ಶಿವಮೊಗ್ಗ: ಭದ್ರಾ ಜಲಾಶಯವನ್ನೇ ಬುಡಮೇಲು ಮಾಡುವ ಕಾಮಗಾರಿಯೊಂದು ಭದ್ರಾ ಜಲಾಶಯದ ಬುಡದಲ್ಲಿಯೇ ನಡೆಯುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದನ್ನು ತಡೆಯದಿದ್ದರೆ ಜಲಾಶಯಕ್ಕೆ ಅಪಾಯ ಖಂಡಿತ ಎಂದು ರೈತ ನಾಯಕ ಕೆ.ಟಿ. ಗಂಗಾಧರ್ ಆತಂಕ ವ್ಯಕ್ತಪಡಿಸಿದರಲ್ಲದೆ ಕೂಡಲೇ ಕಾಮಗಾರಿ ನಿಲ್ಲಿಸುವಂತೆ  ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಇದು ಪ್ರಕೃತಿ ಮೇಲಾಗುವ ದಬ್ಬಾಳಿಕೆ ಮತ್ತು ವಿಕೃತಿ ಎಂದರು.

ಭದ್ರಾ ಜಲಾಶಯ ಮದ್ಯ ರ‍್ನಾಟಕದಲ್ಲಿಯೇ ಬಹುದೊಡ್ಡ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯಾಗಿದೆ. ಸುಮಾರು 6 ಜಿಲ್ಲೆಗಳ 4.50 ಲಕ್ಷ ಎಕರೆ ಜಮೀನಿಗೆ ನೀರನ್ನು ಒದಗಿಸುತ್ತದೆ. ಕುಡಿಯುವ ನೀರಿಗಾಗಿ 7.5 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ತರಿಕೆರೆ, ಹೊಸದರ‍್ಗ ಸೇರಿದಂತೆ ಹಲವು ತಾಲೂಕುಗಳ ಗ್ರಾಮಗಳಿಗೆ ನೀರನ್ನು ನೀಡಲಾಗುತ್ತದೆ. ಈಗ ಕುಡಿಯುವ ನೀರಿನ ಯೋಜನೆಗಾಗಿ ಶುದ್ದ ನೀರಿನ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ ಭದ್ರಾ ಜಲಾಶಯದ ಬುಡ ಭಾಗದಲ್ಲಿ ಕಾಮಗಾರಿ ಆರಂಭವಾಗಿದೆ ಎಂದರು.

ಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಯೋಜನೆ ತಪ್ಪಲ್ಲ. ಆದರೆ, ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಈ ಯೋಜನೆಗಾಗಿ ಶುದ್ದ ನೀರಿನ ಘಟಕವನ್ನು ಜಲಾಶಯದ ತಳ ಭಾಗದಲ್ಲಿಯೇ ಪ್ರಾರಂಭಿಸಲು ಹೊರಟಿರುವುದು ಆತಂಕಕ್ಕೆ ಕಾರಣವಾಗಿದೆ. ಸುಮಾರು 500 ಕೋಟಿ ವೆಚ್ಚದ ಈ ಘಟಕಕ್ಕೆ 16 ಎಕರೆ ಪ್ರದೇಶವನ್ನು ಆಂದ್ರ ಮೂಲದ ಗುತ್ತಿಗೆದಾರನೊಬ್ಬನಿಗೆ ನೀಡಲಾಗಿದೆ. ಜಲಾಶಯವು ಈಗಾಗಲೇ ಅತ್ಯಂತ ಸೂಕ್ಷ್ಮ, ಸುರಕ್ಷಿತ ಪ್ರದೇಶವಾಗಿದೆ. ಇಲ್ಲಿ ಯಾವುದೇ ಯೋಜನೆಗಳಾಗಲಿ, ವಸತಿ ಗೃಹಗಳಾಗಲಿ, ರ‍್ಕಾರದ ಕಟ್ಟಡಗಳಾಗಲಿ ನರ‍್ಮಾಣ ಮಾಡುವಾಗಿಲ್ಲ. ಇದು ಭದ್ರತೆಯ ಪ್ರದೇಶವಾಗಿದೆ. ಹೀಗಿದ್ದರೂ ಕೂಡ ಜಲಾಶಯದಿಂದ ಕೇವಲ 500ಮೀ ಒಳಗೆಯೇ ತಳಭಾಗದಲ್ಲಿ ಈ ಘಟಕ ಸ್ಥಾಪನೆಯಾಗುತ್ತಿರುವುದು ತೀರ ಅವೈಜ್ಞಾನಿಕ ಮತ್ತು ನೀಚತನದ ಪರಮಾವಧಿಯಾಗಿದೆ ಎಂದರು.

ಸುಮಾರು 500 ಕೋಟಿ ವೆಚ್ಚದ ಈ ಯೋಜನೆಗಾಗಿ ಈಗಾಗಲೇ 2 ತಿಂಗಳಿನಿಂದ ಕಾಮಗಾರಿಗಳು ಆರಂಭವಾಗಿದೆ. ಕಟ್ಟಡಗಳು ತಲೆ ಎತ್ತುತ್ತಿವೆ. ಈ ಯೋಜನೆಗೆ ಹೇಗೆ ಅನುಮತಿ ಸಿಕ್ಕಿತ್ತು ಎಂಬುಂದೇ ಯಾರಿಗೂ ಗೊತ್ತಿಲ್ಲ. ಸಿಡಬ್ಲೂಯುಸಿಯಿಂದ ಅನುಮತಿ ಪಡೆದಿಲ್ಲ. ಆದರೂ ಕೂಡ ಸದ್ದಿಲ್ಲದೆ ಕಾಮಗಾರಿ ಆರಂಭವಾಗಿದೆ. ವಸತಿ ಗೃಹ ಕೂಡ ತಲೆ ಎತ್ತುತ್ತಿದೆ. ಇಲ್ಲಿ ದುಷ್ರ‍್ಮಿಗಳು ಸೇರುವುದಿಲ್ಲ ಎಂಬ ಗ್ಯಾರಂಟಿ ಏನು. ಜಲಾಶಯಕ್ಕೆ ಅಪಾಯ ಆಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ. ಅಲ್ಲದೆ ಪ್ರಕೃತಿ ಮೇಲಾಗುವ ದಬ್ಬಾಳಿಕೆ ಕೂಡ ಇದಾಗಿದೆ ಎಂದರು.

ಈ ಯೋಜನೆಗಾಗಿ ಬೇರೆ ಕಡೆ ಭೂಮಿಯನ್ನು ಕೊಡಲಿ. 16 ಎಕರೆ ಏಕೆ. 25 ಎಕರೆ ಕೊಡಲಿ. ಆದರೆ ಜಲಾಶಯದ ತಳಭಾಗದಲ್ಲಿ ಬೇಡ. ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ದಡ್ಡತನದ ಉತ್ತರ ಕೊಡುತ್ತಾರೆ. ಇದು ನಾವು ಕೊಟ್ಟಿದಲ್ಲ. ಮೀನುಗಾರಿಕೆ ಇಲಾಖೆಯವರು ಅನುಮತಿ ಕೊಟ್ಟಿದ್ದಾರೆ ಎನ್ನುತ್ತಾರೆ. ಆದರೆ ನೀರಾವರಿ ಇಲಾಖೆಯವರು ಮೀನುಗಾರಿಕೆ ಇಲಾಖೆಯವರಿಗೆ ಗುತ್ತಿಗೆ ಆಧಾರದಲ್ಲಿ ಮೀನು ಸಾಕಲು ಕೊಟ್ಟಿರುತ್ತಾರೆ. ತಾವೇ ಗುತ್ತಿಗೆ ತೆಗೆದುಕೊಂಡು ಈ ಯೋಜನೆಗೆ ನೀರಾವರಿ ಇಲಾಖೆಯವರು ಹೇಗೆ ಅನುಮತಿ ಕೊಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ನೀರಾವರಿ ಮಂತ್ರಿ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಈ 500 ಕೋಟಿಯ ಯೋಜನೆಯ ವಿವರಗಳು ತಿಳಿದಿಲ್ಲವೇ. ಜಲ ಜೀವನ್ ಮೀಷನ್ ಅಡಿಯಲ್ಲಿ ಈ ಯೋಜನೆ ರೂಪಗೊಂಡಿದ್ದರೂ ಸಹ ಜಲಾಶಯದ ಭದ್ರತಾ ಪ್ರದೇಶದಲ್ಲಿ ಇದು ನಡೆಯುತ್ತಿದೆ ಎಂದು ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಹಾಗಾಗಿ ತಕ್ಷಣವೇ ರ‍್ಕಾರ ಈ ಯೋಜನೆಯನ್ನು ನಿಲ್ಲಿಸಬೇಕು. ಅಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೂಡಲೇ ನಿಲ್ಲಬೇಕು. ಶುದ್ದ ನೀರಿನ ಘಟಕವನ್ನು ದೂರದ ಪ್ರದೇಶದಲ್ಲಿ ಸ್ಥಾಪಿಸಿ ಕುಡಿಯುವ ನೀರನ್ನು ಕೊಡಲಿ ಆದರೆ ಜಲಾಶಯವನ್ನೇ ಬುಡಮೇಲು ಮಾಡುವ ನಿರ‍್ಗಕ್ಕೆ ಮಾರಕವಾಗಿರುವ ಭದ್ರತೆಯೇ ಅಲ್ಲದ ಈ ಯೋಜನೆ ನಮಗೆ ಬೇಡ. ರ‍್ಕಾರ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ರೈತರು, ಸರ‍್ವಜನಿಕರು ಸಂರ‍್ಷಕ್ಕೆ ನಿಲ್ಲಬೇಕಾಗುತ್ತದೆ. 9ಜಿಲ್ಲೆಯ ರೈತರು ಕೂಡ ಈ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಯಶವಂತರಾವ್ ಘರ‍್ಪಡೆ, ಪುಟ್ಟಪ್ಪ, ಹಿರಣಯ್ಯ, ಜಗದೀಶ್ ನಾಯ್ಕ್, ಮೂಡಲಗಿರಿಯಪ್ಪ, ಕೃಷ್ಣಮರ‍್ತಿ, ಅಣ್ಣಪ್ಪ, ಮಂಜಪ್ಪ, ರಂಗೇಶಪ್ಪ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!