ಶಿವಮೊಗ್ಗ: ನಗರಸಭೆ ಮಾಜಿ ಅಧ್ಯಕ್ಷರು ವೀರಶೈವ ಸಮಾಜದ ಪ್ರಮುಖರೂ ಆದ ಎನ್.ಜೆ.ರಾಜಶೇಖರ್ (ಸುಭಾಷ್) ನಿಧನಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಸರಳ ಮತ್ತು ಸಹೃದಯಿ ವ್ಯಕ್ತಿಯಾಗಿದ್ದ ಸುಭಾಷ್ ನಿಧನ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಉದ್ಯಮ ವಲಯಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿರುವ ರಾಜಶೇಖರ್ ಕುಟುಂಬ ರಾಜಕೀಯವಾಗಿಯೂ ಸೇವೆ ಸಲ್ಲಿಸಿದೆ. ಶುಭಾಷ್ ಹಿರಿಯ ಸೋದರ ಎನ್.ಜೆ.ವೀರಣ್ಣ ಅವರು ತಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದು, ತಂದೆ ಬಂಗಾರಪ್ಪ ಅವರಿಗೆ ಅತ್ಯಾಪ್ತರಾಗಿದ್ದರು ಎಂದು ಹೇಳಿರುವ ಸಚಿವರು,ಸುಭಾಷ್ ನಿಧನದಿಂದ ಶಿವಮೊಗ್ಗ ಜಿಲ್ಲೆ ಒಬ್ಬ ಸಭ್ಯ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!