ಶಿವಮೊಗ್ಗ : ಪ್ರತಿನಿತ್ಯ ಜನರ ಜೀವ ಉಳಿಸಲು ಸೇವೆ ಸಲ್ಲಿಸುವ, ಒಂದೊಳ್ಳೆ ಕಾಯಕದಲ್ಲಿ ತೊಡಗಿರು ವಂತಹ,ಆಶಾ ಕಾರ್ಯಕರ್ತೆ ರೇಖಾ (35) ಅವರ ತಲೆಗೆ  ನಿನ್ನೆ ನಡೆದ ಅಪಘಾತದಲ್ಲಿ  ತೀವ್ರ ಪೆಟ್ಟಾಗಿದ್ದು, ತಲೆಯ ಪ್ರಮುಖ ನರ ತುಂಡಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.


ಪತಿ ಕೂಲಿ ಕೆಲಸ ಮಾಡಿ ಮನೆ ತೂಗಿಸಿಕೊಂಡು ಹೋಗುತ್ತಿದ್ದು, ರೇಖಾ ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಎಲ್ಲೆಡೆ ಡೇಂಗ್ಯೂ ಹರಡಿರುವ ಕಾರಣ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದ ತಂಡದಲ್ಲಿ ರೇಖಾ ಕೂಡ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ದೆಹಲಿಯ ಸಮಾವೇಶದಲ್ಲಿ ರೇಖಾ ಅವರಿಗೆ ಒಳ್ಳೆಯ ಆಶಾ ಕಾರ್ಯಕರ್ತೆ ಅವಾರ್ಡ್ ಕೂಡ ಬಂದಿದೆ.


ನಿನ್ನೆ ಮಧ್ಯಾಹ್ನ ಮನೆಗೆ ಹೋಗಿ ಪುನಃ ಕೆಲಸಕ್ಕೆ ವಾಪಾಸು ಬರುವಾಗ ಅಪಘಾತ ಸಂಭವಿಸಿ ತೀವ್ರ ರಕ್ತ ಸ್ರಾವ ಆಗಿದೆ. ಕೂಡಲೆ ಸ್ಥಳೀಯರು ನಾರಾಯಣ ಹೃದಯಾಲಯಕ್ಕೆ ಅವರನ್ನು ಕರೆದೊಯ್ದಿದ್ದಾರೆ. ಅಪಘಾತದಿಂದ ತಲೆಯ ಮುಖ್ಯ ನರ ತುಂಡಾಗಿದ್ದು, ಚಿಕಿತ್ಸೆಗೆ ೮ಲಕ್ಷದವರೆಗೆ ವೆಚ್ಚ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಮನೆ ನಡೆಸುವುದೇ ಕಷ್ಟವಾಗಿರುವ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಇಲ್ಲದೆ ಜನರ ಜೀವ ಉಳಿಸುವ ಕಾಯಕ ಮಾಡುತ್ತಿರುವ ರೇಖಾಗೆ ವಿಧಿ ಇಂದು ಇಂತಹ ಸ್ಥಿತಿ ತಂದಿದೆ. ಆಸ್ಪತ್ರೆಗೆ ಸೇರಿಸಿದ ನಂತರ ರೇಖಾ ಜೊತೆಗಿನ ಆಶಾ ಕಾರ್ಯಕರ್ತರು ಹಣ ಹೊಂದಿಸಲು ಶ್ರಮಪಡುತ್ತಿ ದ್ದಾರೆ. ಇದು ನಿಜಕ್ಕೂ ಪುಣ್ಯದ ಕೆಲಸ.


ರೇಖಾ ಬದುಕಲು ಚಿಕಿತ್ಸೆಗೆ ಲಕ್ಷಾಂತರ ಹಣ ಹೊಂದಿಸಬೇಕಾಗಿದೆ ಅದಕ್ಕಾಗಿ ಶ್ರಮ ಪಡುತ್ತಿರುವ ಆಶಾ ಕಾರ್ಯಕರ್ತರ ಜೊತೆಗೆ ದಾನಿಗಳು ಕೈಜೋಡಿಸಬೇಕಾಗಿದೆ. ಜೊತೆಗೆ ಪ್ರಮುಖವಾಗಿ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಮುಂದೆ ಬಂದು ಆಕೆಯ ಬದುಕಿಗೆ ದಾರಿ ದೀಪವಾಗಬೇಕಾಗಿದೆ.

ಹಣ ಸಂದಾಯ ಮಾಡುವವರು ಪೋನ್ ಪೇ, ಗೂಗಲ್ ಪೇ ಮೊ. ನಂಬರ್ 9844157195 ಅಥವಾ ಪತಿ ವಿಶ್ವನಾಥ್ ಬ್ಯಾಂಕ್ ಆಫ್ ಬರೋಡ ಅಕೌಂಟ್ ನಂಬರ್ 89270100011322, ಐಎಫ್‌ಎಸ್‌ಸಿ ಕೋಡ್ ನಂ. BARBOVJSHSR ಇಲ್ಲಿಗೆ ಹಣ ಸಂದಾಯಿಸಲು ವಿನಂತಿಸಿದೆ. 

By admin

ನಿಮ್ಮದೊಂದು ಉತ್ತರ

error: Content is protected !!