ಶಿವಮೊಗ್ಗ: ಮಧ್ಯಭಾಗ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ರೋಗಿ ಒಬ್ಬರ ಹೃದಯಕ್ಕೆ “ಆರ್‌ಬೈಟಲ್ ಅಥೆರೆಕ್ಟಮಿ” ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಮೆಟ್ರೋ ಆಸ್ಪತ್ರೆಯ ಅಧ್ಯಕ್ಷ ಡಾ. ಪಿ. ಲಕ್ಷ್ಮಿನಾರಾಯಣ ಆಚಾರ್ ತಿಳಿಸಿದರು.


ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಶಿವಮೊಗ್ಗ ನಗರದ 76 ವರ್ಷದ ಚಂದ್ರಪ್ಪ ಶೆಟ್ಟಿ ಅವರಿಗೆ ಆಸ್ಪತ್ರೆಯ ಹೃದಯರೋಗ ತಜ್ಞರಾದ ಡಾ|| ಶಿವಶಂಕರ್ ಟಿ. ಹೆಚ್. ನೇತೃತ್ವದ ತಂಡ “ಆರ್‌ಬೈಟಲ್ ಅಥೆರೆಕ್ಷಮಿ” ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದರು.


ವೈದ್ಯರಾದ ಡಾ. ಶಿವಶಂಕರ್ ಮಾತನಾಡಿ, ಹೃದಯದ ರಕ್ತನಾಳದಲ್ಲಿ ತುಂಬ ಕ್ಯಾಲ್ಸಿಯಮ್ ಇದ್ದರೆ ಈ ಹಿಂದೆ ಓಪನ್ ಹಾರ್ಟ್ ಸರ್ಜರಿ ಮಾಡುತ್ತಿದ್ದೆವು. ಈಗ ರಕ್ತನಾಳದ ಕ್ಯಾಲ್ಸಿಯಮ್ ಅನ್ನು ಪುಡಿ ಪುಡಿ ಮಾಡಿ ಸ್ಟಂಟ್ ಹಾಕುವ ವಿಧಾನವಾಗಿದೆ. ಈ ವಿಧಾನದಿಂದ ರಕ್ತನಾಳಕ್ಕೆ ಅಪಾಯ ಕಡಿಮೆ. “ಆರ್‌ಬೈಟಲ್ ಅಥೆರೆಕ್ಟಮಿ” ಡೈಮಂಡ್ ಬ್ಲಾಕ್ 360 ಸಾಧನವನ್ನು ಉಪಯೋಗಿಸಿ ರಕ್ತನಾಳದಲ್ಲಿರುವ ಕ್ಯಾಲ್ಸಿಯಮ್ ಫ್ಯಾಟ್ ತೆಗೆದು ರಕ್ತನಾಳವನ್ನು ಶುದ್ದೀಕರಿಸಲಾಯಿತು, ನಂತರ ಸ್ಟೆಂಟ್ ಅಳವಡಿಸಲಾಗಿದೆ. ಇದರಿಂದ ರೋಗಿಗೆ ಯಾವುದೇ ತೊಂದರೆಯಾಗುವುದಿಲ್ಲ. ಶಸ್ತ್ರ ಚಿಕಿತ್ಸೆ ಆದ ನಂತರ ೩ ದಿನದಲ್ಲಿ ರೋಗಿಯನ್ನು ಮನೆಗೆ ಕಳುಹಿಸಲಾಯಿತು ಎಂದರು.


ಈ ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಸಿಇಒ ಡಾ ತೇಜಸ್ವಿ ಟಿ. ಎಸ್., ಮೆಡಿಕಲ್ ಡೈರೆಕ್ಟರ್ ಡಾ ಪೃಥ್ವಿ ಬಿ. ಸಿ., ಅರವಳಿಕೆ ತಜ್ಞ ಡಾ.ಪ್ರವೀಣ್ ಇದ್ದರು.

ನನ್ನ ಪಾಲಿಗೆ ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ನಿಜವಾಗಿದೆ

ಚಿಕಿತ್ಸೆ ಒಳಗಾದ ರೋಗಿ ಚಂದ್ರಪ್ಪ ಶೆಟ್ಟಿ ಮಾತನಾಡಿ, ನಾನು ನಿವೃತ್ತ ಪ್ರಾಂಶುಪಾಲನಾಗಿದ್ದು, ಸೆ.27ರಂದು ಸತತ 2.45 ಗಂಟೆಗಳ ಕಾಲ ನನಗೆ ಮೆಟ್ರೋ ಆಸ್ಪತ್ರೆಯ ಹೃದಯರೋಗ ತಜ್ಞರಾದ ಡಾ|| ಶಿವಶಂಕರ್ ಟಿ. ಹೆಚ್. ನೇತೃತ್ವದ ತಂಡ “ಆರ್‌ಬೈಟಲ್ ಅಥೆರೆಕ್ಷಮಿ” ಚಿಕಿತ್ಸೆ ನಡೆಸಿ ನನಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಈ ಚಿಕಿತ್ಸೆಯನ್ನು ಬೆಂಗಳೂರಿನಲ್ಲಿ ಮಾಡಿಸಿಕೊಳ್ಳಿ ನೀವು ಬೆಂಗಳೂರಿಗೆ ಹೋಗಿ ಎಂದು ಹೇಳಿದಾಗ ನಾನು ಮೆಟ್ರೋ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ ಪೃಥ್ವಿ ಬಿ. ಸಿ ಅವರನ್ನು ಸಂಪರ್ಕಿಸಿದಾಗ ನಮಲ್ಲೇ “ಆರ್‌ಬೈಟಲ್ ಅಥೆರೆಕ್ಷಮಿ” ಚಿಕಿತ್ಸೆ ಲಭ್ಯವಿದ್ದು, ನೀವು ನಮ್ಮ ಮೇಲೆ ನಂಬಿಕೆ ಇಟ್ಟರೆ ಸಾಕು ನಿಮಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಿದ್ದೇವೆ ಎಂದು ಹೇಳಿದ್ದರು. ನನ್ನ ಪಾಲಿಗೆ ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ನಿಜವಾಗಿದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!