ಸಾಗರ n 29 : ಡಿ. ೧ರಂದು ಮುರುಘಾಮಠದ ಕಂಚಿನ ರಥ ದೀಪೋತ್ಸವ ನಡೆಯಲಿದೆ. ದೀಪೋತ್ಸವ ಅಂಗವಾಗಿ ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ತಿಳಿಸಿದರು.


ತಾಲ್ಲೂಕಿನ ಆನಂದಪುರಂ ಸಮೀಪದ ಮುರುಘಾಮಠದಲ್ಲಿ ಗುರುವಾರ ಮಾತನಾಡಿದ ಅವರು, ಬೆಳಿಗ್ಗೆ ೧೦ಗಂಟೆಗೆ ಸರ್ಜಿ ಫೌಂಡೇಶನ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ ಹಿಂಡಸಘಟ್ಟ ಉದ್ಘಾಟಿಸಲಿದ್ದಾರೆ ಎಂದರು.


ನಂತರ ನಡೆಯುವ ೫೮೫ನೇ ಶಿವಾನುಭವ ಗೋಷ್ಟಿ ಸಾನಿಧ್ಯವನ್ನು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ವಹಿಸಲಿದ್ದು, ತಾಳಗುಪ್ಪ ಕೂಡಲಿಮಠದ ಶ್ರೀ ಸಿದ್ದವೀರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ರಟ್ಟಿಹಳ್ಳಿ ಕಬ್ಬಿಣತಂತಿ ಮಠದ ಶ್ರ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ವೇದಿಕೆಯಲ್ಲಿ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದು, ನಂತರ ನಾಗರತ್ನಮ್ಮ ಚಂದ್ರಶೇಖರಯ್ಯ, ಸುಮಾ ವಿ. ಹೆಗಡೆ, ಗೀತಾ ಸೋಮೇಶ್ ಅವರಿಂದ ವಚನ ಸಂಗೀತ ಇರುತ್ತದೆ. ಮಧ್ಯಾಹ್ನ ೧ಕ್ಕೆ ಮಹಾದಾಸೋಹವಿದ್ದು, ಸಂಜೆ ೪ಕ್ಕೆ ಶ್ರೀಗಳ ಸಾನಿಧ್ಯದಲ್ಲಿ ಶೂನ್ಯ ಪೀಠಾರೋಹಣ ಇರುತ್ತದೆ ಎಂದು ತಿಳಿಸಿದರು.


ಸಂಜೆ ೪-೩೦ಕ್ಕೆ ನಡೆಯುವ ಭಾವೈಕ್ಯ ಸಮ್ಮೇಳನದ ಸಾನಿಧ್ಯವನ್ನು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು, ಕಾಶಿ ಜಂಗಮವಾಡಿ ಮಠದ ಶ್ರೀ ೧೦೦೮ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರು ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಸೆ ಕಲಾವಿದೆ ಚಿತ್ತಾರ ಲಕ್ಷ್ಮೀ ರಾಮಪ್ಪ ಅವರಿಗೆ ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವೇದಿಕೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಬಿ.ಕೆ.ಸಂಗಮೇಶ್, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಎಸ್.ಎಲ್.ಭೋಜೇಗೌಡ್ರು, ಡಾ. ಧನಂಜಯ ಸರ್ಜಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕ ಹರತಾಳು ಹಾಲಪ್ಪ, ಆರ್.ಎಂ.ಮಂಜುನಾಥ ಗೌಡ ಇನ್ನಿತರರು ಉಪಸ್ಥಿತರಿದ್ದು, ಡಾ. ಶುಭ ಮರವಂತೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.


ಜನರಲ್ ಬಿ.ಎಸ್.ರಾಜು, ಡಾ. ರಾಮಪ್ಪ ಸಿಗಂದೂರು, ಪ್ರಕಾಶ್ ರುಕ್ಮಯ್ಯ, ಅರುಣಕುಮಾರ್, ದಿನೇಶ್ ಬರದವಳ್ಳಿ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ವಿವಿಧ ಕ್ಷೇತ್ರದ ಸಾಧಕರಿಗೆ ಗುರುರಕ್ಷೆ ಪುರಸ್ಕಾರ ಇರುತ್ತದೆ. ನಾಟ್ಯತರಂಗ ಸಂಸ್ಥೆಯಿಂದ ಭರತನಾಟ್ಯ, ವಿದುಷಿ ವಸುಧಾ ಶರ್ಮ ಅವರಿಂದ ಸಂಗೀತ, ಆದಿಶಕ್ತಿ ಮಹಿಂಅ ಮಂಡಳಿಯಿಂದ ಭಜನೆ ಇರುತ್ತದೆ. ಕೆಳದಿ ಅರಸರ ಕಾಲದಿಂದಲೂ ಮುರುಘಾಮಠದ ಕಂಚಿನ ರಥ ದೀಪೋತ್ಸವ ಪ್ರಸಿದ್ದಿ ಪಡೆದಿದ್ದು ಕೆಳದಿ ನೃಪವಿಜಯದಲ್ಲಿ ದಾಖಲಾಗಿದೆ. ಶ್ರೀಮಠದ ದೀಪೋತ್ಸವಕ್ಕೆ ಎಲ್ಲಾ ಜಾತಿಜನಾಂಗದವರು ದೇಣಿಗೆ ನೀಡುವ ಮೂಲಕ ಯಶಸ್ಸಿಗೆ ಸಹಕಾರ ನೀಡುತ್ತಿದ್ದು, ಡಿ. ೧ರಂದು ನಡೆಯುವ ದೀಪೋತ್ಸವ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳಲು ತಿಳಿಸಿದರು.
ದೀಪೋತ್ಸವ ಸಮಿತಿ ಅಧ್ಯಕ್ಷ ಕೆ.ಎಚ್.ಜ್ಞಾನೇಶ್ವರಪ್ಪ, ಪ್ರಧಾನ ಕಾರ್ಯದಶಿ ಗಿರೀಶ್ ಬೇಸೂರು, ಸಾಗರ ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಗುಂಡಾಲಿ, ಮುರುಗೇಶಪ್ಪ, ಚಂದ್ರಪ್ಪ, ನಾಗಭೂಷಣ, ರಮೇಶ್, ಮಲ್ಲಿಕಾರ್ಜುನ, ಸೋಮೇಶೇಖರ್, ಜಿ.ಪಿ.ರಾಜೇಂದ್ರ, ದೇವೇಂದ್ರ ಗೌಡ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!