ಸಾಗರ :n.23: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಗೆಲುವು ದಾಖಲಿಸಿರುವ ಹಿನ್ನೆಲೆಯಲ್ಲಿ ಶನಿವಾರ ಸಾಗರ ಹೋಟೆಲ್ ವೃತ್ತದಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಅದ್ವಿತೀಯ ಗೆಲುವು ದಾಖಲಿಸಲು ಕಾಂಗ್ರೇಸ್ ಪಕ್ಷ ಜನರಿಗೆ ನೀಡಿರುವ ಯೋಜನೆಗಳೆ ಕಾರಣವಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್
ನೇತೃತ್ವದಲ್ಲಿ ರಾಜ್ಯದಲ್ಲಿ ಅತ್ಯಂತ ಜನಪರವಾದ ಸರ್ಕಾರ ನಡೆಯುತ್ತಿದ್ದು ಸರ್ಕಾರಕ್ಕೆ ಮತ್ತಷ್ಟು ಶಕ್ತಿ ತುಂಬಲು ರಾಜ್ಯದ ಜನರು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಮೂಡಾ, ವಾಲ್ಮೀಕಿ, ವಕ್ಫ್ ಬಗ್ಗೆ ಬಿಜೆಪಿ ಮಾಡುತ್ತಿದ್ದ ಆರೋಪ ನಿರಾಧಾರ ಎನ್ನುವುದು ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ ಎಂದರು.
ಸಂಡೂರು ಉಪ ಚುನಾವಣೆಯಲ್ಲಿ ನಮ್ಮ ನಾಯಕರಾದ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಸಾಗರದಿಂದ ಕಾಂಗ್ರೇಸ್ ಪ್ರಮುಖರು ಪ್ರಚಾರ ಕೈಗೊಂಡಿದ್ದೇವು. ನಾವು ಪ್ರಚಾರ ನಡೆಸಿದ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಇನ್ನಷ್ಟು ಭದ್ರವಾಗಿ ನೆಲೆಯೂರಲಿದ್ದು, ಇನ್ನಷ್ಟು ಜನಪರ ಕಾರ್ಯಕ್ರಮ ನೀಡಲಿದೆ ಎಂದರು.
ಐ.ಎನ್.ಸುರೇಶಬಾಬು ಮತ್ತು ಜ್ಯೋತಿ ಕೋವಿ ಮಾತನಾಡಿದರು. ಕಾಂಗ್ರೇಸ್ ಪ್ರಮುಖರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಡಿ.ದಿನೇಶ್, ಅನ್ವರ್ ಭಾಷಾ, ಮಕ್ಬೂಲ್ ಅಹ್ಮದ್, ಮರಿಯಾ ಲೀಮಾ, ಚಂದ್ರಪ್ಪ ಎಲ್., ಗಣಾಧೀಶ್, ಬಸವರಾಜ ಕುಗ್ವೆ, ಭೀರೇಶ್ ಕಾಗೋಡು, ರಮೇಶ್ ಚಂದ್ರಗುತ್ತಿ, ಮೈಕೆಲ್ ಡಿಸೋಜ ಇನ್ನಿತರರು ಹಾಜರಿದ್ದರು.