ಹೊಸನಗರ: ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರಿಂದ ತಾಲ್ಲೂಕಿನ ನಿಷ್ಠಾವಂತ ಕಾರ್ಯಕರ್ತರು ದೂರ-ದೂರ ಸರಿಯುತ್ತಿದ್ದಾರೆ ಇದರಿಂದ ಮುಂದಿನ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಹಾಗೂ ಪಟ್ಟಣದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣರವರಿಗೆ ಮುಜುಗರ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಜನಗಳ

ಜೊತೆಗೆ ಬೆರೆಯುವ ಜನರ ಮಧ್ಯೆ ಇರುವ ಯಾವುದೇ ಅಹಂಕಾರವಿಲ್ಲದ ಪ್ರತಿಯೊಬ್ಬರನ್ನು ಮಾತಾನಾಡಿಸುವ ಶಾಸಕರಿಗೆ ಒಂದೇರಡು ಹಿಂಬಾಲಕರಿಂದ ತಡೆಯಾಗುತ್ತಿದೆ ಎಂದು ಹೇಳಲಾಗಿದೆ ಇಂದಿನಿಂದಲೇ ಸರಿಮಾಡಿಕೊಂಡರೇ ಕಾಂಗ್ರೇಸ್ ಪಕ್ಷಕ್ಕೂ ಹಾಗೂ ಬೇಳೂರು ಗೋಪಾಲಕೃಷ್ಣವರವರಿಗೆ ಒಳ್ಳೆಯದು ಎಂದು ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರು ಈಗಾಗಲೇ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ


ಮನಸ್ತಾಪವೇಕೆ?: ವಿಧಾನ ಸಭೆ ಚುನಾವಣೆ ಮುಗಿದಿದೆ ಲೋಕಸಭೆ ಚುನಾವಣೆ ಮುಗಿದಿದೆ ನಂತರ ಮತದಾರರಿಗೆ ಅಭಿನಂದನೆ ಸಲ್ಲಿಸಲು ಗ್ರಾಮ-ಗ್ರಾಮಗಳಲ್ಲಿ ಹೋಬಳಿ ಮಟ್ಟದಲ್ಲಿ ಅಭಿನಂದನೆ ಸಭೆಯನ್ನು ಎರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಅಭಿನಂದನೆ ಸಭೆಯಲ್ಲಿ ಕಾಂಗ್ರೇಸ್ ಪಕ್ಷದ ಎಲ್ಲ ನಿಷ್ಠಾವಂತ ಕಾರ್ಯಕರ್ತರು ಬಾಗವಹಿಸಿದ್ದರು ಈ ಸಮಾರಂಭದಲ್ಲಿ ಮಾತಾನಾಡಿದ ಬೇಳೂರುರವರು ನಿಮಗೆ ಯಾವುದೇ ಕೆಲಸವಾಗಬೇಕಾದರೇ ಯಾವ ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗುವುದು ಬೇಡ ನೇರವಾಗಿ ಹೊಸನಗರದ ತಾಲ್ಲೂಕು ಪಂಚಾಯತಿಯಲ್ಲಿ ಶಾಸಕರ ಕೊಠಡಿಯಿದೆ ಅಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಇರುತ್ತಾರೆ ನಿಮ್ಮ ಸಮಸ್ಯೆಯನ್ನು ಹೇಳಿ ಅವರು ಬಗೆ ಹರಿಸುತ್ತಾರೆ ಇದರ ಜೊತೆಗೆ ನೇರವಾಗಿ ಸಾಗರದ ನಮ್ಮ ಮನೆಗೆ ಬನ್ನಿ ನಾನು ನೇರವಾಗಿ ಬಗೆಹರಿಸುತ್ತೇವೆ ಎಂದು ಬಾಷಣ ಮಾಡಿದ್ದಾರೆ ಇದರಿಂದ ನಿಷ್ಟಾವಂತ ಕಾಂಗ್ರೇಸ್ ಕಾರ್ಯಕರ್ತರಿಗೆ ಬೇಸರವಾಗಿದೆ ಚುನಾವಣೆ ಗೆಲ್ಲಿಸುವವರೆವಿಗೆ ನಾವು ಬೇಕು ನಮ್ಮನ್ನು ಯಾವ ಲೆಕ್ಕಕ್ಕೂ ಇಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ಬೇಸರಿಸಿಕೊಂಡಿದ್ದಾರೆ


ಶಾಸಕರ ಕೊಠಡಿಯಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಗೆ ಕಿಮ್ಮತ್ತಿಲ್ಲ: ನಿಷ್ಟಾವಂತ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಶಾಸಕರ ಕೊಠಡಿಗೆ ಹೋದರೇ ನಮಗೆ ಸೌಜನ್ಯಕ್ಕಾದರೂ ಮಾತಾನಾಡಿಸುವವರಿಲ್ಲ ಅವರದೇ ಒಂದು ಟೀಂ ಇದೆ ಅವರು ಬಿಟ್ಟರೇ ಬೇರೆ ಯಾರ ಗುರುತೆಯಿಲ್ಲ ಎಂಬಂತೆ ಶಾಸಕರ ಆಪ್ತರು ವರ್ತಿಸುತ್ತಿದ್ದಾರೆ ಎಂದು ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ ಶಾಸಕರ ಬಳಿ ನೇರವಾಗಿ ಹೇಳಿ ಬಂದರೇ ಅದಕ್ಕೂ ಕೊಂಕೋ ಮಾತಾನಾಡುತ್ತಾರೆ

ನಾವು ಹೇಳಿದರೇ ಮಾತ್ರ ಶಾಸಕರು ಕೆಲಸ ಮಾಡಿಕೊಡುವುದು ( ಶಂಖದಿಂದ ತೀರ್ಥ ಹೋಗಬೇಕು) ಯಾವುದಾದರೂ ಕೆಲಸಕ್ಕೆ ಶಾಸಕರು ಹೊಸನಗರಕ್ಕೆ ಬಂದರೇ ಕಾಂಗ್ರೇಸ್ ಕಛೇರಿಗೆ ಬರುವುದನ್ನೆ ಮರೆತಿದ್ದಾರೆ ಎಂದು ಹೇಳಲಾಗಿದ್ದು ಹೊಸನಗರದ ಕಾರ್ಯಕ್ರಮಕ್ಕೆ ಬಂದರೇ ಶಾಸಕರು ಮತ್ತು ಅವರ ಟೀಂ ಬಿಟ್ಟರೇ ಕಾಂಗ್ರೇಸ್ ಕಾರ್ಯಕರ್ತರು ಇತ್ತಿಚೇಗೆ ಮಾಯವಾಗಿದ್ದಾರೆ?


ಬಿಜೆಪಿ ಬೆಳೆಯುತ್ತಿದೆ: ಒಂದು ವರ್ಷದ ಅವಧಿಯಲ್ಲಿ ಕೆಲವು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಬಿಜೆಪಿಯತ್ತಾ ಮುಖ ಮಾಡುತ್ತಿದ್ದು ಇದಕ್ಕೆ ಉದಾಹರಣೆ ಲೋಕಸಭೆ ಚುನಾವಣೆಯೇ ಸಾಕ್ಷಿಯಾಗಿದೆ ಮುಂದುವರೆಯಲು ಬಿಟ್ಟರೇ ಮುಂದಿನ ದಿನದಲ್ಲಿ ತಮಗೆ ಕಷ್ಟಕರವಾಗಬಹುದು ಕಾಂಗ್ರೇಸ್ ಪಕ್ಷದ ಎಲ್ಲ ಕಾರ್ಯಕರ್ತರನ್ನು ಇನ್ನೂ ಮುಂದಾದರೂ ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲೀ


ಹೆಚ್.ಎಸ್.ನಾಗರಾಜ್

By admin

ನಿಮ್ಮದೊಂದು ಉತ್ತರ

error: Content is protected !!