ನವದೆಹಲಿ,ಆ.18 :
ಎಲ್ಲೆಡೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ರೀಟೇಲರ್​ಗಳು ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆಯನ್ನು ಮತ್ತೆ 25 ರೂ. ಏರಿಕೆ ಮಾಡಿವೆ.
ಕಳೆದ ಜುಲೈ 1 ನೇ ತಾರೀಕಿನಂದು ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯನ್ನು 25.50 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 862.5 ರೂ. ಇದೆ.ದೆಹಲಿಯಲ್ಲಿ ಅಡುಗೆ ಅನಿಲ ದರ 859.5 ರೂ. ಇದೆ. ಮುಂಬೈನಲ್ಲಿ 859.5 ರೂ. ಕೋಲ್ಕತ್ತಾದಲ್ಲಿ 886 ರೂ ಚೆನೈನಲ್ಲಿ 875.5 ರೂ ಆಗಿತ್ತು.
ನಿನ್ನೆ ಆಗಸ್ಟ್ 17 2021 ರ ಮಂಗಳವಾರದ ಹೊತ್ತಿಗೆ ಎಲ್​ಪಿಜಿ ಸಿಲಿಂಡರ್​ಗಳ ದರವು 25 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಸಾಮಾನ್ಯವಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಪ್ರತಿ ತಿಂಗಳ ಮೊದಲ ದಿನದಂದು ಬೆಲೆ ಏರಿಕೆ ಮಾಡುತ್ತವೆ. ಇಲ್ಲಿ ಉಲ್ಲೇಖ ಮಾಡಬೇಕಾದ ಅಂಶ ಏನೆಂದರೆ, ದೆಹಲಿಯಲ್ಲಿ ಈ ವರ್ಷದ ಆರಂಭದಲ್ಲಿ ಅಂದರೆ 2021ರ ಶುರುವಿನಲ್ಲಿ ಸಿಲಿಂಡರ್ ಬೆಲೆ 694 ರೂಪಾಯಿ ಇತ್ತು. ಇದೀಗ ಎಂಟು ತಿಂಗಳಲ್ಲಿ 165 ರೂಪಾಯಿ ಹೆಚ್ಚಳ ಆಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!