಿದೆ.