ಜಾಲತಾಣದ ಪಟ
ಶಿವಮೊಗ್ಗ, ಜು.25:
ಈ ಶಿಕ್ಷಕರ ವರ್ಗಾವಣೆ ವಿಷಯದ ನಡುವಿನ ನೋವು ನಿಜವಾಗಿಯೂ ಯಾರಿಗೂ ಅರ್ಥ ಆಗಿಲ್ಲ. ಕಪಲ್ ಕೇಸ್ ಹೆಸರಲ್ಲಿ ಸರ್ಕಾರಿ ನೌಕರಿ ಹೊಂದಿದ ಗಂಡ ಹೆಂಡ್ತೀ ಆಟ ಎನ್ನುವಂತೆ ಮಾಡಿ ಮುಂಡಾಮೋಚಿರುವ ಇಡೀ ವ್ಯವಸ್ಥೆಯ ರೂವಾರಿಗಳಿಗೆ ರಾಜ್ಯಾದ್ಯಂತ ಶಿಕ್ಷಕ ವರ್ಗ ಸಿಡಿದೆದ್ದಿದೆ.


ಒಂದ್ ಸಾರೀ ವರ್ಗಾವಣೆ ಅಂದು , ನಾಲ್ಕೈದು ಸಾರಿ ಹೆಚ್ಚುವರಿ ಅಂದು ನಾಟಕ ಮಾಡೋ ಸ್ಕೀಮ್ ಬೇಡ.ಪರಸ್ಪರ ಹೆಸರಲ್ಲಿ ಗಂಡ ಹೆಂಡ್ತಿಯರು ಮಾಡೋ ಸ್ಕೀಮ್ ನೋಡ್ರೀ ಎಂಬುದು ರಾಜ್ಯಾದ್ಯಂತ ಶಿಕ್ಷಕರ ಆಗ್ರಹ.
ಶಿವಮೊಗ್ಗ ಸೇರಿದಂತೆ ಕಪಲ್ ಕೇಸ್ ಇಲ್ಲದ ಶಿಕ್ಷಕರು ಅದರಲ್ಲೂ ಈಗಿನ ಜಿಪಿಟಿ ಹೆಸರಿನ ಹೊಸ ಪ್ಲಾನ್ ನಡುವೆ ಇಡೀ ಶಿಕ್ಷಕ ಸಮುದಾಯ ಸಿಡಿದೆದ್ದಿರುವ ಸಂಗತಿ ಸಚಿವ ಮಧು ಬಂಗಾರಪ್ಪ ಅವರಿಗೆ ಗೊತ್ತಾಗಿದೆ. ಏನೂ ಮಾಡಲಾಗದೇ ಕೈ ಹಿಸುಕಿಕೊಳ್ತಿದ್ದಾರೆ.


ಈ ಎಲ್ಲದಕ್ಕೂ ಕಾರಣ ಹಿಂದಿದ್ದ ಅಧಿಕಾರಿ, ಅವತ್ತಿನ ವ್ಯವಸ್ಥೆ. ಗಂಡ ಹೆಂಡ್ತಿ‌ ಶಿಕ್ಷಕರಾಗಿ ಇಲ್ಲೇ ಅನ್ಯ ದುಡಿಮೆ ಮಾಡಿಕೊಂಡಿರಲು ಅವಕಾಶ ನೀಡಿದ್ದಾರಾ? ಪಾಪ ಎನ್ನುವಂತಿರುವ ಅನ್ಯ ಶಿಕ್ಷಕರ ಕಥೆ ಏನು? ಯಾರಿಗೆ ಯಾವುದಕ್ಕೆ ಮಣೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ
ಎಸ್ ಷಾಡಾಕ್ಷರಿ ಅವರಿಗೆ ಈ ಬಗ್ಗೆ ಎಲ್ಲಾ ಗೊತ್ತಿದ್ರೂ ನಾಟ್ಕ ಮಾಡೋದೇಕೇ? ಪರ್ಸನಲ್ ಇಲ್ಲಿ ಕಾರಣನಾ? ಶಿಕ್ಷಕ ಮನಸುಗಳಿಲ್ಲಿ ಸತ್ತವಾ?
ಶಿವಮೊಗ್ಗದ ಸುದ್ದಿ
ವರ್ಗಾವಣೆ ಕೌನ್ಸಲಿಂಗ್ ನಿಲ್ಲಿಸು

ವಂತೆ ಪ್ರಾಥಮಿಕ ಶಾಲಾ ಶಿಕ್ಷಕರರಿಂದ ಪ್ರತಿಭಟನೆ
ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಇಂದು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ.
ಮೀನಾಕ್ಷಿ ಭವನದ ಪಕ್ಕದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆಯುತ್ತಿದ್ದು, ಇಲ್ಲಿ ವರ್ಗಾವಣೆಗಾಗಿ ಕೌನ್ಸಿಲಿಂಗ್ ಗೆ ಬಂದ ಪ್ರಾಥಮಿಕ ಶಿಕ್ಷಕರು ಪ್ರತಿಭಟನೆಗೆ ಇಳಿದು ಕೌನ್ಸಿಲಿಂಗ್ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.


ಕಳೆದ 25 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಹೊರ ಊರುಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದು ಇವರೆಲ್ಲರೂ ವರ್ಗಾವಣೆಗಾಗಿ ಚಾತಕ ಪಕ್ಷಿಯಂತೆ ಕಾಯತ್ತಿದ್ದರೂ ವರ್ಗಾವಣೆ ಮಾತ್ರ ದೊರೆತಿಲ್ಲ ಎಂದು ಶಿಕ್ಷಕರು ಅರೊಪಿಸಿದ್ದಾರೆ.
ನಿಲ್ಲಿಸಿ ನಿಲ್ಲಿಸಿ ಕೌನ್ಸಿಲಿಂಗ್ ನಿಲ್ಲಿಸಿ, ಅಯ್ಯೋಯ್ಯೋ.. ಅನ್ಯಾಯ ಎಂದು ಶಿಕ್ಷಕರು ಘೋಷಣೆ ಕೂಗಿದ್ದಾರೆ.
6,7,8 ನೇ ತರಗತಿಗಳಿಗೆ ಪ್ರಾಥ

ಮಿಕ ಶಿಕ್ಷಕರನ್ನೇ ಪಾಠ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರೌಢಶಾಲೆಯಲ್ಲಿ ಶಿಕ್ಷಕರ ಹುದ್ದೆಯನ್ನ ನೇಮಕ ಮಾಡಿಲ್ಲ. ಹಾಗಾಗಿ 2017 ರಲ್ಲಿ ಜಾರಿಗೆ ಆದ ಸಿ ಅಂಡ್ ಆರ್ ತಿದ್ದುಪಡಿ ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
ಇದು ವರೆಗೂ 271 ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆದಿದೆ. ಈ ಕೌನ್ಸಿಲಿಂಗ್ ನ್ನ ಪ್ರತಿಭಟನಾಕಾರರು ನಿಲ್ಲಿಸುವಂತೆ ಶಿಕ್ಷಕರು ಆಗ್ರಹಿಸಿದರೂ ಕೌನ್ಸಿಲಿಂಗ್ ಮುಂದುವರೆದಿದೆ.ಮುಗಿಯುತ್ತಲೂ ಇದೆ.ಶಿಕ್ಷಕರ ನೋವು ಮಾತ್ರ ಹಾಗೇ ಇದೆ.

By admin

ನಿಮ್ಮದೊಂದು ಉತ್ತರ

error: Content is protected !!