ಶಿವಮೊಗ್ಗ:n.29: ಸೊರಬದ ಕೆಲವು ಬಿಜೆಪಿ ಕಾರ್ಯಕರ್ತರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕೆಲವು ಮುಖಂಡರು ಸಂಘಟನೆಗೆ ತೊಡಕಾಗುವಂತೆ ಸಭೆ ಮಾಡಿ ಪತ್ರಿಕಾಗೋಷ್ಠಿ ಮಾಡಿರುವುದು ಕಂಡುಬಂದಿದೆ. ಈ ಹಿಂದೆ ಸಹ ಇದೇ ಕಾರ್ಯಕರ್ತರುಗಳು ಹಲವು ಪ್ರಮುಖರ ಬಗ್ಗೆ ಹಗುರವಾಗಿ

ಮಾತನಾಡಿದಾಗಲೂ ಕೂಡ ಪಕ್ಷ ಸಹಿಸಿಕೊಂಡು ತಿದ್ದಿಕೊಳ್ಳಲು ಅವಕಾಶ ನೀಡಿತ್ತು ಹಾಗೂ ಪಕ್ಷದ ಆಂತರಿಕ ವಿ?ಯವನ್ನು ಬಹಿರಂಗ ವೇದಿಕೆಯಾಗಲಿ, ಪತ್ರಿಕಾ ಮಾದ್ಯಮದ ಎದುರಾಗಲೀ ಚರ್ಚಿಸದಂತೆ ಸೂಚಿಸಲಾಗಿತ್ತು ಎಂದಿದ್ದಾರೆ.


ಆದಾಗ್ಯೂ ಸಹ ಸಂಘಟನೆಯ ಕೆಲಸ, ಸದಸ್ಯತ್ವ ಅಭಿಯಾನ” ಮತ್ತು “ಸಂಘಟನಾ ಪರ್ವ” ನಡೆಯುತ್ತಿರುವ ಈ ಸಂದರ್ಭದಲ್ಲಿ ಮತ್ತದೇ ತಪ್ಪು ಮರುಕಳಿಸಿದೆ. ಮಂಡಲ ಅಧ್ಯಕ್ಷರ ಮತ್ತು ಜಿಲ್ಲಾ ಅಧ್ಯಕ್ಷರ ವಿರುದ್ಧ ಮಾತನಾಡಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.


ಈ ರೀತಿ ನಡುವಳಿಕೆ ಪಕ್ಷದ ಶಿಸ್ತಿಗೆ ದಕ್ಕೆತರುವುದನ್ನು ಸಹಿಸಲು ಸಾಧ್ಯವಿಲ್ಲವೆಂದು ನಿರ್ಧರಿಸಲಾಗಿದೆ. ಮಂಡಲ ಕಾರ್ಯಕರ್ತರ ಮನಸ್ಸಿನ ಭಾವನೆಯೂ ಸಹ ಇದೇ ಆಗಿದೆ. ಮಂಡಲ ವರದಿಯ ಮೇರೆಗೆ ಈ ಎಲ್ಲಾ ಕಾರಣಗಳಿಂದ ಎಂ.ಡಿ ಉಮೇಶ್, ವೃತ್ತಿಕೊಪ್ಪ ಮಲ್ಲಿಕಾರ್ಜುನ್, ಗುರುಕುಮಾರ್ ಪಾಟೀಲ್, ಶಿವನ ಗೌಡ, ಕೃ?ಮೂರ್ತಿ ಇವರುಗಳನ್ನು ಈ ತಕ್ಷಣ ಪಕ್ಷದಿಂದ ಉಚ್ಚಾಟಿಸಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!