ಶಿವಮೊಗ್ಗ: ನಗರದ ಸರ್ಕಿಟ್ ಹೌಸ್ ಬಳಿ ವಾಕಿಂಗ್ ಮಾಡುವಾಗ ದಿಢೀರ್ ಕುಸಿದು ಬಿದ್ದು 21 ವರ್ಷದ ಮೆಡಿಕಲ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಶರಾವತಿ ನಗರದ ಪೃಥ್ವಿರಾಜ್ (21) ಸಾವನ್ನಪ್ಪಿರುವ ಯುವಕ. ಈತ ಸೀಮ್ಸ್‌ನಲ್ಲಿ ಮೆಡಿಕಲ್ ಒದುತ್ತಿದ್ದ.
ಈತ ಬುಧವಾರ ಸಂಜೆ ವಾಕ್ ಮಾಡುವಾಗ ದಿಢೀರ್ ಕುಸಿದು ಬಿದ್ದಿದ್ದಾನೆ. ಕೂಡಲೇ ಇವನನ್ನು ಮೆಗ್ಗಾನ್ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಈತ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವನ್ನಪಿರುವುದಾಗಿ ತಿಳಿದು ಬಂದಿದೆ.
ಪೃಥ್ವಿರಾಜ್ ಶಿವಮೊಗ್ಗ ನಗರದ ಕಾಮಧೇನು ಮೆಡಿಕಲ್ ಫಾರ್ಮಾ ಮಾಲೀಕ ಮುತ್ತಣ್ಣ ಎಂಬುವರ ಪುತ್ರ.