ಸಾಗರ : ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂಬಾರಗುಂಡಿ ಗ್ರಾಮದ ಒಂಟಿಮನೆಯಲ್ಲಿ ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ ಮಾಡಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಕುಂಬಾರಗುಂಡಿ ಗ್ರಾಮದಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಚಾಕು ತೋರಿಸಿ, ಕೋಣೆಯಲ್ಲಿ ಕೂಡಿ ಹಾಕಿ ಮಾಂಗಲ್ಯ ಸರ, ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದನು. ಈ ಸಂಬಂಧ ಮಹಿಳೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.


ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ಬೆಂಗಳೂರಿನ ಬಿಡದಿ ಹತ್ತಿರದ ಕೆಂಚನಗುಪ್ಪೆ ಮರ್ದಮ್ಮ ದೇವಸ್ಥಾನದ ಬಳಿ ವಾಸವಿದ್ದ ಟೋಯೋಟೋ ಕಂಪನಿಯಲ್ಲಿ ಮಿಷನ್ ಆಪರೇಟರ್ ಅಗಿ ಕೆಲಸ ಮಾಡುತ್ತಿದ್ದ ಪವನ್ ಎಚ್.ಎಸ್. ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು ೪೦ ಗ್ರಾಂ ತೂಕದ ೨೭೮೨೩೧ ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ಮಾಂಗಲ್ಯ ಸರವನ್ನು ರಾಮನಗರ ಜಿಲ್ಲೆ ಬಿಡದಿಯ ಮುತ್ತೂಟ್ ಮಿನಿ ಫೈನಾನ್ಸಿಯರ‍್ಸ್ ಲಿಮಿಟೆಡ್‌ನಿಂದ ವಶಕ್ಕೆ ಪಡೆಯಲಾಗಿದೆ.


ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯ್ಕ್, ಸಿಬ್ಬಂದಿಗಳಾದ ಶೇಕ್ ಫೈರೋಜ್ ಅಹ್ಮದ್, ಸನಾವುಲ್ಲಾ, ರವಿಕುಮಾರ್, ಹನುಮಂತ ಜಂಬೂರು, ನಂದೀಶ್, ಪ್ರವೀಣ ಕುಮಾರ್, ಗಿರೀಶ್ ಬಾಬು ಇನ್ನಿತರರು ಪಾಲ್ಗೊಂಡಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!