ಖತರ್ನಾಕ್ ಮನುಷ್ಯನ ಅಸಲಿಮುಖ

ವಾರದ ಅಂಕಣ-16

ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ

ನಿಮಗೆ ಆತ ನೊಂದವನು, ಆತ್ಮೀಯ, ನಮಗೆ ಬೇಕಿದ್ದವನು ಎಂದುಕೊಂಡು ನಿಮಗೆ ಆತನ ವ್ಯಕ್ತಿತ್ವ ತಿಳಿದುಕೊಳಬೇಕೆಂದರೆ ಏನೂ ಮಾಡಬೇಡಿ. ಅವನಿಗೆ ಕೇಳಿದಾಗ ಕೈಲಾದ ಸಾಲ ಕೊಟ್ಟರೆ ಸಾಕು. ಆತನ ನಿಜವಾದ ಬಣ್ಣ ಬಯಲಾಗುತ್ತದೆ ಎಂಬುದೇ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣದಿಂದ ಹೊರಬರುತ್ತಿರುವ ನೈಜ ಸತ್ಯ.
ಕೆಲವೇ ಕೆಲವು ಕಿರಾತಕ ಮನಸಿನ ಮನುಷ್ಯರ ನಡುವೆ ಬದುಕಬೇಕಾದ ಅನಿವಾರ್ಯತೆ ಬಂದಿರುವುದು ದುರಂತವೇ ಹೌದು ಸಾಲ ಎಂಬುದು ಶೂಲವಲ್ಲ ಅದು ಬದುಕಿನ ಅನಿವಾರ್ಯ ಎನ್ನುವುದು ಎಲ್ಲರಿಗೂ ಗೊತ್ತು ಆದರೆ ಕೆಲವೇ ಕೆಲವು ವಿಕೃತ ಮನಸ್ಸುಗಳು ಕೊಟ್ಟ ಸಾಲವನ್ನು ನಂಬಿಕೆಯ ಸಾಲವನ್ನು ಆತನ ಅನಿವಾರ್ಯದ ಅವಧಿಯಲ್ಲಿ ಮರುಕಳಿಸುವಲ್ಲಿ ದೊಡ್ಡ ನಾಟಕ ಶುರು ಮಾಡುತ್ತಾರೆ ಅವನ ಹೆಂಡತಿ ಮಕ್ಕಳು ಸಂಪಾಗಿರುತ್ತಾರೆ, ಹೇಳಿದಾಗ ಕೊಡುತ್ತೇನೆ ತಾಳಿ ಎಂದು ಹೇಳುತ್ತಲೇ ಸಾಲ ಕೊಟ್ಟವನು ಹುಚ್ಚನಂತಾಗುವುದು ನಾನ ಕಾರಣಗಳಿಗೆ ಆಸ್ಪತ್ರೆ ಸೇರುವುದು ಅನಿವಾರ್ಯ ಆಗಿರುವುದು ದುರಂತವೇ ಹೌದು.


ಆತ ಅದನ್ನು ಎಷ್ಟು ವಿಚಿತ್ರವಾಗಿ ಬಳಸಿಕೊಳ್ಳುತ್ತಾನೆ. ಅಣ್ಣ ಇನ್ನೂ ಒಂದು ನಿಮಿಷ, ಒಂದೇ ಒಂದು ಸೆಕೆಂಡ್ ನಿಮಗೆ ಪೋನ್ ಪೇನಲ್ಲಿ ಬರುತ್ತೆ ನೋಡಿ ಎನ್ನುತ್ತಾನೆ. ನಾನು ಹೇಳಿದ ಅವಾಗ  ಕೊಡದಿದ್ದರೆ ಚಪ್ಪಲಿಯಲ್ಲಿ ಹೊಡೆಯಿರಿ. ನಿಮಗೆ ದುಡ್ಡು ಬಂತು, ನಿಮಗೆ ಫೋನ್ ಪೇ ಮಾಡಲು ಕಾಯ್ತಾ ಇದ್ದೇನೆ. ಸ್ವಲ್ಪ ತಾಳಿ ಬರುತ್ತೆ ಇನ್ನ 10 ನಿಮಿಷದೊಳಗೆ ನಿಮಗೆ ದುಡ್ಡು ಬರುತ್ತೆ…, ಹೀಗೆ ಆ ನಾಟಕ ಆಡುತ್ತಾ ದಿನ ತಳ್ಳುವ ಗೋಮುಖ ವ್ಯಾಘ್ರ ಮನಸ್ಸಿನ ವ್ಯಕ್ತಿ ದುಡ್ಡು ಕೊಟ್ಟವನು ತನ್ನ ವರಸೆಯನ್ನು ಬದಲಿಸಿಕೊಳ್ಳುತ್ತಾನೆ.
ಹಣ ವಾಪಾಸ್ ಕೊಡದಿದ್ದಾಗ ಅನಿವಾರ್ಯತೆಯಿಂದ ಕೊಟ್ಟವ ಒಂದಿಷ್ಟು ಮಾತನಾಡಿದಾಗ ಅಮ್ಮ ಅಪ್ಪನ ಬಗ್ಗೆ ಮಾತಾಡ್ತೀಯಾ? ಏನ್ ಮಾಡ್ತೀಯಾ? ಕೊಡ್ತೀನಿ ತಾಳು. ನನ್ನ ಬಗ್ಗೆ ಹೇಳುತ್ತೀಯಾ ಎಂದು ಹೇಳುವ ಸ್ಟೈಲ್ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಅಂದು ಗುಳ್ಳೆನರಿಯಂತೆ ಬಿಕ್ಷೆ ಕೇಳಿದಂತೆ ಬೇಡಿದ್ದವನೀಗ ವಿಲನ್ ಆಗಿಬಿಡುತ್ತಾನೆ.
ಅದೇ ಕಾರಣಕ್ಕೆ ನಿಮ್ಮ ನಡುವಿನ, ನಿಮ್ಮೊಳಗೆ ಜಗತ್ತಿನಲ್ಲಿ ನೀವು ನಿಮಗೆ ಯಾರು ಆತ್ಮೀಯರು, ಯಾರು ನಂಬಿಕಸ್ತರು, ಯಾರು ಬೇಕಿದ್ದವರು ಎಂದು ತಿಳಿದುಕೊಳ್ಳಲು ಮೊದಲು ನಿಮ್ಮ ಕೈಲಾದ ಸಹಾಯ ಮಾಡಿ.


ಇಲ್ಲೊಂದು ಮಾತು ಯಾವುದೇ ಕಾರಣಕ್ಕೂ ನೀವು ಕೊಟ್ಟ ಹಣವನ್ನು ಕೇಳದಿದ್ದರೂ ತಂದು ಕೊಡುವವನೇ ನಿಜವಾದ ಆತ್ಮೀಯ ಆಗಿರುತ್ತಾನೆ. ನಿಜವಾದ ನಂಬಿಕಸ್ತಾಗಿರುತ್ತಾನೆ. ಈಗ ಬಂತು, ಆಗ ಹೋಯಿತು ಈಗ ನಿಮಗೆ ಈ ಕ್ಷಣ ಹಾಕುತ್ತೇನೆ ಎನ್ನುವ, ಮೌನ ವಹಿಸುವ ಕೆಲ ಕಿತ್ತೋದ ಮನಸ್ಸುಗಳ ನಡುವೆ ಅವರ ಅಮ್ಮನ, ಅಪ್ಪನ ಬಗ್ಗೆ ಮಾತನಾಡುವ ಬದಲಿಗೆ ಅದನ್ನು ಮನದಿಂದಲೇ ಕಿತ್ತು ಬಿಸಾಕಿ.
ಇಂತಹ ಅದೆಷ್ಟೋ ಘಟನೆಗಳನ್ನ ನಾವು ನಿತ್ಯ ಗಮನಿಸುತ್ತೇವೆ.
ಓದುಗರೊಬ್ಬರ ಮನದಾಳದ ನೋವಿನ ಕಥೆಯನ್ನು ನಿಮ್ಮ ಮುಂದೆ ಇಡುವ ಈ ಪ್ರಯತ್ನ ಹಿನ್ನೆಲೆಯಲ್ಲಿ ಈ ವಿಕೃತ ಮನಸ್ಸು, ನಯವಂಚಕ ಮನಸ್ಸನ್ನ ಕಣ್ಣಾರೆ ಕಂಡ ಸನ್ನಿವೇಶವನ್ನ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಇದಾಗಿದೆ. ಒಮ್ಮೆ ತುಂಬಾ ಬೇಕಿದ್ದವನು ಎಂದು ಆತ ಕೇಳಿದ ಅನಿವಾರ್ಯದ ಕಾರಣಕ್ಕೆ 10000 ರೂಪಾಯಿ ನೀಡಿದ್ದು ಆತ ಪಡಿಯುವಾಗ ಇನ್ನೆರಡು ದಿನದಲ್ಲಿ ನಿನ್ನ ಹಣ ನಿನಗೆ ವಾಪಸ್ ಕೊಡುತ್ತೇನೆ ಎಂದು ಹೇಳಿದನಂತೆ. ನಂತರ ನಾಳೆ ನಾಡಿದ್ದು ಮುಂದಿನ ತಿಂಗಳು ಮುಂದಿನ ವಾರ ಹೀಗೆ ಹೇಳುತ್ತಾ ದಿನದಲ್ಲಿ ದಿನ ತಳ್ಳಿದ. ನಂತರ ಪೀಡಿಸಿದಾಗ ಈಗ ಬಂತು ನೋಡಿ ಈಗ ನಿಮ್ಮ ಕೈಗೆ ಸಿಕ್ತು ನೋಡಿ. ನನ್ನ ಹತ್ತಿರ ಬ್ಯಾಂಕ್ ಪಾಸ್ ಬುಕ್ಕೆ ಇಲ್ಲ. ಚೆಕ್ ಎಲ್ಲಿ ಇರುತ್ತೆ ನಾನು ಹಣ ಕೊಡದಿದ್ದರೆ ನಾಳೆ ಉಂಗುರ ಕೊಡುತ್ತೇನೆ ಎಂದು ಮರುದಿನದಿಂದ ಉಂಗುರವನ್ನು ಮನೆಯಲ್ಲಿ ಬಚ್ಚಿಟ್ಟು ಬಂದ ಖದೀಮ ವ್ಯಕ್ತಿಯ ಕತರ್ನಾಕ್ ಐಡಿಯಾದ ಬಗ್ಗೆ ಓದುಗ ಹೇಳಿದ ಕಥೆ ಅತ್ಯಂತ ವಿಚಿತ್ರವಾಗಿದೆ.


ಕೊಟ್ಟ ಹತ್ತು ಸಾವಿರಕ್ಕೆ ಹತ್ತು ಸಾವಿರವನ್ನು ಭಿಕ್ಷೆ ಕೊಟ್ಟಂತೆ ಐನೂರು, ಸಾವಿರ, ಒಂದುವರೆ ಸಾವಿರ ದಂತೆ ಎರಡು ಅಥವಾ ಮೂರು ಕೈ ನೀಡಿ ಮತ್ತೆ ನಾಟಕವಾಡದ ಸಾಲ ಕೊಟ್ಟವನು ಆ ಕಡೆ ತಿರುಗಿ ನೋಡದಂತೆ, ಮತ್ತೆ ಕೇಳದಂತೆ ಮಾಡುವ ಕೆಲವೇ ಕೆಲವು ವಿಕೃತ ಮನಸ್ಸುಗಳನ್ನ ನೀವು ಪತ್ತೆ ಹಚ್ಚಬೇಕೆಂದರೆ ನಿಮ್ಮ ಕೈಲಾದರೆ ನಾಕಾಣೆ ಸಾಲ ಕೊಟ್ಟು ನೋಡಿ. ಆತನ ನಿಯತ್ತು, ನಂಬಿಕೆ ನಿಮಗೆ ಅರ್ಥವಾಗುತ್ತದೆ. ಮಾತು ಎತ್ತಿದರೆ ಹಾಗೆ ಹೀಗೆ ಎಂದು ನಾಟಕವಾಡುವ ಖದೀಮ ಮನಸು ಇಲ್ಲಿ ಅತ್ಯಂತ ವಿಚಿತ್ರವಾಗಿ ವರ್ತಿಸುತ್ತದೆ. ಮೊದಲು ಕೈಕಾಲು ಹಿಡಿದು ಸಾಲ ಕೇಳಿದ್ದವ ಈಗ ವಿಕೃತವಾಗಿ ವರ್ತಿಸುತ್ತಾನೆ. ಯಾರಿಗೂ ಇಲ್ಲದ ಕಷ್ಟ ಅವನಿಗೆ ಬಂದಿದೆ ಎನ್ನುತ್ತಾನೆ. ಆದರೆ ಅವನ ಹೆಂಡತಿ ಮಕ್ಕಳು ಸೊಂಪಾಗಿ ಚೆನ್ನಾಗಿ ತಿಂದುಂಡು ಇರಲಿ ಎಂದು ನೋಡಿಕೊಳ್ಳುತ್ತಾನೆ. ಇಂತಹ ವಿಕೃತ ಮನಸ್ಸನ್ನು ಪತ್ತೆಹಚ್ಚಲು ನೀವು ಮಾಡಬೇಕಿರುವುದು ನಾಕಾಣೆ ಸಾಲ ಕೊಡುವುದು ಅಷ್ಟೇ.
ಮುಖ ನೋಡಿ ಮಣೆ ಹಾಕಬೇಡಿ ಎಂಬ ಮಾತು ಎಷ್ಟು ಅರ್ಥಪೂರ್ಣವೋ ಅಷ್ಟೇ ಗಂಭೀರವಾಗಿ ಯಾರನ್ನೇ ಆಗಲಿ ಅವರ ವ್ಯಕ್ತಿತ್ವವನ್ನು, ಅವರ ಒಳ ಮನಸನ್ನು, ಅವರ ಮರ್ಮವನ್ನು ಗಂಭೀರವಾಗಿ ಗಮನಿಸುವ ಅನಿವಾರ್ಯತೆ ಇಂದಿನ ದಿನಗಳಲ್ಲಿ ಮೂಡಿರುವುದು ದುರಂತವೇ ಹೌದು. ಅಯ್ಯೋ ಪಾಪ ಎನ್ನುವುದು ಬೇಡ ಎಂದು ಈಗಾಗಲೇ ಹೇಳಿದ್ದ ವಿಷಯಕ್ಕೆ ವಿರುದ್ಧವಾಗಿ ಮಾತನಾಡಬೇಕಾದ ಅನಿವಾರ್ಯತೆ ಬಂದಿರುವುದು ಮತ್ತೊಂದು ವಿಶೇಷ.

By admin

ನಿಮ್ಮದೊಂದು ಉತ್ತರ

error: Content is protected !!