ಶಿವಮೊಗ್ಗ: ಶಿವಮೊಗ್ಗ ಸಮೀಪದ ನಿಧಿಗೆ ಗ್ರಾ.ಪಂ ಸದಸ್ಯರೊಬ್ಬರು ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಘಟನೆ ಬೆಳಕಿಗೆ ಬಂದಿದೆ.
ನಿಧಿಗೆಯ ನಾಗಪ್ಪ (35) ಎಂಬುವವರು ಹಣೆಗೆರೆ ಕಟ್ಟೆ ಬಳಿಯ ಕಾಡಿನ ಮರವೊಂದಕ್ಕೆ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದ್ದು, ಇದು ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆ.
ಕಳದೆ ೩ ದಿನಗಳ ಹಿಂದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಇಂದು ಬೆಳಗ್ಗೆ ಸೊಪ್ಪು ಕಡಿಯಲು ಹೋದ ಹಣೆಗೆರೆ ಕಟ್ಟೆಯ ನಿವಾಸಿ ಒಬ್ಬರು ಈ ದೃಶ್ಯ ನೋಡಿ ಮಾಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೆ ಜಮೀನು ಮಾರಿದ್ದ ನಾಗಪ್ಪ ನಿರೀಕ್ಷೆ ಮೀರಿ ಸಾಲ ಮಾಡಿದ್ದು, ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ.
ಮಾಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!