ಕೇಳೋ ನಾಲಿಗೆ ನಿಯತ್ತಾಗಿದ್ರೆ, ಕೊಡೋ ಕೈಗೇನು ಬರ ಇಲ್ಲ…,
ಆದ್ರೆ ಕೈ ಕೊಡುವ, ನಿಯತ್ತಿಲ್ಲದ ಮನುಜನ ಬುಳ್ಳಾಟದ ಮಾತು ನಮ್ ಮುಗ್ದತೆಯನ್ನು ಲೊಚಕ್ ಲೊಚಕ್ ಎಂದು ನೆಕ್ಕುತ್ತಿದೆ ಎಂದ ನಿಮ್ ಸ್ವಾಮಿ
(ಗಜೇಂದ್ರಸ್ವಾಮಿ, ತುಂಗಾತರಂಗ ದಿನಪತ್ರಿಕೆ)
ಇಂತಹದೊಂದು ಸಾಲನ್ನು ಬರೆದು ಸುಮಾರು ದಿನವಾಯಿತು ಯಾವುದೇ ಕಾರಣಕ್ಕೂ ಎಲ್ಲೋ ಮೋಸ ಹೋಗಬೇಡಿ. ಹಣ ಹಾಗೂ ಇತರೆ ಯಾವುದೇ ವಿಚಾರವಾಗಿರಲಿ, ಯಾರ ಮುಂದೆಯೂ ಯಮಾರದಂತೆ ವರ್ತಿಸಿ ನೀವು ನಿಮ್ಮಷ್ಟಕ್ಕೆ ಇದ್ದರೂ ಸಹ ಬಿಡದ ಕೆಲಸಗಳು ಕೆಲ ಕೆಟ್ಟ ಖದೀಮ ಮನಸುಗಳು ನಿಮ್ಮ ಜೊತೆ ಸುಳಿದಾಡುತ್ತಲೇ ಇರುತ್ತವೆ. ಅವಕಾಶ ಸಿಕ್ಕಾಗ ನಿಮ್ಮನ್ನೇ ಗೆಬರಿಕೊಂಡು ನೆಕ್ಕಿ ಬಿಡುತ್ತವೆ ಎಂಬ ಸಿಹಿ ಸತ್ಯವನ್ನು ನಿಮ್ಮ ಮುಂದಿಡುವ ಒಂದು ಚಿಕ್ಕ ಹೇಳಿಕೆಯದು.
ಈ ಗಾದೆ ಮಾತನ್ನು ನಂಬಿಕೊಂಡು ನಾವು ಒಳ್ಳೆಯವರು ಎಂದು ತೋರಿಸಿಕೊಳ್ಳಲು ಎಲ್ಲಿಯೂ ಯಾಮಾರಬೇಡಿ. ನಿಮ್ಮನ್ನು ನಾನು ನಂಬೋದಿಲ್ಲ, ನನ್ನನ್ನು ನೀವು ನಂಬಬೇಡಿ ಇಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು ಕೆಲವೇ ಕೆಲವು ನೀಚ ಮನಸಿನ ಹುಳುಗಳಿಂದ ಎಂದರೆ ತಪ್ಪಾಗಲಿಕ್ಕಿಲ್ಲ ಇದು ವಾಸ್ತವದ ಸತ್ಯ.
ಇಲ್ಲಿ ತುಂಬಾ ಜನ ಇದರ ಬಗ್ಗೆ ಮಾತನಾಡುವುದಿಲ್ಲ. ಚಡ್ಡಿಯ ಮೇಲೆ ಬಿದ್ದ ಕೊಳೆ ಇದು ಎಂದು ಕೊಡವಿಕೊಂಡು ಬಿಡುತ್ತಾರೆ. ಆದರೆ ಅವರ ನಿಯತ್ತಿನ ಕಾಸು ಆಸ್ತಿ ಕಂಡೂರು ಪಾಲಾಗುವುದು ನಿಜಕ್ಕೂ ದುರಂತದ ಸಂಗತಿಯೇ ಹೌದು.
ಇಂದಿನ ವಾಸ್ತವಗಳಲ್ಲಿ ಕೇವಲ ತನ್ನಷ್ಟಕ್ಕೆ ತಾನಿದ್ದರೂ ಯಾಮಾರಿಸುವ , ಮುಂಡಮೋಚುವ ಸಾಕಷ್ಟು ಕಿಡಿಗೇಡಿ ಮನಸುಗಳು ನಮ್ಮ ಮಗ್ಗುಲಲ್ಲೇ ಡಿಸ್ಕೋ ಡ್ಯಾನ್ಸ್ ಮಾಡುತ್ತಿದೆ. ಹಾಗಾಗಿ ಅತ್ಯಂತ ಎಚ್ಚರಾವಸ್ಥೆಯಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು ಅತ್ಯಂತ ಅಗತ್ಯ.
ಇನ್ನೊಂದು ದುರಂತ ಗೊತ್ತೇ?. ಕೆಲವರು ಬೆದರಿಸಿ ಬ್ಲಾಕ್ ಮೇಲ್ ಮಾಡಿ ವಸೂಲಿ ಮಾಡುವ ದಂದೆಗೆ ಇಳಿದಿದ್ದಾರೆ. ಅಂದರೆ ನನಗವರು ಬೆದರಿಸಿದಾಗ ಹೆದರುತ್ತಾರೆ ಎಂಬ ಕೆಟ್ಟ ಮನವಿದೆ ಅಲ್ಲಿ. ಹುಲಿಯಂತೆ ವರ್ತಿಸಿ, ಸಿಂಹದಂತೆ ಗರ್ಜಿಸಿ, ಆನೆಯಂತೆ ತಾಳ್ಮೆಯಿಂದಲೇ ತುಳಿದು ಹಾಕುವ ಮನೋಸ್ಥಿತಿ ಬೆಳೆಸಿಕೊಳ್ಳಿ.
ಅಂಕಣಗಳ ಸಮಗ್ರ ಮಾಹಿತಿ ಓದಿ
ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಒಂಬತ್ತನೇ ಅಂಕಣದ ಮತ್ತೊಂದು ವಿಶೇಷ. ಇಂದಿನ ಎರಡು ಡಿಫರೆಂಟ್ ವಿಷಯ ಓದಿ, ಅಧಿಕಾರ, ಹಣಲಾಲಸೆಗೆ ರಾಜಕಾರಣ, ಹತ್ ಪೈಸೆ ಬಿಚ್ವಬೇಡ್ರಿ ಓದಿ.
ನೆಗೆಟಿವ್ ಥಿಂಕಿಂಗ್ ಕಾಲಂಗೆ Starting ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು,
ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.
ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಹಾಗೂ “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಕೆಟ್ಟ ಕಣ್ಣುಗಳಿಂದ ದೂರ ಇರ್ರಿ”
ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
– ಸಂ