ಕಾಲ್ಪನಿಕ ಚಿತ್ರ

ಶಿವಮೊಗ್ಗ, ಜೂ.28: ಕೋವಿಡ್19 ಕೊರೊನಾ ಕಥೆ… ಅದರೊಳಗಿನ ವ್ಯಥೆಗೆ ತಲೆ ಬುಡವಿಲ್ಲದಂತೆ ಮಾತಾಡುವ ಜನರೇ…, ಅಧಿಕಾರಿಗಳೇ ಒಂದು ಕ್ಷಣ ಈ ಘಟನೆ ಅವಲೋಕಿಸಿ.
ಶಿವಮೊಗ್ಗದ ಕೊರೊನಾ ಕಥೆ ಕೇಳಿದ್ದೀರಿ. ಅದರೊಳಗಿನ ಕಷ್ಟ ಸುಖ ಕೇಳಿದ್ದೀರಿ. ಸ್ಪಂದನೆ ಕೇಳಿದ್ದೀರಿ. ಜಿಲ್ಲಾಡಳಿತ ಹಾಗೂ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕಷ್ಟ ಕೇಳಿದ್ದೀರಿ. ಆದರೆ, ಬಸವನಗುಡಿಯ ಆರೋಗ್ಯ ಇಲಾಖೆ ಸಿಬ್ಬಂದಿ ಕುಟುಂಬದ ಕಷ್ಟ ಕೇಳಿದರೆ ಛೇ…, ಬದುಕೇ ಎನ್ನುವಿರಿ.
ಇಂದು ಬಸವನಗುಡಿಯ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಸೊಂಕು ತಗುಲಿದೆ. ಅದೂ ಶಿವಮೊಗ್ಗದ ಕೊವಿಡ್ 19 ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ನರ್ಸ್ ಮನೆಗೆ ಇದು ದಳ್ಳುರಿಯಿಟ್ಟಿದೆ.
ಆ ಮಹಿಳೆಗೆ, ಮಗನಿಗೆ ಸೊಂಕಿಲ್ಲ. ಶಿರಾ ಮೂಲದ ಸಂಬಂಧಿ ಆಗಮನದಿಂದ ಅವರ ಯಜಮಾನರಿಗೆ, ಇಬ್ಬರು ಹೆಣ್ಣು ಮಕ್ಕಳಿಗೆ, ಅತ್ತೆಗೆ ಕೊರೊನಾ ಸೊಂಕು ಕಾಣಿಸಿಕೊಂಡಿದೆ.
ಜಿಲ್ಲಾ ಆರೋಗ್ಯ ಇಲಾಖೆ ಸ್ಯಾನಿಟೈಜರ್ ಹಿಡೆಸಿ… ನಾಲ್ವರನ್ನ ಆಸ್ಪತ್ರೆಗೆ ಕಳಿಸಿ ಮನೆಗೆ ಹೋಗಿದರ. ಕ್ವಾರಂಟೈನ್ ನಲ್ಲಿದ್ದ ನರ್ಸ್ ಹಾಗೂ ಅವರ ಮಗನ ಕಥೆ ಏನು?
ಹೊರಗೋಗುವಂತಿಲ್ಲ.,
ಊಟವಿಲ್ಲ. ಮೋಟರ್ ಕೈ ಕೊಟ್ಡಿರುವುದರಿಂದ ನೀರಿಲ್ಲ. ಕನಿಷ್ಟ ಊಟ ಇದೆಯಾ ಎಂದು ಕೇಳಲಾಗದ ಈ ವ್ಯವಸ್ಥೆಗೆ ದಿಕ್ಕಾರವಿರಲಿ. ಬಂದ್ರೆ ಬರಲಿ ಕೊರೊನಾ. ಹಸಿವನ್ನೆ ಮರೆಸುವಷ್ಟು ಕೆಟ್ಟ ಕಾಯಿಲೆ ಇದಲ್ಲ. ಗಮನಿಸುವವರು ಗಮನಿಸಲಿ. ಜಿಲ್ಲಾ ಆರೋಗ್ಯಾಧಿಕಾರಿಯಷ್ಟೆ ಉಂಡರೆ ಸಾಲದು….?!
ಗಜೇಂದ್ರ ಸ್ವಾಮಿ

ಶಿವಮೊಗ್ಗದ ಒಂದು ಕುಟುಂಬಕ್ಕೆ ಕಂಟಕನಾದ ಚಿಕ್ಕಪ್ಪ.

ಭದ್ರಾವತಿಯ ಬಸ್ ಏಜೆಂಟ್ ನಿಂದ ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕು ಧೃಢ ಎಂದು ಹೇಳಲಾಗಿದೆ.
ಈಗಾಗಲೇ ಸೀಲ್ ಡೌನ್ ಆಗಿರುವ ಬಸವನಗುಡಿ ಬಡಾವಣೆಯ ಒಂದು ರಸ್ತೆಯ ಕಥೆ ಇದು. ಆಗ್ಗಾಗ್ಗೆ ಬಸ್ ಏಜೆಂಟ್ ತಮ್ಮ ಸಂಬಂಧಿಕರ ಮನೆಗೆ ಬಂದು ಉಳಿದುಕೊಂಡು ಹೋಗಿದ್ದು, ಇಡೀ ಕುಟುಂಬಕ್ಕೆ ಸೋಂಕು.
ಸಿಡಿಪಿಓ ಕಚೇರಿಯಿರುವ ಕ್ವಾಟ್ರಸ್ ನಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಕೊರೋನಾ ಪಾಸಿಟಿವ್.

By admin

ನಿಮ್ಮದೊಂದು ಉತ್ತರ

error: Content is protected !!