ಶಿವಮೊಗ್ಗ: ನರೇಂದ್ರ ಮೋದಿ ವಿಚಾರ ಮಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎನ್ಎಸ್ಯುಐ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ಎಂದು ಹೇಳುವ ಜಿಲ್ಲಾಡಳಿತ ಸೂಲಿಬೆಲೆಯ ಭಾಷಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದನ್ನು ಖಂಡಿಸಿರುವ ಎನ್ಎಸ್ಯುಐ ಕಾರ್ಯಕ್ರಮ ಸ್ಥಳಕ್ಕೆ ಹೋಗಲೆತ್ನಿಸಿದಾಗ ಪೊಲೀಸರು ಅವರನ್ನು ತಡೆದರು.
ಗೋ ಬ್ಯಾಕ್ ಸೂಲಿಬೆಲೆ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರು ನೆಹರೂ ಕ್ರೀಡಾಂಗಣದತ್ತ ಧಾವಿಸಿದಾಗ ಮಧ್ಯದಲ್ಲಿಯೇ ಅವರನ್ನು ತಡೆಯಲಾಯಿತು. ಕೋವಿಡ್ ನಿಯಮ ಉಲ್ಲಂಘಿಸಿ ಸುಳ್ಳು ಬಾಷಣ ಮಾಡಲು ಜಿಲ್ಲಾಡಳಿತ ಅವಕಾಶ ಕೊಟ್ಟಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಚೇತನ್, ಮಧುಸೂದನ್, ಬಾಲಾಜಿ ಮತ್ತಿತರರಿದ್ದರು.