ಶಿವಮೊಗ್ಗ,ಸೆ.18: ಅಪಾರ ಜನಸಾಗರದ ನಡುವೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಶಾಂತಿಯುತವಾಗಿ ಪೂರ್ಣಗೊಂಡಿದೆ.


ನಿನ್ನೆ ಬೆಳಗ್ಗೆ ಭೀಮೇಶ್ವರ ದೇವಾಲಯಆವರಣದಿಂದ ಗಣಪತಿ ಮೆರವಣಿಗೆ ಆರಂಭಗೊಂಡಿತ್ತು. ಇಂದು ಮುಂಜಾನೆ ಸರಿಸುಮಾರು ೪. ೧೫ ಗಂಟೆಗೆ ಭೀಮೇಶ್ವರ ದೇವಾಲಯ ಸಮೀಪದ ತುಂಗಾ ನದಿಯಲ್ಲಿ ಗಣೇಶಮೂರ್ತಿಯ ವಿಸರ್ಜನೆ ಮಾಡಲಾಯಿತು.


ಗಣಪತಿಯ ಮೆರವಣಿಗೆಗೆ, ಪೊಲೀಸ್ ಇಲಾಖೆಯ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ವ್ಯಾಪಕ ಕಟ್ಟೆಚ್ಚರವಹಿಸಿತ್ತು. ಭದ್ರತಾ ಕಾರ್ಯಕ್ಕೆ ಕ್ರಿಪ್ರ ಕಾರ್ಯಾಚರಣೆ ಪಡೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಬಳಕೆ ಮಾಡಲಾಗಿತ್ತು. ಸಾವಿರಾರು ಪೊಲೀಸರನ್ನು ನಿಯೋಜಿಸಿತ್ತು.


ಜಿಲ್ಲಾ ರಕ್ಷಣಾಧಿಕಾರಿ ಸಂತಸ : ಗಣಪತಿ ಮೆರವಣಿಗೆಯು ಶಾಂತಿಯುತವಾಗಿ ಪೂರ್ಣಗೊಂಡಿರುವುದಕ್ಕೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಮೆರವಣಿಗೆ ಬಂದೋಬಸ್ತ್ ನಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಅಧಿಕಾರಿ- ಸಿಬ್ಬಂದಿಗಳಿಗೆ ಹಾಗೂ ಇದಕ್ಕೆ ಸಹಕಾರ ನೀಡಿದ ಸಮಾಜದ ಎಲ್ಲ ವರ್ಗದವರಿಗೆ ಧನ್ಯವಾದ ಅರ್ಪಿಸುವುದಾಗಿ’ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಇಂದು ವ್ಯಾಟ್ಸಾಪ್ ಸಂದೇಶದಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!