ಜಾರಿ ಬಿದ್ದಿದ್ದ ಗೃಹಿಣಿ ಸಾವು
ಶಿವಮೊಗ್ಗ, ಜೂ. ೧೭: ತನ್ನ ಮನೆಯ ಹಿಂಭಾಗದಲ್ಲಿ ಆಕಸ್ಮಿಕ ವಾಗಿ ಜಾರಿ ಬಿದ್ದು ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದ ಗೃಹಿಣಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವಿಗೀ ಡಾದ ಘಟನೆ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೀಗಡಿ ಗ್ರಾಮದಲ್ಲಿ ನಡೆದಿದೆ.
ಮಂಡಗದ್ದೆ ಹೋಬಳಿ ಬಳಿ ೧೫ ನೇ ಮೈಲಿಗಲ್ಲಿನ ಬಳಿ ತಿರುವಿನ ಕೀಗಡಿ ಗ್ರಾಮದಲ್ಲಿ ಆನಂದ್ ಎಂಬುವರ ಪತ್ನಿ ಯಾದ ಗೀತಾ, (೪೫) ಮೊದಲ ಗಂಡ ಚಂದ್ರಪ್ಪ ರವರು ೬ ವರ್ಷ ಗಳ ಹಿಂದೆ ಮೃತ ಪಟ್ಟಿದ್ದು, ನಂತರ ಗೀತಾ ಅದೇ ಗ್ರಾಮದ ವಾಸಿ ಆನಂದ್ ಜೊತೆ ವಾಸವಾಗಿದ್ದರು.
ಮಂಗಳವಾರ ಗೀತಾ ಜಾರಿ ಬಿದ್ದಿದ್ದರಿಂದ ಹೆಚ್ಚಿನ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಮಂಡಗದ್ದೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಮನೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅವರ ಮಗಳು ಸುಧಾ ಪೊಲೀಸರಿಗೆ ದೂರು ನೀಡಿದ್ದಾರೆ.
ಅಸ್ವಾಭಾವಿಕ ಮರಣ ಪ್ರಕರಣವನ್ನು ದಾಖಲಿಸಿದೆ. ಸ್ಥಳಕ್ಕೆ ಮಾಳೂರು ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.
ವಿದ್ಯುತ್ ತಗುಲಿ ಅಣ್ಣ ತಮ್ಮ ಸಾವು
ಶಿವಮೊಗ್ಗ, ಜೂ. ೧೭: ಜಮೀನಿನಲ್ಲಿ ಬೋರ್ ವೇಲ್ ರಿಪೇರಿ ಮಾಡಲು ಹೋಗಿ ವಿದ್ಯುತ್ ಶಾಕ್ ನಿಂದ ಇಬ್ಬರು ಯುವಕರ ಸಾವನ್ನಪ್ಪಿದ ದಾರುಣ ಘಟನೆ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.
ಹಾರೋಗೊಪ್ಪ ಬಿ ಕ್ಯಾಂಪ್‌ನ ನಿವಾಸಿಗಳಾದ ಶಶಿಕುಮಾರ್ ನಾಯ್ಕ್ (೩೨) ಶೇಖರ್ ನಾಯ್ಕ್ (೩೬) ಮೃತರು.
ಬಿ.ಕ್ಯಾಪ್ ಹಾರೋಗೊಪ್ಪ ಸರ್ವೆ ನಂ ೫೨ರ ತಮ್ಮ ಜಮೀನಿನಲ್ಲಿ ಬೋರವೇಲ್ ರಿಪೇರಿ ಮಾಡಲು ಹೋಗಿ ವಿದ್ಯುತ್ ಆಘಾತದಿಂದ ಇವರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮನೆಗೆ ಆಧಾರ ವಾಗಿದ್ದ ಮಕ್ಕಳಿಬ್ಬರನ್ನೂ ಕಳೆದು ಕೊಂಡ ಕುಟುಂಬದ ದುಃಖ ಮುಗಿಲು ಮುಟ್ಟಿತ್ತು. ಈ ಸಂಬಂಧಿಸಿದ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನಕ್ಕೆ ಬಂದವರು ಕಟಾವು ಬಿಟ್ಟು ಪರಾರಿ
ಸಾಗರ, ಜೂ. ೧೭: ಶ್ರೀಗಂಧ ಮರವನ್ನು ಕಡಿದು ಸಾಗಿಸಲು ಯತ್ನಿಸಿದ ಘಟನೆ ಸಾಗರದ ವಿಜಯ ನಗರ ಬಡಾವಣೆಯ ಸಮೀಪದ ಜಂಬಗಾರುವಿನಲ್ಲಿ ನಡೆದಿದೆ.
ವಿಜಯನಗರ ಬಡಾವಣೆಯ ಸಮೀಪದ ಜಂಬಗಾರುವಿನ ಹಿರಿಯಣ್ಣಯ್ಯ ಅವರ ಜಾಗದಲ್ಲಿ ಶ್ರೀಗಂಧದ ಮರವಿದೆ. ಇದನ್ನು ಕಡಿದು ಸಾಗಿಸಲು ಕಳ್ಳರು ಯತ್ನಿಸಿ ದ್ದಾರೆ. ಆದರೆ ಮನೆಯವರು ಮತ್ತು ಸ್ಥಳೀಯರು ಕೂಗಿ ಬೆದರಿಸಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳರ ಕೃತ್ಯವನ್ನು ಗಮನಿಸಿದ ಸ್ಥಳೀಯರು ಕೂಗಿದ್ದಾರೆ. ಅಲ್ಲದೇ ಕಳ್ಳರನ್ನು ಬೆದರಿಸಿದ್ದಾರೆ. ಹಾಗಾಗಿ ಕೃತ್ಯ ವನ್ನು ಅರ್ಧಕ್ಕೆ ನಿಲ್ಲಿಸಿ ಕಳ್ಳರು ಪರಾರಿ ಯಾಗಿರುವ ವಿಡಿಯೋ ವೈರಲ್ ಆಗಿದೆ.