ಶಿವಮೊಗ್ಗ, ಜು.11:
ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅಷ್ಟೊಂದು ಬಡತನ ಬಂದಿದೆಯಾ? ಕನಿಷ್ಠ ಬೆಲೆಬಾಳುವ ಗಟ್ಟಿಮುಟ್ಟಾದ ಇಡಬಹುದಾದ ಶಾಶ್ವತವಾಗಿ ದಾಖಲೆಯನ್ನು ರೂಪಿಸಿಕೊಳ್ಳಬಹುದಾದ ಪ್ರಮಾಣ ಪತ್ರವನ್ನು ಕೊಡುವ ಶಕ್ತಿ ಇಲ್ಲವೇ? ಇಲ್ಲ ಅದನ್ನು ಮಾಡುವಷ್ಟು ತಾಳ್ಮೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.


ನಿನ್ನೆ ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಜಿಲ್ಲೆಯಲ್ಲಿ 100ರಷ್ಟು ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ ಗೌರವಿಸುವ ಮಹತ್ತರವಾದ ಕಾರ್ಯಕ್ರಮವನ್ನು ಮಾಡಿದ್ದು ಸರಿಯಷ್ಟೆ. ಶಿಕ್ಷಣ ಸಚಿವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.


ಬಹುತೇಕ ಶೇಕಡ ನೂರರಷ್ಟು ಫಲಿತಾಂಶ ಪಡೆದ ಸರ್ಕಾರಿ ಹಾಗೂ ಅನುದಾನಿತ, ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು, ಮುಖ್ಯೋಪಾಧ್ಯಾಯರು ಪ್ರಮಾಣ ಪತ್ರವನ್ನು ಶಿಕ್ಷಣ ಸಚಿವದಿಂದ ಸ್ವೀಕರಿಸಿದರು.


ಪ್ರಮಾಣ ಪತ್ರದಲ್ಲಿರುವ ಅಂಶ ನಿಜಕ್ಕೂ ಶಾಲೆಗೆ ಕೀರ್ತಿ ತರುವಂತಹದಾಗಿದೆ. ಆದರೆ ಯಾವುದೋ ಎಲ್‌ಕೆಜಿ ಮಕ್ಕಳಿಗೆ ಸಹ ಅಂತಹ ಲದ್ದಿಯಾದ ಪ್ರಮಾಣ ಪತ್ರವನ್ನು ನೀಡುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದ್ದು.
ಕನಿಷ್ಠ ದಾಖಲೆಯಾಗಿ ಇಡಬಲ್ಲ ಆ ಪ್ರಮಾಣ ಪತ್ರವನ್ನು ಒಂದು ಸಂಗ್ರಹ ಯೋಗ್ಯ ವಸ್ತುವನ್ನಾಗಿ ಮಾಡಿಸಿಕೊಡಬಹುದಿತ್ತು. ಅಷ್ಟಕ್ಕೂ ಕಾಸಿಲ್ಲ ಎಂದರೆ ಶಿಕ್ಷಣ ಇಲಾಖೆ ಅಷ್ಟೊಂದು ಬಡತನದ್ದಾ ಎಂಬುದು ಗಂಭೀರ ಪ್ರಶ್ನೆ

By admin

ನಿಮ್ಮದೊಂದು ಉತ್ತರ

error: Content is protected !!