ಶಿವಮೊಗ್ಗ,ಜು.೨೬:ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜು.೨೮ರ ಸಂಜೆ ೪ಕ್ಕೆ ಕುವೆಂಪು ರಂಗಮಂದಿರದಲ್ಲಿ ಅಭಿಮಾನದ ಸನ್ಮಾನ ಹಾಗೂ ಸಾರ್ಥಕ ಷಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸದಸ್ಯ ಎಂ.ಎಸ್. ಯೋಗೇಶಪ್ಪ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಾಣೆಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನಬಸಪ್ಪ,

ಡಾ. ಧನಂಜಯ ಸರ್ಜಿ, ಮಾಜಿ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನು ಸನ್ಮಾನಿಸಲಾಗುವುದು. ಹಾಗೂ ನಿವೃತ್ತಿಗೊಳ್ಳುತ್ತಿರುವ ಹಾಗೂ ಸಂಘದ ಸಂಸ್ಥಾಪಕ ಮತ್ತು ಅಧ್ಯಕ್ಷ ಮೆಸ್ಕಾಂ ವೃತ್ತದ ಅಧೀಕ್ಷಕ ಇಂಜಿನಿಯರ್ ಎಸ್.ಜಿ.ಶಶಿಧರ್ ಅವರನ್ನು ಸಹ ಸನ್ಮಾನಿಸಲಾಗುವುದು ಎಂದರು.


ಈ ಸಮಾರಂಭಕ್ಕೆ ಶ್ರೀಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘ ಹಾಗೂ ಕಾಯಕ ಜ್ಯೋತಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಮತ್ತು ಸಮಾಜದ ವಿವಿಧ ಸಂಘಟನೆಗಳ ಸಹಕಾರವಿದೆ ಎಂದರು.


ಸಮಾರಂಭಕ್ಕೂ ಮುನ್ನ ಗೀತಾಗಾಯನ ಕಾರ್ಯಕ್ರಮದಲ್ಲಿ ಎಂದು ಮರೆಯದ ಹಾಡುಗಳನ್ನು ಭದ್ರಾವತಿಯ ಚಿಂತನಾ ಕಲಾ ವೃಂದದವರು ಹಾಡಲಿದ್ದಾರೆ ಎಂದರು.


೯ ವರ್ಷ ಪೂರೈಸಿರುವ ಸಂಘವು ಸಮಾಜದ ಜನತೆಗೆ ಹಾಗೂ ಇತರೆ ಸಮಾಜದ ಜನರಿಗೆ ಹಲವಾರು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ವಿದ್ಯುತ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲ್ಯದಲ್ಲೇ ಎರಡು ಕಾಲು ಕಳೆದುಕೊಂಡಿರುವ ನೌಕರಳಿಗೆ ಒಂದು ಲಕ್ಷ ರೂ.ನ ಬ್ಯಾಟರಿ ಚಾಲಿತ ಮೋಟರೈಸ್ಟ್‌ವ್ಹೀಲ್ ಛೇರ್‌ನ್ನು ನೀಡಿದ್ದು, ಶಿಕಾರಿಪುರದ ಶ್ರೀ ಮಾತೆ ಗಂಗಾಭಿಕೆ ಆಶ್ರಮಕ್ಕೆ ಮತ್ತು

ತರಳಬಾಳು ಬೃಹನ್ಮಠ ಸಿರಿಗೆರೆಯ ದಾಸೋಹ ಭವನಕ್ಕೆ ತಲಾ ಒಂದು ಲಕ್ಷ ರೂ. ದೇಣಿಗೆ, ವಿದ್ಯುತ್ ಅಪಘಾತಕ್ಕೀಡಾದ ನೌಕರ ಹಾಲಸ್ವಾಮಿ ಅವರಿಗೆ ಒಂದು ಲಕ್ಷ ರೂ. ಧನಸಹಾಯ, ಕವಲೆ ದುರ್ಗ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು ೩೨ ವಠುಗಳಿಗೆ ಒಂದು ಲಕ್ಷ ರೂ. ಮೌಲ್ಯದ ದಾಸೋಹ ಸಾಮಾಗ್ರಿ, ಇಲಾಖೆಯ ಗುತ್ತಿಗೆ ನೌಕರನ ಮಗನಿಗೆ ಕಣ್ಣಿನ ದೋಷವಿದ್ದು ಅದರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಗಿದೆ. ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಎಂ.ಎಸ್.ಕೆಂಚರಾಜ್, ಕೊಟ್ರೇಶ್, ಎಸ್.ನಿರಂಜನ ಸ್ವಾಮಿ, ಡಿ.ಬಿ. ರವಿಕುಮಾರ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!