ಶಿವಮೊಗ್ಗ: ಒಂದು ದೇಶ ಒಂದು ಚುನಾವಣೆ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬಹುದು, ಎಲ್ಲಕ್ಕೂ ಮಿಗಿಲಾಗಿ ರೂಪಿಸುವ ನೀತಿಗಳನ್ನು ಅನುಷ್ಠಾನಕ್ಕೆ ತರಲು ಅನುಕೂಲವಾಗುತ್ತದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನೆಹರೂ ಕ್ರೀಡಾಂಗಣದ ಹೊರಮೈದಾನದಲ್ಲ್ಲಿ ಶನಿವಾರ ಸಂಜೆ ನರೇಂದ್ರ ಮೋದಿ ವಿಚಾರ್ ಮಂಚ್ ಏರ್ಪಡಿಸಿದ್ದ ಒಂದು ದೇಶ ಒಂದು ಚುನಾವಣೆ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ನರೇಂದ್ರ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದವರಲ್ಲ. ೧೯೯೯ರಲ್ಲಿ ಲಾ ಕಮಿಷನ್ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಆನಂತರ ಸಂಸದೀಯ ಸಮಿತಿಯೂ ಸಹ ಈ ಬಗ್ಗೆ ರಚಿತವಾಗಿತ್ತು. ಈ ಹಿಂದೆ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಖುರೇಷಿ ಎನ್ನುವವರೂ ಸಹ ಒಂದು ದೇಶ, ಒಂದು ಚುನಾವಣೆಯ ಬಗ್ಗೆ ಒತ್ತಿ ಹೇಳಿದ್ದರು. ೨೦೧೮ರಲ್ಲಿ ನೀತಿ ಆಯೋಗವು ಇದನ್ನೇ ಸರಕಾರಕ್ಕೆ ಸೂಚಿಸಿತ್ತು. ಅಲ್ಲಿಂದ ಆರಂಭವಾದ ಈ ಚರ್ಚೆ ಇಂದು ರಾಜಕೀಯ ಆಯಾಮ ಪಡೆದುಕೊಂಡಿದೆ. ಆದರೆ ಇದನ್ನು ರಾಜಕೀಯವಾಗಿ ನೋಡಬಾರದು. ಜನರ ಅನುಕೂಲಕ್ಕೆ ಮತ್ತು ದೇಶದ ಪ್ರಗತಿಗೆ ಇದು ಅನಿವಾರ್‍ಯ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಈ ವಿಷಯವನ್ನು ಅರಂಭದಿಂದಲೂ ವಿರೋಧಿಸುತ್ತಲೇ ಬಂಧಿವೆ. ಏಕೆಂದರೆ ಇದು ಜಾರಿಯಾದಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದುಬಿಡುತ್ತದೆ ಎಂಬ ಹೆದರಿಕೆ ಅವರಲ್ಲಿದೆ. ಆದರೆ ಪ್ರಧಾನಿ ಮೋದಿ ಇದನ್ನು ಇಷ್ಟಕ್ಕೇ ಬಿಡುವುದಿಲ್ಲ. ಜಾರಿಗೊಳಿಸುವುದು ನಿಶ್ಚಿತ. ಅವರು ಯಾವುದೇ ವಿಷಯವನ್ನು ಜಾರಿಗೊಳಿಸುವ ಮುನ್ನ ಸಾರ್ವಜನಿಕ ಚರ್ಚೆಗೆ ಬಿಡುತ್ತಾರೆ. ಸಿಎಎ , ಆರ್ಟಿಕಲ್ ೩೭೦ಯನ್ನೇ ಉದಾಹರಣೆಯಗಿ ನೋಡಬಹುದು. ರೈತ ಮಸೂದೆಯ ಬಗ್ಗೆಯೂ ಚರ್ಚೆಗೆ ಬನ್ನಿ ಎಂದು ಕರೆಕೊಟ್ಟರೂ ಸರದಾರಜಿಗಳು ಮಸೂದೆ ವಾಪಸಾತಿಗೆ ಹಠ ಹಿಡಿದಿದ್ದಾರೆ. ಆದರೆ ಸಾರ್ವಜನಿಕರೆದುದು ರಾಜಕೀಯ ಪಕ್ಷದವರು ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸ್ವಾತಂತ್ರ ಸಿಕ್ಕ ಕೆಲವು ವರ್ಷ ಎರಡೂ ಚುನಾವಣೆಗಳು ಒಟ್ಟಿಗೇ ನಡೆದವು. ಆದರೆ ತದನದಂತರ ಕೆಲವು ಕಾರಣಗಳಿಂದ ಮತ್ತು ರಾಜಕೀಯ ಕಾರಣಗಳಿಂದ ಚುನಾವಣೆ ಬೇರೆಯಾಗಿ ನಡೆಯತೊಡಗಿದೆ. ಪ್ರತಿ ಚುನಾವಣೆಯೂ ಸಾವಿರಾರು ಕೋಟಿ ರೂ. ನಷ್ಟವನ್ನು ಮಾಡುತ್ತಿದೆಯಲ್ಲದೆ, ಮಾದರಿ ನೀತಿ ಸಂಹಿತೆ ಹೆಸರಲ್ಲಿ ಅಭಿವೃದ್ಧಿ ನಿಲ್ಲುತ್ತಿದೆ. ಸರಕಾರ ಈ ಅವಧಿಯಲ್ಲಿ ಇದ್ದೂ ಸತ್ತಂತಾಗಿರುತ್ತದೆ ಎಂದು ವಿವರಿಸಿದರು.
೨೦೦೯ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ೧೧೧೫ ಸಾವಿರ ಕೋಟಿ ರೂ, ೨೦೧೪ರ ಲೋಕಸಭೆ ಚುನಾವಣೆಗೆ ೩೮೭೦ ಸಾವಿರ ಕೋಟಿ ರೂ. ವ್ಯಯವಾಗಿದೆ,. ೨೦೨೦೪ರ ಲೋಕಸಭೆ ಚುನಾವಣೆಗೆ ಅಂದಾಜು ೫೫೦೦ ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಲೆಕ್ಕ ನೀಡಿದ ಅವರು, ಕಳೆದ ವರ್ಷ ಜರುಗಿದ ಬಿಹಾರ ವಿಧಾನಸಭೆಗೆ ೩೦೦ ಕೋಟಿ ರೂ. ಗುಜರಾತ್ ಚುನಾವಣೆಗೆ ೨೫೦ ಕೋಟಿ ಖರ್ಚಾಗಿದೆ. ಕರ್ನಾಟಕದ ವಿದಾನಸಭೆಗೂ ೩೦೦ ಕೋಟಿಯಷ್ಟು ಬೇಕಾಗುತ್ತದೆ. ಲೋಕಸಭೆ ಚುನಾವಣೆ ಖರ್ಚನ್ನು ಕೇಂದ್ರವು, ವಿಧಾನಸಭೆ ಚುನಾವಣೆ ಖರ್ಚನ್ನು ರಾಜ್ಯವು ಭರಿಸಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿಧಾನಸಪರಿಷತ್ ಮಾಜಿ ಸಭಾಪತಿ ಡಿ. ಎಚ್. ಶಂಕರಮೂರ್ತಿ, ನರೇಂದ್ರ ಮೋದಿ ವಿಚಾರ ಮಂಚ್‌ನ ರಾಷ್ಟ್ರಾರ್ಧಯ್ಕಷ ರವಿ ಚಾಣಕ್ಯ ಉಪಸ್ಥಿತರಿದ್ದರು. ಮಂಚ್‌ನ ರಾಜಾಧ್ಯಕ್ಷ ಬಳ್ಳೆಕೆರೆ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು.
……

By admin

ನಿಮ್ಮದೊಂದು ಉತ್ತರ

error: Content is protected !!