ಶಿವಮೊಗ್ಗ,ಜೂ.19:
ಪ್ರತಿ ವರ್ಷದಂತೆ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಮಾಡುವುದು ವಾಡಿಕೆಯಾಗಿದ್ದು, ಪ್ರಸ್ತುತ ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿಷೇಧಿಸಿರುವ ಕಾರಣ ಈ ಬಾರಿ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಬಿ ವಿತ್ ಯೋಗ ಬಿ ಅಟ್ ಹೋಮ್’ ಘೋಷವಾಕ್ಯದಡಿ ಮನೆಯಿಂದಲೇ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಸೂಚಿಸಿದೆ.
ಹಾಗೂ ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಇತರ ಇಲಾಖೆಗಳು, ಸಂಘ ಸಂಸ್ಥೆಗಳ ಸಮನ್ವಯದೊಂದಿಗೆ ಆಚರಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಿಲ್ಲಾ ಆಯುಷ್ ಅಧಿಕಾರಿಗಳು ಈ ಕೆಳಗೆ ನೀಡಿರುವ ಝೂಮ್ ಆ್ಯಪ್ ವಿವರಗಳನ್ನು ಬಳಕೆ ಮಾಡಿಕೊಂಡು ಜೂನ್ 21 ರಂದು ಬೆಳಿಗ್ಗೆ 7.00 ಗಂಟೆಯಿಂದ ನಡೆಯುವ ಆನ್‍ಲೈನ್ ಯೋಗ ಕಾರ್ಯಕ್ರಮದಲ್ಲಿ ಮನೆಯಿಂದಲೇ ತಪ್ಪದೇ ಭಾಗವಹಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಝೂಮ್ ಆ್ಯಪ್ ವಿವರಗಳು :
Zoom Meeting 1: https://us05web.zoom.us/j/6571338680?pwd=cm1ZYzJQUGo4NmZDZTU1U0h5bzdZdz09
Meeting ID: 657 133 8680
Password: Z9UaTv
Join us Morning Session- 6.45 To 8 am
Zoom Meeting 2:
https://us05web.zoom.us/j/5585624465?pwd=QIFqcVNFR1N4YVRRMFVkRnExaEd5Zz09
Meeting ID: 558 562 4465
Password: 043fUR
Join us Morning Session- 6.45 To 8 am
Zoom Meeting 3: https://us04web.zoom.us/j/74772578470?pwd=bzBCZWwwaWF3NUhEZU9yYmRHczN0Zz09 Meeting ID: 747 7257 8470
Passcode: 12345
Join us Morning Session- 6.45 To 8 am
ಅಂಚೆ ಇಲಾಖೆಯ ಯೋಗ ದಿನ
ಶಿವಮೊಗ್ಗ,ಜೂ.19: ಭಾರತೀಯ ಅಂಚೆ ಇಲಾಖೆಯು ಜೂ.21 ರಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪ್ರಧಾನ ಅಂಚೆ ಕಚೇರಿಗಳಾದ ಶಿವಮೊಗ್ಗ, ಭದ್ರಾವತಿ ಮತ್ತು ಸಾಗರದಲ್ಲಿ ಸ್ವೀಕೃತವಾಗುವ ಹಾಗೂ ಬಟವಾಡೆಯಾಗುವ ಎಲ್ಲಾ ಪತ್ರಗಳಿಗೆ ವಿಶೇಷ ಚಿತ್ರಾತ್ಮಕ ಮುದ್ರೆ ಒತ್ತಲಾಗುವುದು.
ಶಿವಮೊಗ್ಗ, ಭದ್ರಾವತಿ ಮತ್ತು ಸಾಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಆಸಕ್ತ ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಶಿವಮೊಗ್ಗ, ಭದ್ರಾವತಿ ಮತ್ತು ಸಾಗರ ಪ್ರಧಾನ ಅಂಚೆ ಕಚೇರಿಯಲ್ಲಿ ಈ ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಜೂ.21 ರಂದು ಕಾಯ್ದಿರಿಸಲಾಗಿದ್ದು, ವಿಶೇಷ ಚಿತ್ರಾತ್ಮಕ ಮುದ್ರೆ ಅಂತರಾಷ್ಟ್ರೀಯ ಯೋಗ ದಿನದಂದು ಚಿತ್ರಾತ್ಮಕ ವಿನ್ಯಾಸದೊಂದಿಗೆ ಬಿಡುಗಡೆಗೊಳ್ಳಲಿದೆ. ಇಂಗ್ಲೀμï ಭಾμÉಯಲ್ಲಿ ವಿಶೇಷ ಚಿತ್ರಾತ್ಮಕ ಮುದ್ರೆ ರೂಪಗೊಳಿಸಲಾಗುವುದರಿಂದ ಇಂತಹ ರದ್ದತಿಗಳು ಮೌಲ್ಯಯುತ ಸಂಗ್ರಹಣೆಗಳು ಮತ್ತು ಸಾಮಾನ್ಯವಾಗಿ ಅಂಚೆ ಚೀಟಿಗಳ ಸಂಗ್ರಹದ ವಿಷಯಗಳಾಗಿವೆ.
ಇತ್ತೀಚಿನ ವರ್ಷಗಳಲ್ಲಿ ಸ್ಟಾಂಪ್ ಸಂಗ್ರಹದ ಉತ್ಸಾಹವು ಕುಸಿತ ಕಂಡಿದೆ. ಹಾಗಾಗಿ ಈ ಹವ್ಯಾಸ ಅಥವಾ ಕಲೆಯನ್ನು ಪುನರುಜ್ಜೀವನಗೊಳಿಸಲು, ಭಾರತೀಯ ಅಂಚೆ ಇಲಾಖೆಯು ಅಂಚೆ ಚೀಟಿಗಳ ಸಂಗ್ರಹವಾಗಿ ರೂ.200 ಠೇವಣ ಖಾತೆಯನ್ನು ತೆರೆಯುವ ಮೂಲಕ ಗೊತ್ತುಪಡಿಸಿದ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂಚೆ ಚೀಟಿಗಳು ಮತ್ತು ವಿಶೇಷ ಕವರ್‍ಗಳನ್ನು ಆಸಕ್ತರು ಪಡೆಯಬಹುದಾಗಿದೆ.
ಈ ವರ್ಷದ ಯೋಗ ದಿನಾಚರಣೆಯನ್ನು ಯೋಗದೊಂದಿಗೆ ಮನೆಯಲ್ಲಿರಿ ಎಂಬ ಘೋಷ ವಾಕ್ಯವನ್ನು ಪ್ರಚಾರ ಮಾಡುತ್ತಿದೆ. ದೇಶವು 2ನೇ ಅಲೆಯಿಂದ ಸಹಜ ಸ್ಥಿತಿಗೆ ಮರಳುತ್ತಿದ್ದು, 800 ಕ್ಕೂ ಹೆಚ್ಚು ಪ್ರಧಾನ ಅಂಚೆ ಕಚೇರಿಗಳಲ್ಲಿ ಜೂ.21 ರಂದು ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಬಿಡುಗಡೆಗೊಳಿಸುವ ಮೂಲಕ ಅಂಚೆಚೀಟಿಗಳ ಸಂಗ್ರಹ ಮಾಡುವ ಹವ್ಯಾಸವನ್ನು ಮತ್ತೆ ಹುರಿದುಂಬಿಸುವ ಕಾರ್ಯ ಮಾಡುತ್ತಿವೆ ಎಂದು ಅಂಚೆ ಅಧೀಕ್ಷಕ ಜಿ.ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಯೋಗ
ಶಿವಮೊಗ್ಗ,ಜೂ.19:ನಗರದ ಆರ್ಟ್ ಆಫ್ ಲಿವಿಂಗ್ ಹಾಗೂ ಶ್ರೀ ರವಿಶಂಕರ್ ವಿದ್ಯಾಮಂದಿರ ಇವರ ಸಹಯೋಗದಲ್ಲಿ ಜೂನ್ 21 ರ ಸೋಮವಾರ 7ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಮಾರ್ಗದರ್ಶಕ ಶಬರೀಶ್ ಕಣ್ಣನ್ ತಿಳಿಸಿದ್ದಾರೆ.
ಯೋಗ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 5-45 ರಿಂದ ಆನ್‍ಲೈನ್ ಮೂಲಕ ಸರಳ ಯೋಗಾಭ್ಯಾಸ, ಆಸನ, ಪ್ರಾಣಾಯಾಮ, ಮುದ್ರೆ, ಧ್ಯಾನಾಭ್ಯಾಸ ಹೇಳಿಕೊಡಲಾಗುವುದು ಎಂದು ತಿಳಿಸಿದರು.
ಸಂಜೆ 7-30 ರಿಂದ ನಗರದ ಖ್ಯಾತ ಮಾನಸಿಕ ಹಾಗೂ ನರರೋಗ ತಜ್ಞ ಡಾ. ಎಸ್.ಟಿ. ಅರವಿಂದ್ ರವರು “ಮನೋವಿಕಾಸದ ಮಾರ್ಗಗಳು” ಕುರಿತಾದ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ತಮ್ಮ ಮೊಬೈಲ್ ನಲ್ಲಿ ಝೂಮ್ ಆಪ್ ಬಳಸಿ, ಮೀಟಿಂಗ್ ಐಡಿ : 6375922892, ಪಾಸ್ ವರ್ಡ್ : guಡಿuಜev ಉಪಯೋಗಿಸಬಹುದು ಎಂದು ಅವರು ಹೇಳಿದರು.
ಹೆಚ್ಚಿನ ಮಾಹಿತಿ ಹಾಗೂ ಲಿಂಕ್ ಗಾಗಿ ದೂ. 9964072793, 9481505853 ಸಂಪರ್ಕಿಸಬೇಕಾಗಿ ಶಬರೀಶ್ ಕಣ್ಣನ್ ಕೋರಿದ್ದಾರೆ.
ವರ್ಚುವಲ್ ಮೂಲಕ 7 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಜೂನ್ 21 ರ ಬೆಳಿಗ್ಗೆ ಶಿವಮೊಗ್ಗ ಒಳಾಂಗಣ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಉಪನ್ಯಾಸ ಕಾರ್ಯಕ್ರಮವನ್ನು ಕೋವಿಡ್ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆ ವರ್ಚುಯಲ್ ಮೂಲಕ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಜೂನ್ 21 ರ ಬೆಳಿಗ್ಗೆ 8.30 ರಿಂದ ಟಿ.ವಿ.ಭಾರತ್ ಚಾನಲ್, ಫೇಸ್‍ಬುಕ್ ಲೈವ್ ಹಾಗೂ ಯೂಟ್ಯೂಬ್ ಲೈವ್ ಮೂಲಕ ಪ್ರಸಾರವಾಗಲಿದೆ. ಆಸಕ್ತ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವರ್ಚುಯಲ್ ಮೂಲಕ ಭಾಗವಹಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.