ಶಿವಮೊಗ್ಗ: ಕತ್ತಲಿನಿಂದ ಬೆಳಕಿ ನಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಭಾರತೀಯ ಪರಂಪರೆಯ ಬಹುದೊಡ್ಡ ಹಬ್ಬ ದೀಪಾವಳಿಯನ್ನು ಶಿವಮೊಗ್ಗ ಸೇರಿದಂತೆ ಜಿಲ್ಲೆಯಲ್ಲಿ ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು.
ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ದೀಪಾವಳಿ ಎಂದರೆ ಕತ್ತಲೆಯಿಂದ ಬೆಳಕಿನೆಡೆ ಸಾಗುವುದನ್ನು ಸಂಕೇತಿಸುವ ಆಚರಣೆಯೇ ಬದುಕಿನ ಧ್ಯೇಯವಾಗಿರಬೇಕೆಂದು ಪುರಾಣ ಪರ್ವದ ಅನಾದಿಕಾಲದ ಉಪನಿಷತ್ತಿನ ಆಶಯವಾಗಿದೆ.
ಅಂಗಡಿಗಳಿಗೆ ವಿಶೇಷ ಅಲಂಕಾರ:
ಇಂದು ಮತ್ತು ನಾಳೆ ಅಮಾವಾಸ್ಯೆ ಇರುವುದರಿಂದ ಕೆಲವು ಅಂಗಡಿ ಹಾಗೂ ಕಚೇರಿಗಳಲ್ಲಿ ಗುರುವಾರವೇ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು. ರ್ತಕರು ದೀಪಾವಳಿ ಅಮವಾಸ್ಯೆಯ ದಿನ ಹೊಸ ಲೆಕ್ಕಾಪುಸ್ತಕಗಳಿಗೆ ಪೂಜೆ ಮಾಡುವ ಪರಿ ಪಾಠವಿದ್ದು, ವಿಶೇಷವಾಗಿ ರ್ತಕರು ಅಂಗಡಿಗಳನ್ನು ಅಲಂಕರಿಸಿ, ಲಕ್ಷ್ಮೀ ಪೂಜೆ ಮಾಡಿ, ಸಿಹಿ ಹಂಚಿದರು.
ಪಟಾಕಿ ಖರೀದಿ ಜೋರು:
ಬೆಳಗ್ಗಿನ ಹಬ್ಬ ದೀಪಾವಳಿ ಬಂತೆಂದರೆ ಹೊಸ ಬಟ್ಟೆ ಜೊತೆಗೆ ಪಟಾಕಿ ಖರೀದಿಯೂ ಬಲು ಜೋರಾಗಿರುತ್ತದೆ. ಈಗಾಗಲೇ ಪಟಾಕಿ ಅಂಗಡಿಗಳಲ್ಲಿ ಮಾರಾಟ ಜೋರಾಗಿ ಸಾಗಿದೆ. ಪಟಾಕಿ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಬೆಲೆ ಏರಿಕೆ ನಡುವೆಯೇ ಪಟಾಕಿ ಮಾರಾಟ ಜೋರಾಗಿಯೇ ಸಾಗಿದೆ. ಗ್ರಾಹಕರು ಚೌಕಾಸಿ ಮಾಡಿ ತಮಗೆ ಇಷ್ಟವಾದ ಪಠಾಕಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ನಗರದ ಪ್ರಮುಖ ಮಾರುಕಟ್ಟೆ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ರ್ಜರಿಯಾಗಿ ಸಾಗಿದೆ. ಬಟ್ಟೆ, ದಿನಸಿ ಸಾಮಗ್ರಿ ಹಾಗೂ ಗೃಹಪಯೋಗಿ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ಬಲು ಜೋರಾಗಿ ನಡೆದಿದೆ. ಗ್ರಾಹಕರನ್ನು ಆರ್ಷಿಸಲು ಕೆಲವು ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ನಡೆಸುತ್ತಿದ್ದಾರೆ.
ಹೂವು-ಹಣ್ಣು ದುಬಾರಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಾಗೂ ಹಣ್ಣುಗಳ ಬೆಲೆ ಏರಿಕೆ ಕಂಡಿದೆ. ಸೇಬು ಹಣ್ಣು ಕೆಜಿ ಒಂದಕ್ಕೆ 140 ರೂ., ಮೋಸಂಬೆ 100ರೂ., ಕಿತ್ತಳೆ 70ರೂ., ಸಪೋಟ 100, ಬಾಳೇಹಣ್ಣು 80, ದಾಳಿಂಬೆ 250 ರೂ. ಇದೆ. ಹಾಗೆಯೆರ ಹೂವಿನ ದರದಲ್ಲೂ ಅಲ್ಪ ಏರಿಕೆ ಕಂಡಿದೆ. ಸೇವಂತಿಗೆ ಮಾರೊಂದಕ್ಕೆ 60 ರೂ., ಮಲ್ಲಿಗೆ 120 ರೂ., ಚೆಂಡು ಹೂ 100 ರೂ. ಇದೆ. ಹಾಗೆ ಮಾರುಕಟ್ಟೆಯಲ್ಲಿ ಬಾಳೆಕಂದು, ಮಾವಿನ ಸೊಪ್ಪು, ಆಕಾಶಬುಟ್ಟಿ, ಹಣತೆ ಸೇರಿದಂತೆ ಪೂಜಾ ಸಾಮಗ್ರಿಗಳ ಮಾರಾಟ ಕೂಡ ರ್ಜರಿಯಾಗಿ ನಡೆದಿದೆ.