ಸಾಗರ(ಶಿವಮೊಗ್ಗ),ಜುಲೈ.೧೨:ಸಾಗರ ಪಟ್ಟಣದಲ್ಲಿ ನಿರ್ಮಾಣ ಹಂತದ ಸಣ್ಣಮನೆ ಸೇತುವೆ ಫಿಲ್ಲರ್‌ಗೆ ಅಳವಡಿಸಲಾಗಿದ್ದ ಸೆಂಟರಿಂಗ್ ಪೋಲ್ಸ್‌ಗಳ ತಳಪಾಯದ ಸಿಮೆಂಟ್ ಬೆಡ್ ಕುಸಿದಿದೆ.ಕಳೆದ ವಾರ ಸುರಿದ ಆರಿದ್ರಾ ಮಳೆಯ ರಭಸಕ್ಕೆ ಇಕ್ಕೇರಿ ವ್ಯಾಪ್ತಿಯಿಂದ
ವಿನೋಬನಗರದ ಹಳ್ಳ ತುಂಬಿ ಗಂದ್ದೆಯಲ್ಲಿ ಪ್ರವಾಹದ ಮಾದರಿಯಲ್ಲಿ ನೀರು ಉಕ್ಕಿರುವ ಕಾರಣ ಸೇತುವೆ ಕಾಮಗಾರಿ ಸಲಕರಣೆಗಳು ನೀರಿನಲ್ಲಿ ಕೊಚ್ಚಿ ವರದಾ ನದಿ ಸೇರಿರುವ ಘಟನೆ ನಡೆದಿದೆ.
ಸೇತುವೆ ನಿರ್ಮಿಸಲು ಮೂರು ಬೃಹತ್ ಗಾತ್ರದ ಫಿಲ್ಲರ್‌ಗಳಲ್ಲಿ ಎರಡು ಅಂಚಿನ ಫಿಲ್ಲರ್‌ಗಳು ಹಲವು ದಿನಗಳ ಹಿಂದೆಯೇ ಗಟ್ಟಿಯಾಗಿದ್ದವು.ಸೇತುವೆ ನಡುವಿನ ಪ್ರಮುಖ ಫಿಲ್ಲರ್ ನಿರ್ಮಾಣ ವಿಳಂಬವಾಗಿರುವ ಕಾರಣ ಮಳೆಗಾಲದಲ್ಲಿ ಫಿಲ್ಲರ್ ತುದಿಯಲ್ಲಿ ರಸ್ತೆಯ ಅಗಲಕ್ಕೆ ಫಿಲ್ಲರ್‌ಗೆ ಕಾಂಕ್ರೀಟ್‌ನಿಂದ ನಡುವಿನಿಂದ ಎರಡು ದಿಕ್ಕಿದೆ ಉದ್ದನೆಯ ಕೈಗಳನ್ನು ನಿರ್ಮಿಸಿ ಕ್ಯೂರಿಂಗ್ ಸಮಯ
ಪೂರ್ಣಗೊಳ್ಳುವವರೆಗೂ ಸೇತುವೆಗೆ ಸಪೋರ್ಟ್‌ಗೆ ಅಳವಡಿಸಲಾಗಿದ್ದ ಮರದ ಪೋಲ್ಸ್‌ಗಳ ತಳಪಾಯದಲ್ಲಿ ಹಾಕಲಾಗಿದ್ದ ಸಿಮೆಂಟ್ ಕಾಂಕ್ರೀಟ್ ಬೆಡ್ ಬಿರುಕುಬಿಟ್ಟು ಕುಸಿದಿರುವ ಘಟನೆ ನೋಡಬಹುದಾಗಿದೆ.
ಮೂರು ಫಿಲ್ಲರ್‌ಗಳ ಪೌಂಡೆಷನ್ ಗಟ್ಟಿಯಾಗಿರುವ ಕಾರಣ ಸೇತುವೆ ನಿರ್ಮಾಣಕ್ಕೆ ಯಾವುದೇ ತೊಂದರೆಯಿಲ್ಲ.ಹಾಗೂ ಇನ್ನುಳಿದ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮತ್ತು ಹೆದ್ದಾರಿ ಪ್ರಾಧಿಕಾರದ ಟೆಂಡರ್ ನಿಯಮಗಳಂತೆ ನಿರ್ಮಿಸುವ ಹೊಣೆಗಾರಿಕೆ
ಗುತ್ತಿಗೆ ಕಂಪನಿಯ ಮೇಲಿದೆ.ಮಳೆಯಿಂದ ಈಗಾಗಲೇ ಆಗಿರುವ ತೊಂದರೆ ಮತ್ತು ಮುಂದಿನ ಕಾಮಗಾರಿಯಲ್ಲಿ ವಹಿಸಬೇಕಾದ ಜಾಗೃತೆಯ ಕುರಿತು ಕಾಮಗಾರಿಯ ಹೊಣೆಗಾರಿಕೆಯಿರುವ ಇಂಜಿನಿಯರ್ ತೀವ್ರ ನಿಗಾವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮಗಾರಿ ನಿರ್ವಹಿಸುವ ಗುತ್ತಿಗೆ ಕಂಪನಿಯ ದಿವ್ಯ ನಿರ್ಲಕ್ಷ್ಯದ ಫಲವಾಗಿ ಪ್ರತಿನಿತ್ಯ ಸಣ್ಣಮನೆ ಸೇತುವೆ ನಿರ್ಮಾಣದ ಪಕ್ಕದ ಸೇತುವೆಯಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ಅಡಚಣೆಯಾಗುತ್ತಿದೆ.ಬಾರೀ ವಾಹನಗಳ ಸಂಚಾರದಿಂದ ಮಳೆಗಾಲದಲ್ಲಿ ಗುಂಡಿ ಬೀಳುತ್ತಿದ್ದರೂ ತುರ್ತು ಸರಿಪಡಿಸುವ ಗೋಜಿಗೆ ಹೋಗದ ಗುತ್ತಿಗೆ ಕಂಪನಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಕಾಮಗಾರಿಯ ಹಂತದಲ್ಲಿ ಮಳೆಗಾಲದ ಪರಿಣಾಮ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿನ ಕೆಸರು ನೀರು ಸಿಡಿದು ಅವಾಂತರವಾಗುತ್ತಿದೆ.ತುರ್ತು ಜೆಲ್ಲಿ ಸಿಮೆಂಟ್ ಮಿಶ್ರಿತ ಕಾಂಕ್ರಿಟ್‌ನಿಂದ ರಸ್ತೆಯನ್ನು ಕಾಲಕಾಲಕ್ಕೆ ಸರಿಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಾಗರದ ಉಪವಿಭಾಗಾಧಿಕಾರಿಗಳು,ಶಾಸಕರು ಕ್ರಮವಹಿಸಲಿ ಎಂದು ಜನ ಒತ್ತಾಯಿಸಿದ್ದಾರೆ.