ಶಿವಮೊಗ್ಗ, ಜು.12:
ಶಿವಮೊಗ್ಗ ಜಿಲ್ಲಾ ಕೊರೊನಾ ಕಥೆಯ ತುಂಬಾ ವ್ಯಥೆಗಳೇ ತುಂಬಿವೆ. ಜಿಲ್ಲೆಯ ದಾಖಲೆ ಪ್ರಕಾರ 56 ಜನರಿಗೆ ಸೊಂಕು ಕಾಣಿಸಿಕೊಂಡಿದೆ. ಅದರಲ್ಲಿ 44 ಪ್ರಕರಣಗಳು ಶಿವಮೊಗ್ಗ ನಗರದಲ್ಲಿ ಕಾಣಿಸಿಕೊಂಡಿದೆ.
ಈಗಿನ ಮಾಹಿತಿ ಪ್ರಕಾರ ಅರ್ಧ ಸಾವಿರದ ಗಡಿದಾಟಿದೆ. 541 ಜನರಿಗೆ ಜಿಲ್ಲೆಯಲ್ಲಿ ಸೊಂಕು ಕಾಣಿಸಿಕೊಂಡಿದೆ.
ಜಿಲ್ಲೆಯ 20945ಜನರ ಪರೀಕ್ಷೆ ನಡೆದಿದ್ದು ಅದರಲ್ಲಿ ಇಷ್ಟು ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯ ಹಾಗೂ ಜಿಲ್ಲಾ ಮಾಹಿತಿಗಳ ಗೊಂದಲಗಳ ನಡುವಿನ ಮಾಹಿತಿಯಲ್ಲಿ ಜಿಲ್ಲಾ ವರದಿ ಸಮರ್ಪಕವಾಗಿದೆ ಹಾಗೂ ಕಾಲಕಾಲಕ್ಕೆಸರಿಯಾದ ಮಾಹಿತಿ ಸಿಗುತ್ತದೆ ಎಂದು ಜಿಲ್ಲಾಡಳಿತದ ಮೂಲಗಳು ಹೇಳಿವೆ.
ಜಿಲ್ಲೆಯ ಕೊರೊನಾ ಸಾವಿನ ಸಂಖ್ಯೆ 9 ಆಗಿದ್ದು ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಮೆಗಾನ್ ಅವ್ಯವಸ್ಥೆಯ ಆಗರ
ಪತ್ರಿಕೆ ಮೂಲಗಳ ಪ್ರಕಾರ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಸ್ವಚ್ಚತಾ ಕಾರ್ಯ ಅಷ್ಟಕಷ್ಟೆ ಎನ್ನುವಂತಿದೆ. ಬಿಪಿ, ಶುಗರ್ ಸೇರಿದಂತೆ ವಿವಿಧ ಕಾಯಿಲೆ ಹೊಂದಿದವರೂ ಇರುವ ಕೋವಿಡ್ ಸೊಂಕಿತರಿಗೆ ಸರಿಯಾಗಿ ಊಟ ನೀರು ಸಿಗುತ್ತಿಲ್ಲವಂತೆ. ಕಷ್ಟದ ಬದುಕು ಇದಾಗಿದೆ. ನಮ್ಮನ್ನ ಗಾಜನೂರಿಗೆ ಇಲ್ಲವೇ ಮನೆಗೆ ಕಳಿಸಿ ಎಂದು ಸೊಂಕಿತರು ಗೋಗರೆಯುತ್ತಿದ್ದಾರೆಂದು ಮೂಲಗಳು ಹೇಳಿವೆ. ಈ ಕಷ್ಟದ ಬದುಕು ಸರಿಯಾಗದಿದ್ದರೆ ಕಷ್ಟ.

By admin

ನಿಮ್ಮದೊಂದು ಉತ್ತರ

error: Content is protected !!